ಮುಜುಂಗಾವು ವಿದ್ಯಾಪೀಠದಲ್ಲಿ ಪ್ರತಿಭಾ ಭಾರತೀ ಕಾರ್ಯಕ್ರಮ

Upayuktha
0


ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ 2023-24ನೇ ವರ್ಷದಲ್ಲಿ ಎರಡನೇ ಪ್ರತಿಭಾಭಾರತೀ ಕಾರ್ಯಕ್ರಮವು ಬುಧವಾರ ಜರುಗಿತು. ವಿಶೇಷ ಅತಿಥಿಗಳಾಗಿ ಕೃಷ್ಣ ಪ್ರಸಾದ್ ಅಮ್ಮಂಕಲ್ಲು, ಸಂಸ್ಕಾರ್ ಸಿಸ್ಟಮ್ ಬೆಂಗಳೂರು ಅವರು ಮಾತನಾಡುತ್ತಾ ಶ್ರೀ ಗುರುಗಳ ಶ್ರೀ ಭಾರತೀವಿದ್ಯಾಪೀಠದ ವಿದ್ಯಾರ್ಥಿಗಳಾಗುವುದೇ ನಿಮ್ಮ ವಿಶೇಷತೆ, ಏಕೆಂದರೆ ನೀವು ಸಂಸ್ಕಾರದೊಂದಿಗೆ ಹಲವು ಪ್ರತಿಭೆಗಳ ಆಗರವಾಗುತ್ತೀರಿ ಎಂದರು.


ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಚೆಕ್ಕಣಿಕೆ ಬಾಲಸುಬ್ರಹ್ಮಣ್ಯ ಭಟ್ ಮಕ್ಕಳಿಂದಲೇ ಮಕ್ಕಳಿಗಾಗಿ ಮಾಡಿಸುವ ಈ ಕಾರ್ಯಕ್ರಮವು ಬಹಳ ಉತ್ತಮವಾಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.


ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಎಂಟನೆಯ ತರಗತಿ ಆದಿತ್ಯ ಸ್ವಾಗತಿಸಿದನು. ಎಲ್.ಕೆ.ಜಿ. ಮಕ್ಕಳಿಂದ ತೊಡಗಿ ಹತ್ತನೆ ತರಗತಿ ವರೆಗಿನ ಎಲ್ಲಾ ಮಕ್ಕಳಿಂದ ವಿವಿಧ ಚಟುವಟಿಕೆಗಳು ನೆರವೇರಿದವು. ಹತ್ತನೆ ತರಗತಿ ವಿದ್ಯಾರ್ಥಿ ಕುಶನ್ ಕುಮಾರ್ ಸಭಾ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.


ಶಾಲಾ ಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ ಹಾಗೂ ಸಹ ಮುಖ್ಯಶಿಕ್ಷಕಿ ಚಿತ್ರಾ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಕೃತ ಅಧ್ಯಾಪಕರಾದ ಬಾಲಕೃಷ್ಣ ಶರ್ಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top