ಅರಸೀಕೆರೆ: ಇಂದಿನ ವ್ಯಾಟ್ಸಪ್ ಯುಗದಲ್ಲಿ ಕಾವ್ಯ ಸೃಷ್ಟಿಯೊಂದಿಗೆ ನವ ಸಾಹಿತಿಗಳು ಉದಯಿಸಿ ರಾಜ್ಯಮಟ್ಟದಲ್ಲಿ ಪರಿಚಿತರಾಗುತ್ತಿದ್ದಾರೆ. ಕಾವ್ಯ ಸೃಷ್ಟಿಯಷ್ಟೇ ಓದಿಗೂ ಪ್ರಾಮುಖ್ಯತೆ ಇರಲಿ ಎಂದು ಹಾಸನದ ಸಾಹಿತಿ ಗೊರೂರು ಅನಂತರಾಜು ಎಂದು ತಿಳಿಸಿದರು.
ಅರಸೀಕೆರೆಯ ರೋಟರಿ ಭವನದಲ್ಲಿ ಸಿರಿಗನ್ನಡ ವೇದಿಕೆ, ಸಿರಿಗನ್ನಡ ಮಹಿಳಾ ವೇದಿಕೆ ಮತ್ತು ಭಾರತ ಸೇವಾ ದಳ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾಹಿತ್ಯ ಮನಸ್ಸಿಗೆ ಸಂತೋಷ ನೀಡುತ್ತದೆ. ಕಾವ್ಯ ರಚನೆ ಅಷ್ಟು ಸುಲಭವಲ್ಲ. ಪ್ರಯತ್ನಿಸಿದರೆ ದಕ್ಕಿಸಿಕೊಳ್ಳುವುದು ಕಷ್ವವಲ್ಲ. ಸಾಹಿತ್ಯ ಸಮಾರಂಭಗಳಲ್ಲಿ ಕವಿಗೋಷ್ಠಿಯನ್ನು ಕಡೆಯಲ್ಲಿರಿಸಿ ಕಡೆಗಣಿಸಿದರೂ ಅದಕ್ಕೆ ಮಾನ್ಯತೆ ಮೌಲ್ಯ ಇರುವುದನ್ನು ಕವಿಗಳು ಮರೆಯಬಾರದು ಎಂದು ಕವಿ ಅನಂತರಾಜು ಕಿವಿಮಾತು ಹೇಳಿದರು.
ಬೆಳಗಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಮಾನಸಿಕ ಆರೋಗ್ಯ ಕುರಿತು ಡಾ. ಕೃಷ್ಣಮೂರ್ತಿ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮಾಲ ಚಲುವನಹಳ್ಳಿ ಅವರ ನೆನಪಾಗುವ ಮುನ್ನ ಕವನ ಸಂಕಲನವನ್ನು ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷರು ರಜನಿ ಜೀರಗ್ಯಾಳ ಬಿಡುಗಡೆ ಮಾಡಿ ಉಪನ್ಯಾಸಕರು ಉಮೇಶ್ ಹೊಸಳ್ಳಿ ಕೃತಿ ಪರಿಚಯಿಸಿದರು. ಭಾಗ್ಯ ಎಂ.ವಿ. ಅವರ ಆರು ಪಾದ ನೂರು ಭಾವ ಕೃತಿಯನ್ನು ದಾಪುಚಿ ಬಿಡುಗಡೆಗೊಳಿಸಿ ಸಾಹಿತಿ ಚಂದ್ರೇಗೌಡ ನಾರಮ್ನಳ್ಳಿ ಮಾತನಾಡಿದರೆ ಶಾರದಾ ದೇವರಾಜ್‍ರ ಬನಸಿರಿ ಕುರಿತು ಪರಮೇಶ್ ಮಡಬಲು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆನಂದ ಪಟೇಲ್, ಅರಸೀಕೆರೆ ತಾ. ಪತ್ರಕರ್ತರ ಸಂಘದ ಅಧ್ಯಕ್ಷರು ಮಂಜುನಾಥ್, ಕಾರ್ಯದರ್ಶಿ ಹೇಮಂತ್‍ಕುಮಾರ್, ಕ.ಸಾ.ಪ ಗೌ.ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್, ಭಾರತ ಸೇವಾದಳದ ರಾಣಿ ವಿ.ಎಸ್. ಕವಯಿತ್ರಿಯರಾದ ಸೀತಮ್ಮ ವಿವೇಕ್, ಸುಮ ವೀಣಾ, ಸೌಮ್ಯ ಪ್ರಸಾದ್, ಸಿರಿಗನ್ನಡ ವೇದಿಕೆ ರಾಜ್ಯ ಉಪಾಧ್ಯಕ್ಷ ಉಮೇಶ್, ಸಿ.ಎನ್. ಪ್ರಜ್ವಲ್ ಎಂ ಕೌಡಳ್ಳಿ, ಕೆ.ಎಸ್.ಚಿದಾನಂದ, ಸುಂದರೇಶ್ ಉಡುವೇರೆ ಕಲಾವಿದ ಯಾಕೂಬ್ ಮೊದಲಾದವರು ಇದ್ದರು. ಸಿರಿಗನ್ನಡ ಜಿಲ್ಲಾಧ್ಯಕ್ಷರು ಚಂದ್ರು ಬಾಣಾವರ ಪ್ರಾಸ್ತಾವಿಕ ನುಡಿ ಹಂಚಿಕೊಂಡರು. ಕವಯಿತ್ರಿ ಮಧುಮಾಲತಿ ರುದ್ರೇಶ್ ನಿರೂಪಿಸಿದರು. ಶ್ವೇತ ಮೋಹನ್ ಅವರ ಬಾಚಣಿಕೆ ವಾದನ, ವೀಣಾ ಸುಧೀಂದ್ರ ಅವರ ಭರತನಾಟ್ಯ ರಂಜಿಸಿತು. ಸಾವಿತ್ರಮ್ಮ ಓಂಕಾರ್ ಅವರ ಚಿತ್ರಕಲಾ ಪ್ರದರ್ಶನವಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ