ಮಂಗಳೂರು: ಹರಿಪಾದಗೈದಿರುವ ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಪಾದರ ಸ್ಮರಣೆಯೊಂದಿಗೆ, ನ.16, ಗುರುವಾರ, ಬೆಳಿಗ್ಗೆ, 8-45 ರಿಂದ 10ರ ವರೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಗೋ ಪೂಜಾ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ ಉಪಸ್ಥಿತರಿರುವರು.
ಡಾ.ಪ್ರಭಾಕರ ಅಡಿಗ ಕದ್ರಿ, ಡಾ. ಸತ್ಯಕೃಷ್ಣ ಭಟ್, ಶ್ರೀರಂಗ ಐತಾಳ್ ಕದ್ರಿ, ಇವರ ಆಚಾರ್ಯತ್ವದಲ್ಲಿ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ' ಮಂಜು ಪ್ರಾಸಾದ' ನಿಲಯದ ಆವರಣದಲ್ಲಿ ಸಾರ್ವಜನಿಕ ಗೋಪೂಜೆ ನೆರವೇರಲಿದ್ದು, ಸಾರ್ವಜನಿಕರಿಗೆ ಗೋಪೂಜೆಯನ್ನು ಮಾಡುವ ಅವಕಾಶವಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ. ಪೂಜ್ಯ ಪೇಜಾವರ ಶ್ರೀಗಳ ಷಷ್ಠಬ್ಧಪೂರ್ತಿ ಪ್ರಯುಕ್ತ ಸರಣಿ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕ ಗೋಪೂಜೆಯನ್ನು ನಡೆಸಲಾಗುತ್ತಿದೆ.
ಎಲ್ಲರಿಗೂ ಗೋಪೂಜೆ ಮಾಡುವ ಅವಕಾಶವಿದ್ದು ಸಾರ್ವಜನಿಕರು ಪೂಜೆಗೆ ಬೇಕಾಗುವ ಪರಿಕರಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿರುವರು. ಉಡುಪಿಯ ನೀಲಾವರದ ಗೋ ಶಾಲೆಗೆ ದೇಣಿಗೆಯನ್ನು ಸಲ್ಲಿಸುವುದಕ್ಕೂ ಅವಕಾಶವಿದೆ, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯಾನಂದ ಕಟೀಲ್ (9448545578), ಪೂರ್ಣಿಮಾ ರಾವ್ ಪೇಜಾವರ (9900788229), ವಿಜಯಲಕ್ಷ್ಮೀ ಬಿ. ಶೆಟ್ಟಿ (9448163607), ಸುಧಾಕರ ರಾವ್ ಪೇಜಾವರ (9448546051), ನವನೀತ ಶೆಟ್ಟಿ ಕದ್ರಿ (9448546051), ಪ್ರದೀಪ ಕುಮಾರ ಕಲ್ಕೂರ (9845083736) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ