ಶ್ರೀ ಕಾಶಿಮಠ ಸಂಸ್ಥಾನ ವೆಲ್‌ಫೇರ್ ಫಂಡ್‌ನ ವಾಟ್ಸಪ್‌ ಚಾನೆಲ್‌ ಲೋಕಾರ್ಪಣೆ

Upayuktha
0


ಮಣಿಪಾಲ: ಶ್ರೀ ಕಾಶೀಮಠ ಸಂಸ್ಥಾನ ವೆಲ್‌ಫೇರ್ ಫಂಡ್ ಸಂಸ್ಥೆಯ ಅಧಿಕೃತ ವಾಟ್ಸಪ್ ಚಾನೆಲ್ ಅನ್ನು ಇಂದು (ನ.5) ಸಂಸ್ಥೆಯ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.


ಸಂಸ್ಥೆಯ ಉಪಾಧ್ಯಕ್ಷ ಪಿ.ವಿ. ಶೆಣೈ ಹಾಗೂ ಕೋಟೇಶ್ವರ ಶ್ರೀಧರ ವಿಠಲ ಕಾಮತ್ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಿತು.


ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗುರುದೇವತಾ ಪ್ರಾರ್ಥನೆಯೊಂದಿಗೆ ಲೋಕಾರ್ಪಣೆ ಮಾಡಲಾಯಿತು. ಜಿಎಸ್‌ಬಿ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ಕೋರಿದೆ.




ಹಿನ್ನೆಲೆ:


1959ರಲ್ಲಿ ಶ್ರೀ ಕಾಶಿಮಠ ಸಂಸ್ಥಾನದ ಪರಮ ಸದ್ಗುರು, ಪ್ರಾತಃಸ್ಮರಣೀಯರು ಹಾಗೂ ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹದೊಂದಿಗೆ ಈ ಸಂಸ್ಥೆ ಪ್ರಾರಂಭಗೊಂಡಿತ್ತು.


ಸಂಸ್ಥೆಯು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿನ ಆರ್ಥಿಕ ಅಡಚಣೆಯಲ್ಲಿರುವವರಿಗೆ ಸಹಾಯ ಹಸ್ತ ನೀಡುತ್ತ ಬಂದಿದೆ. ಇದೀಗ ಸಂಸ್ಥೆಯ ಅಧಿಕೃತ ವಾಟ್ಸಪ್‌ ಚಾನೆಲ್‌ ಅನ್ನು ಕಾಶೀ ಮಠಾಧೀಶರಾದ ಶ್ರೀಮತ್ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪರಮ ಕೃಪಾಶೀರ್ವಾದದೊಂದಿಗೆ ಚಾಲನೆಗೊಳಿಸಲಾಗಿದೆ. ಇದರಿಂದ ಸಂಸ್ಥೆಯ ಕಾರ್ಯನಿರ್ವಹಣೆಗೆ ಮತ್ತಷ್ಟು ಬಲ ಬಂದಿದೆ.



Post a Comment

0 Comments
Post a Comment (0)
To Top