ಪುತ್ತೂರು: ಮಕ್ಕಳ ದಿನಾಚರಣೆಯ ಪ್ರಯುಕ್ತ ಮಂಗಳವಾರದಂದು ಮಧೂರು ಪಂಚಾಯತ್ ಬಡ್ಸ್ ಶಾಲೆಯ ಮಕ್ಕಳಿಗಾಗಿ ನಾಟ್ಯರಂಗ ಪುತ್ತೂರು ಇಲ್ಲಿನ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಮಧೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಗೋಪಾಲಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಧೂರು ಪಂಚಾಯತ್ ಸ್ಥಾಯಿ ಸಮಿತಿ ಛೇರ್ಮನ್ ರಾಧಾಕೃಷ್ಣ ಸುರ್ಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯಶೋದ ಸುಂದರ ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ವಾರ್ಡ್ ಸದಸ್ಯೆಜನನಿ,ಮುರಳಿ, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರದಾನ ಸಂಚಾಲಕರಾದ ಗುರುಪ್ರಸಾದ್ ಕೋಟೆಕಣಿ ಶುಭಹಾರೈಸಿದರು. ಉಪಾಧ್ಯಕ್ಷೆ ಸ್ಮಿಜ ವಿನೋದ್ ಉಪಸ್ಥಿತರಿದ್ದರು. ಬಡ್ಸ್ ಶಾಲಾ ಅಧ್ಯಾಪಕಿ ಕವಿತ ಸ್ವಾಗತಿಸಿದರು.
ನಾಟ್ಯ ರಂಗಪುತ್ತೂರು ಇದರ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಮಕ್ಕಳಿಗಾಗಿ ನೃತ್ಯಪ್ರದರ್ಶನ ನೀಡುವುದರ ಜೊತೆಗೆ . ನೃತ್ಯದ , ವಿವಿಧ ಹಸ್ತ, ನೃತ್ಯದ ಚಲನೆಗಳನ್ನು ಬಡ್ಸ್ ಶಾಲಾ ಮಕ್ಕಳಿಗೆ ಪರಿಚಯಿಸಿ, ಅವರೂ ನೃತ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ನಾಟ್ಯಮಂಟಪ ಮಧೂರು ನೃತ್ಯಸಂಸ್ಥೆ ಯ ನಿರ್ದೇಶಕಿ ಸೌಮ್ಯ ಶ್ರೀಕಾಂತ್ ಕಾರ್ಯಕ್ರಮದ ನೇತ್ರತ್ವವಹಿಸಿದ್ದರು. ಮುಂದಿನ ದಿನಗಳಲ್ಲಿ ಸೌಮ್ಯ ಶ್ರೀಕಾಂತ ಬಟ್ಸ್ ಶಾಲಾ ಮಕ್ಕಳಿಗೆ ನೃತ್ಯತರಬೇತಿ ನೀಡಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ