ನಾಟ್ಯ ರಂಗ ಪುತ್ತೂರು ಪ್ರಸ್ತುತ ಪಡಿಸಿದ ನೃತ್ಯ - ಹರ್ಷ

Upayuktha
0

ಕಾರ್ಯಕ್ರಮವು ವಿವೇಕಾನಂದ ಕನ್ನಡ ಶಾಲಾ ಸಭಾಂಗಣದಲ್ಲಿ ಸಂಪನ್ನಗೊಂಡಿತು



ಪುತ್ತೂರು: ಕರ್ನಾಟಕ ಕಲಾಶ್ರೀ ಶಾರದಾ ಮಣಿ ಶೇಖರ್ ಅವರು ದೀಪ ಪ್ರಜ್ವಲಿಸಿ ಮಾತನಾಡಿ "ಕಲೆ ವ್ಯಕ್ತಿತ್ವವನ್ನು ಅರಳಿಸುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಹೆತ್ತವರಾದ ನಾವು ನೀಡುವ ಪ್ರೋತ್ಸಾಹ, ಪ್ರೇರಣೆ ಮಕ್ಕಳಲ್ಲಿ ಕಲಾಸಕ್ತಿಯನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ನೃತ್ಯ, ರಂಗಕಲೆಯಲ್ಲಿ ಸ್ವ -ಸಾಮರ್ಥ್ಯ ಹಾಗೂ ನಿರಂತರ ಶ್ರಮಗಳಿಂದ ವಿಭಿನ್ನ ಆಲೋಚನೆ ಹಾಗೂ ಅನುಷ್ಠಾನಗಳಿಂದ ಗುರುತಿಸಿಕೊಂಡಿರುವ ನೃತ್ಯ ಗುರುಗಳಾದ ಮಂಜುಳಾಶ್ರಬ್ರಹ್ಮಣ್ಯ ಇವರ ಸಾರಥ್ಯದಲ್ಲಿ ಮಕ್ಕಳ ಕಲಾ ಪ್ರಜ್ಞೆ ಅರಳಿ ಬೆಳಗಲಿ ಎಂದು ಶುಭ ಹಾರೈಸಿದರು.

 

ಅಭ್ಯಾಗತರಾಗಿ ಉಪಸ್ಥಿತರಿದ್ದ ಶಾಲಾ ಆಡಳಿತ ಸಮಿತಿಯ ಸದಸ್ಯರೂ ,ದಂತ ವೈದ್ಯರು ಆದ ಡಾಕ್ಟರ್ ಆಶಾ ಇವರು "ಭಾರತೀಯ ಶ್ರೇಷ್ಠ ಕಲಾ ಪ್ರಕಾರವಾದ ಶಾಸ್ತ್ರೀಯ ನೃತ್ಯ ಅಭಿನಯಕ್ಕೆ ಇಂದು ಸಾಕ್ಷಿಯಾದ ವಿವೇಕಾನಂದ ಕನ್ನಡ ಶಾಲೆ ಸದಾ ಈ ಬಗೆಯ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಲೇ ಬಂದಿದೆ. ಇಂದಿಗ ಇಲ್ಲಿ ಪ್ರದರ್ಶನ ನೀಡುತ್ತಿರುವ ಎಲ್ಲಾ ಮಕ್ಕಳಿಗೂ,ನೃತ್ಯ ಗುರುಗಳಿಗೂ ಶುಭವಾಗಲಿ." ಎಂದರು.ನಾಟ್ಯರಂಗದ ನೃತ್ಯ ಗುರುಗಳಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ನಿರ್ದೇಶನದಲ್ಲಿ ಮೂಡಿ ಬಂದ ನೃತ್ಯ- ಹರ್ಷ ದ ಹಾಡುಗಾರಿಕೆಯಲ್ಲಿ ಪವಿತ್ರ ವಿನಯ ,ಮೃದಂಗದಲ್ಲಿ ಚಂದ್ರಶೇಖರ ಗುರುವಾಯನಕೆರೆ, ಕೊಳಲು ವಾದನದಲ್ಲಿ ಕೃಷ್ಣ ಗೋಪಾಲ ಪುಂಜಾಲಕಟ್ಟೆ ಸಹಕರಿಸಿದರು, ವಿಭಿನ್ನವಾದ ವೇದಿಕೆಯ ಬೆಳಕಿನ ನಿರ್ವಹಣೆಯಲ್ಲಿ ಸಹಕರಿಸಿದವರು ಪೃಥ್ವಿನ್ ಉಡುಪಿ ಇವರು. ಪ್ರಸಾದನ ಸಹಕಾರ ಶಿವರಾಮ ಕಲ್ಮಡ್ಕ ಹಾಗೂ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಅಶ್ವತ್ ಸೌಂಡ್ಸ್ ಮತ್ತು ಲೈಟ್ಸ್ ಪುತ್ತೂರು ..


ನಾಟ್ಯರಂಗದ ಪೋಷಕರಾದ ಶ್ರೀಮತಿ ಕವಿತಾ ಅಡೂರು  ಹಾಗೂ ಕುಮಾರಿ ರುದ್ದಿ ವಿಜಯಕುಮಾರ್ ಅವರು  ಕಾರ್ಯಕ್ರಮ ನಿರೂಪಿಸಿದರು.  ಆಗಮಿಸಿದಂತಹ ಅಭ್ಯಾಗತರಿಗೆ, ಕಲಾ ಪೋಷಕ-- ಪ್ರೇಕ್ಷಕರಿಗೆ,ಕಲಾ ಶಾಲೆಯ ಕಲಾವಿದರಿಗೆ ನೃತ್ಯ ಗುರುಗಳಾದ ಮಂಜುಳಾ ಸುಬ್ರಹ್ಮಣ್ಯ ಧನ್ಯವಾದ ಸಮರ್ಪಿಸಿದರು. ನೃತ್ಯ ಹರ್ಷದಲ್ಲಿ ಪ್ರದರ್ಶನ ನೀಡಿದ ವರು ಸೀನಿಯರ್ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ  ಅವನಿ ಬೆಳ್ಳಾರೆ ,ಹಾಗೂ ಜೂನಿಯರ್ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕೀರ್ತನ ವರ್ಮ, ಶರ್ವಿನ ಶೆಟ್ಟಿ, ಮೇಧಾ ಭಟ್, ಪ್ರಜ್ಞ ಇವರು ನೃತ್ಯ ಪ್ರಸ್ತುತಿಯ ರೂವಾರಿಗಳಾಗಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top