ಬೆಂಗಳೂರು: ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಹಾಗೂ ಶ್ರೀಮತಿ ಧನಲಕ್ಷ್ಮಿ ಮತ್ತು ಶ್ರೀ ಉದಯಕುಮಾರ್ ಶೃಂಗೇರಿ ಇವರುಗಳು ಡಿಸೆಂಬರ್ 2, ಶನಿವಾರ ಸಂಜೆ 5-00 ಗಂಟೆಗೆ ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಕು|| ದಿಯಾ ಉದಯ್ ಅವರ "ಭರತನಾಟ್ಯ ರಂಗಪ್ರವೇಶ ಸಮಾರಂಭ"ವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳು : ಡಾ|| ಸಿ.ಎನ್. ಅಶ್ವತ್ಥ ನಾರಾಯಣ (ಮಲ್ಲೇಶ್ವರಂ ಶಾಸಕರು, ಮಾಜಿ ಉಪಮುಖ್ಯಮಂತ್ರಿಗಳು), ಟಿ.ಜಿ. ರಾಜೇಗೌಡ (ಶಾಸಕರು, ಶೃಂಗೇರಿ) ಹಾಗೂ ಶ್ರೀಮತಿ ಯಾಮಿನಿ ಮುತ್ತಣ್ಣ ಇವರುಗಳು ಆಗಮಿಸಲಿದ್ದಾರೆ.
ಹಿಮ್ಮೇಳ ಕಲಾವಿದರು: ಗುರು ಡಾ|| ಸುಪರ್ಣ ವೆಂಕಟೇಶ್ (ನಾಟುವಾಂಗಮ್), ವಿ|| ಬಾಲಸುಬ್ರಮಣ್ಯ ಶರ್ಮಾ (ಗಾಯನ), ವಿ|| ಜಿ. ಗುರುಮೂರ್ತಿ (ಮೃದಂಗ), ವಿ|| ವಿವೇಕ್ ವಿ. ಕೃಷ್ಣ (ಕೊಳಲು), ವಿ|| ಪ್ರಾದೇಶಾಚಾರ್ (ಪಿಟೀಲು), ವಿ|| ಡಿ.ವಿ. ಪ್ರಸನ್ನಕುಮಾರ್ (ರಿದಂಪಾಡ್).
ದಿಯಾ ಉದಯ್ ಕುರಿತು ಸಂಕ್ಷಿಪ್ತ ಪರಿಚಯ: ಶ್ರೀಮತಿ ಧನಲಕ್ಷ್ಮಿ ಮತ್ತು ಶ್ರೀ ಉದಯಕುಮಾರ್ ದಂಪತಿಗಳ ಜೇಷ್ಠ ಪುತ್ರಿ ಕು|| ದಿಯಾ ಉದಯ್. ದಿಯಾ ಮೂರು ವರ್ಷದ ಮಗುವಿದ್ದಾಗಲೇ ನೃತ್ಯದಲ್ಲಿ ಇರುವ ಆಸಕ್ತಿಯನ್ನು ಗಮನಿಸಿ ಆಗಿನಿಂದಲೇ ತಂದೆ ತಾಯಿಗಳು ಮಗುವನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿದರು. ನಂತರ ಸಾಯಿ ಆಟ್ಸ್೯ ಇಂಟರ್ನ್ಯಾಷನಲ್ ನ ಮುಖ್ಯಸ್ಥರೂ, ಗುರುಗಳೂ ಆದ 'ಕರ್ನಾಟಕ ಕಲಾಶ್ರೀ' ಡಾ|| ಸುಪರ್ಣಾ ವೆಂಕಟೇಶ್ ಅವರ ಬಳಿ ಸೇರಿಸಿದರು.
ಕು|| ದಿಯಾ ಉದಯ್ ಬಹಳ ಶ್ರದ್ದೆಯಿಂದ ನೃತ್ಯ ಕಲೆಯನ್ನು ಅಭ್ಯಾಸ ಮಾಡಿ, ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಹೆಸರಾಂತ ಟಿವಿ ವಾಹಿನಿಗಳಾದ ಉದಯ, ಕಸ್ತೂರಿ, ಡಿಡಿ ಚಂದನ, ಶ್ರೀ ಶಂಕರ ವಾಹಿನಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ ಮತ್ತು ಶ್ರವಣಬೆಳಗೊಳದಲ್ಲಿ ಜರುಗಿದ 81ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಪ್ರದರ್ಶನ, ಹೀಗೆ ಇದುವರೆಗೂ ಎರಡು ಸಾವಿರಗಳಿಗೂ ಮೇಲ್ಪಟ್ಟು ನೃತ್ಯ ಪ್ರದರ್ಶನ ಕಾರ್ಯಕ್ರಮ ನೀಡಿರುತ್ತಾರೆ.
ಪ್ರಶಸ್ತಿ- ಸನ್ಮಾನಗಳು: "ನಾಡಪ್ರಭು ಕೆಂಪೇಗೌಡ" ಪ್ರಶಸ್ತಿ, "ಕುವೆಂಪು ಶ್ರೀ" ಪ್ರಶಸ್ತಿ, "ಪ್ರತಿಭಾ ಕಾರಂಜಿ", "ಭರತನಾಟ್ಯ ಶಿರೋರತ್ನ, "ಡಾ|| ರಾಜ್ ಕರ್ನಾಟಕ ಕಣ್ಮಣಿ", "ಕರ್ನಾಟಕ ಕಲಾರತ್ನ", "ಕಸ್ತೂರಿ ವಾಹಿನಿಯ ವಂಡರ್ ಕಿಡ್", "ಡಾ|| ಸಿ. ಅಶ್ವಥ್ ಕಲಾರತ್ನ ಪುರಸ್ಕಾರ" ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳನ್ನು ದಿಯಾ ಉದಯ್ ಅವರ ಮುಡಿಗೇರಿಸಿಕೊಂಡಿದ್ದಾರೆ.
ಭರತನಾಟ್ಯದಲ್ಲಿ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತೇರ್ಗಡೆಯಾಗಿದ್ದು, ಭರತನಾಟ್ಯ ಮಾತ್ರವಲ್ಲದೇ ಕಥಕ್ ಪರೀಕ್ಷೆಯಲ್ಲಿ ಕೂಡಾ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ದಿಯಾ ಇನ್ನೂ ಹೆಚ್ಚು ಹೆಚ್ಚು ಉನ್ನತಮಟ್ಟಕ್ಕೇರಲಿ ಎಂದು ಹಾರೈಸೋಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ