ಅಖಿಲ ಭಾರತ ಕವಿಗಳು ಮತ್ತು ಲೇಖಕರ ಕ್ಷೇಮಾಭಿವೃದ್ಧಿ ಒಕ್ಕೂಟಕ್ಕೆ ಮರುನಾಮಕರಣ

Upayuktha
0



ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಮುಂದಾಳತ್ವದಲ್ಲಿ ದೇಶದ ಎಲ್ಲಾ ಕವಿ ಕವಯತ್ರಿಯರು ಮತ್ತು ಲೇಖಕರನ್ನು ಒಂದೇ ಸೂರಿನಡಿ ತಂದು ಅವರ ಏಳಿಗೆಗಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ರೂಪುಗೊಂಡಿರುವ ' ಅಖಿಲ ಭಾರತ ಕವಿಗಳು ಮತ್ತು ಲೇಖಕರ ಕ್ಷೇಮಾಭಿವೃದ್ಧಿ ಒಕ್ಕೂಟ'ವನ್ನು ರಾಜ್ಯದ ಹಿರಿಯ ಸಾಹಿತಿಗಳು ಮತ್ತು ಪತ್ರಕರ್ತರ ಜೊತೆ ಸಮಾಲೋಚನೆ ನಡೆಸಿ ಅಖಿಲ ಭಾರತ ಕವಿಗಳು ಮತ್ತು ಲೇಖಕರ ಅಭಿವೃದ್ಧಿ ಪ್ರಾಧಿಕಾರ (All India Poet's & Writer's Development Authority)  ಎಂದು ಮರುನಾಮಕರಣ ಮಾಡಲಾಗಿದೆ ಎಂದು ಪ್ರತಿಷ್ಠಾನ ಮತ್ತು ಪ್ರಾಧಿಕಾರ ರಾಷ್ಟ್ರೀಯ ಮುಖ್ಯಸ್ಥ ಕಾ.ವೀ.ಕೃಷ್ಣದಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಕಸ್ಮಿಕವಾಗಿ ಕವಿ/ಕವಯತ್ರಿ ನಿಧನರಾದರೆ ಅವರ ಕುಟುಂಬಕ್ಕೆ 2 ರಿಂದ 5 ಲಕ್ಷ ರೂಪಾಯಿವರೆಗಿನ ಸಹಾಯಧನ ನೀಡುವುದು. ಕವಿ/ಕವಯತ್ರಿಯರಿಗೆ ಅಪಘಾತವಾದರೆ ಕುಟುಂಬಕ್ಕೆ ಅನುಕೂಲವಾಗುವಂತೆ 2 ಲಕ್ಷ ರೂಪಾಯಿಗಳ ವಿಮೆ ಒದಗಿಸುವುದು, ಪ್ರತಿವರ್ಷ ಪ್ರಾಧಿಕಾರದಿಂದ ಪ್ರತಿ ರಾಜ್ಯದ ನಿರ್ದಿಷ್ಟ ಸಂಖ್ಯೆಯ ಲೇಖಕರ ಕೃತಿಗಳನ್ನು ತನ್ನದೇ ವೆಚ್ಚದಲ್ಲಿ ಪ್ರಕಟಿಸುವುದು ಸೇರಿದಂತೆ ಕವಿಗಳು ಲೇಖಕರ ತರಬೇತಿ, ಕ್ಷೇಮ ಮತ್ತು ಅಭಿವೃದ್ಧಿಯ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬಹು ನಿರೀಕ್ಷೆಯ ಯೋಜನೆಗಳನ್ನು ಪ್ರಾಧಿಕಾರವು ಆಯಾ ರಾಜ್ಯ ಸರಾಕಾರಗಳು, ಕೇಂದ್ರ ಸರಕಾರದ ಸಹಯೋಗದೊಂದಿಗೆ ಕೈಗೊಳ್ಳಲಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top