ಸರಸ್ವತಿನಗರ (ಬೆಂಗಳೂರು): ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸರಸ್ವತಿನಗರದಲ್ಲಿರುವ (ಗೋವಿಂದರಾಜನಗರ ಪೋಲಿಸ್ ಸ್ಟೇಷನ್ ಪಕ್ಕ) ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 15 ರಿಂದ 18ರ ವರೆಗೆ (ಪ್ರತಿದಿನ ಸಂಜೆ 6 ರಿಂದ 8 ಗಂಟೆ) ಧಾರ್ಮಿಕ / ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ನವೆಂಬರ್ 15 ಬುಧವಾರದಂದು : ಶ್ರೀ ಶ್ರೀಪಾದರಾಜರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ "ಸುಂದರಕಾಂಡ" ಪ್ರವಚನ.
ನವೆಂಬರ್ 16 ಗುರುವಾರದಂದು ಪವಿತ್ರ ಗಾನ ವೃಂದದವರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ "ಸುಂದರಕಾಂಡ" ಪ್ರವಚನ.
ನವೆಂಬರ್ 17 ಶುಕ್ರವಾರದಂದು : ಆನಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ.
ನವೆಂಬರ್ 18 ಶನಿವಾರದಂದು: "ಹರಿನಾಮ ಸಂಕೀರ್ತನೆ" ಗಾಯನ : ಕು|| ಮನಸ್ವಿ ಕಶ್ಯಪ್, ಕೀ-ಬೋರ್ಡ್ : ಶ್ರೀ ಅಮಿತ್ ಶರ್ಮಾ, ತಬಲಾ : ಶ್ರೀ ಸರ್ವೋತ್ತಮ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ತಿನ ಕಾರ್ಯಕ್ರಮಗಳ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ