ಗಮನ ಸೆಳೆದ ಶ್ರೀ ಕೃಷ್ಣ ತುಲಾಭಾರ: ಸಿಂಧು ಹೆಗಡೆ ಅಮೋಘ ಅಭಿನಯ

Upayuktha
0



ಬೆಂಗಳೂರು: ರಾಜಧಾನಿ ಜಯನಗರದ ವಿವೇಕ ಸಭಾಂಗಣದಲ್ಲಿ  ಶನಿವಾರದಂದು ಸಂಜೆ ನಡೆದ “ಶ್ರೀ ಕೃಷ್ಣ ತುಲಾಭಾರ” ನೃತ್ಯ ರೂಪಕ ಇತಿಹಾಸ, ಮಹಾಕಾವ್ಯ, ಕಲೆ ಹಾಗೂ ಶಾಸ್ತ್ರೀಯ ನೃತ್ಯದ ಅದ್ಭುತ ಸಮಾಗಮವಾಗಿತ್ತು. ಸಾಗರ ಮೂಲದ ವಿದುಷಿ ಸಿಂಧು ಆರ್.ಹೆಗಡೆ ಅವರ ಮನಮೋಹಕ ಪ್ರದರ್ಶನವು ತಮ್ಮ ಗುರುಗಳಾದ ‘ಕರ್ನಾಟಕ ಕಲಾಶ್ರೀ’ ಗುರು ಶ್ರೀ ಅಶೋಕ್ ಕುಮಾರ್ ಅವರ ಕಲಾ ಪಾಂಡಿತ್ಯ ಹಾಗೂ ಅದರ ಮಾರ್ಗದರ್ಶನಕ್ಕೆ ಸಾಕ್ಷಿಯಾಗಿತ್ತು. 




ನಾಟ್ಯಾಂಜಲಿಯ ಹಿರಿಯ ಹಾಗೂ ನುರಿತ ಕಲಾವಿದೆಯಾದ ಸಿಂಧು ಅವರ ಬಹು ಪಾತ್ರಗಳ ಚಿತ್ರಣ, ವಿಶೇಷವಾಗಿ ಸತ್ಯಬಾಮ ಮತ್ತು ರುಕ್ಮಿಣಿ, ಅವರ ಕಲಾತ್ಮಕತೆಯ ಒಂದು ರಮಣೀಯ ಪ್ರದರ್ಶನವಾಗಿತ್ತು, ಅವರ ಸೊಗಸಾದ ಅಭಿವ್ಯಕ್ತಿಗಳು ಮತ್ತು ಮನಮುಟ್ಟುವ ಭಾವನಾತ್ಮಕ ಅಭಿನಯ ಮನೋರಂಜಕವಾಗಿ ಪ್ರೇಕ್ಷಕರನ್ನು ಆಕರ್ಷಿಸಿದ್ದೂ ಅಲ್ಲದೆ, ಭಾಗವತದ ಸಾರವನ್ನು ಒಳಗೊಂಡ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಜೀವ ತುಂಬುವಂತಿದ್ದವು. ಸಿಂಧು ಅವರ ಸೂಕ್ಷ್ಮ ಮತ್ತು ಭಾವನಾತ್ಮಕ ನೃತ್ಯವು ನೋಡುಗರ ಗಮನ ಸೆಳೆದು, ತಡೆರಹಿತ ನಿರೂಪಣೆಯನ್ನು ಹೆಣೆಯುವಲ್ಲಿ ಯಶಸ್ವಿಯಾಯಿತು. ನೃತ್ಯ ಪ್ರದರ್ಶನವು ಪ್ರದರ್ಶಕ ಮತ್ತು ನೋಡುಗರ ನಡುವೆ ಸ್ಪಷ್ಟವಾದ ಸಂಪರ್ಕವನ್ನು ರೂಪಿಸಿ, ತುಂಬಿದ ಸಭಾಂಗಣವು ಕಲಾವಿದೆಯಾಗಿ, ನೃತ್ಯಗಾರ್ತಿಯಾಗಿ ಸಿಂಧು ಅವರ ಕೌಶಲ್ಯವನ್ನು ದೃಢೀಕರಿಸಿದಂತಿತ್ತು. 




ನಿರ್ಮಾಣದ ಶ್ರೀಮಂತಿಕೆ, ಗುರು ಅಶೋಕ್ ಕುಮಾರ್ ಅವರ ಪರಿಕಲ್ಪನೆ, ಡಾ. ವಿ.ವಿ. ಗೋಪಾಲ್, ಗುರು ಅಶೋಕ್ ಕುಮಾರ್ ಮತ್ತು ವಿವೇಕ್ ಶ್ರೀಧರ್ ಅವರ ಕಥೆ, ಪ್ರವೀಣ್ ಡಿ.ರಾವ್ ಅವರ ಸುಶ್ರಾವ್ಯ ಮತ್ತು ಸ್ಪಂದನಾತ್ಮಕ ಸಂಗೀತ, ಮತ್ತು ವಿದುಷಿ ಅದಿತಿ ಅಶೋಕ್ ಅವರು ಅದ್ಭುತ ನೃತ್ಯ ಸಂಯೋಜನೆ ಈ ನೃತ್ಯ ರೂಪಕವನ್ನು ಉತ್ಕೃಷ್ಟವಾಗಿ ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿವೆ. ಈ ಪ್ರದರ್ಶನವು ಕಲೆ  ಮತ್ತು ಸಂಪ್ರದಾಯದ ಈ ಸಾಮರಸ್ಯದ ಮಿಲನವನ್ನು ವೀಕ್ಷಿಸಲು ನೆರೆದಿದ್ದ ಸಾಕಷ್ಟು ಕಲಾರಸಿಕರ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಳ್ಳುವಂತಿತ್ತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top