ಬೆಂಗಳೂರು: ಗಾಂಧೀ ಜಯಂತಿ ನಿಮಿತ್ತ ಬೆಂಗಳೂರಿನ ಕರ್ನಾಟಕ ಸರ್ವೋದಯ ಮಂಡಲ ಆಯೋಜಿಸಿದ್ದ ಗಾಂಧೀಜಿ ಕುರಿತ ಲೇಖನ ಸ್ಪರ್ಧೆಗೆ ಸೂಚಿಸಲಾಗಿದ್ದ ಎಲ್ಲ ಆರೂ ವಿಷಯಗಳ ಬಗ್ಗೆ ಬಂದ ಬರಹಗಳ ಸಂಖ್ಯೆ ಒಟ್ಟು 228. ಇದಲ್ಲದೆ ಸೂಚಿತ ವಿಷಯದ ಹೊರತಾಗಿ ಬಂದ ಲೇಖನಗಳೂ ಕೆಲವಿವೆ.
ನೂರಕ್ಕೂ ಮಿಕ್ಕಿದ ಪ್ರಬಂಧಗಳನ್ನು ತೀರ್ಪುಗಾರರು ಮೆಚ್ಚಿಕೊಂಡಿದ್ದಾರೆ. ಸ್ಪರ್ಧೆ ತೀವ್ರವಾಗಿದ್ದು ಕೆಳಕಂಡ ಲೇಖಕರ ಪ್ರಬಂಧಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತೀರ್ಪುಗಾರರಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಮತ್ತು ಸಾಹಿತಿ ಬಿ.ಎನ್. ರಮೇಶ್ ಕುಮಾರ್, ಮನ: ಶಾಸ್ತ್ರಜ್ಞೆ ಜಯಶ್ರೀ ಸುಧೀಂದ್ರ,
ನಿವೃತ್ತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ವೈ ಸಿ ದೊಡ್ಡಯ್ಯ ಮತ್ತು ಹರಿಹರದ ನಿವೃತ್ತ ಅಧಿಕಾರಿ ಅನಿಲ್ ಕುಮಾರ ಸಹಕರಿಸಿದ್ದರು.
ಪ್ರಬಂಧ ಸ್ಪರ್ಧೆಗೆ ಮೊದಲನೆಯದಾಗಿ 'ಗಾಂಧೀ ನಮಗೆಷ್ಟು ಬೇಕು?' ಎಂಬ ವಿಷಯವನ್ನು ನೀಡಲಾಗಿತ್ತು. ಬಹುಮಾನ ವಿಜೇತರು ಇವರು:
1. ಲಾರೆನ್ಸ್ ಡಿಸೌಝ , ಉಜಿರೆ
2. ಪ್ರಸಾದ್ ಸ್ವಾಮಿ ಎಸ್, ಡಿ.ಬಿ ಸಂದ್ರ, ಬೆಂಗಳೂರು
3. ಪದ್ಮಜಾ ಜಿ.ಉಮರ್ಜಿ, ಹುಬ್ಬಳ್ಳಿ
4. ಡಾ.ಎನ್ ಜಿ ವಿಜಯಲಕ್ಷ್ಮಿ, ಬೆಂಗಳೂರು
ಎರಡನೆಯದಾಗಿ 'ಗಾಂಧೀ ಇಂದಿಗೂ ಪ್ರಸ್ತುತ, ಏಕೆ, ಹೇಗೆ' ಎಂಬ ವಿಷಯವನ್ನು ನೀಡಲಾಗಿತ್ತು. ಬಹುಮಾನ ವಿಜೇತರು ಇವರು:
1. ವಿ. ಯೋಗೀಶ್ ಪೇರಂದಡ್ಕ, ಬೆಳ್ತಂಗಡಿ
2. ಅಕ್ಷತಾ ಕೆ ಶೆಟ್ಟಿ, ನಿಟ್ಟೆ/ ಸುಜಯ ಶೆಟ್ಟಿ ಹಲ್ನಾಡು, ಉಡುಪಿ
3. ನೀಲಮ್ಮ ಶಂಭಣ್ಣ ಹುಲ್ಲಾಳ, ಹಾವೇರಿ
ಜಿ. ಯು ನಾಯಕ್.
ಯಜ್ಞ ನಾರಾಯಣ ಉಳ್ಳೂರ, ಕೋಟೇಶ್ವರ
ಅನೀಶ್, ಮೂಡಬಿದ್ರಿ
ಸಂತೋಷ್ ಕುಮಾರ್ ಮರಕ್ಕಡ, ಕಡಬ
ಡಾ.ಜ್ಯೋತಿ, ತುಮಕೂರು
ಶಶಿಕಲಾ ಎನ್, ಬೆಂಗಳೂರು
ಮೊಹಮ್ಮದ್ ಮಿಯಾ, ಕೊಪ್ಪಳ
ಸವಿತಾ ಹೆಗ್ಡೆ ಹೆರ್ಗ, ಉಡುಪಿ
ವಿಷಯ: ಗಾಂಧೀ ನಂತರದ ಭಾರತ- ನಡೆದದ್ದು, ಎಡವಿದ್ದು ಎಲ್ಲಿ, ಹೇಗೆ?
1. ಪ. ರಾಮಕೃಷ್ಣ ಶಾಸ್ತ್ರಿ ತೆಂಕ ಕಾರಂದೂರು,ಬೆಳ್ತಂಗಡಿ
ಎಲ್ಲರೂ ಸರಿ, ಆದರೆ ಯಾವುದೂ ಸರಿಯಲ್ಲ ಇಂದಿನ ಸ್ಥಿತಿ-ಗತಿಗಳ ಸಮೀಕ್ಷೆ
ಆನಂದ ನಾಯಕ್, ಮತ್ತಿಂಜಡ್ದು, ಕಾರ್ಕಳ
ಯುವಜನರಿಗೆ ಗಾಂಧೀಯನ್ನು ತಲುಪಿಸುವುದು ಹೇಗೆ?
1. ರೇಷಲ್ ಬಿ ಫರ್ನಾಂಡೀಸ್, ಸುರತ್ಕಲ್
2. ರೇಷಲ್ ಸೀಕ್ವೇರ, ಬಳ್ಕುಂಜೆ, ಮುಲ್ಕಿ
3. ಪೂಜಾ, ತೀರ್ಥಹಳ್ಳಿ
ವಿಷಯ: ಸಾಮಾಜಿಕ ಮಾಧ್ಯಮಗಳಲ್ಲಿ ಗಾಂಧೀ ನಿಂದನೆ- ಪರಿಹಾರ ಮಾರ್ಗಗಳು
1. ದರ್ಶನ್ ಕೆ ಎನ್, ತುಮಕೂರು
2. ರಾಜೇಶ್ವರಿ ಹೆಗಡೆ, ಬೆಳಗಾವಿ
3. ಕಾವೇರಿ ದೇಸಾಯಿ, ಕಲಬುರ್ಗಿ
4. ಸುಜಾತ ಹಳ್ಳೂರ, ಶಿರಸಿ
ಗಾಂಧೀ ಕುರಿತ ಇತರ ಬರಹಗಳು
1. ಡಾ.ಜ್ಯೋತಿ, ತುಮಕೂರು
2. ಸದ್ದಾಂ ಹುಸೇನ್, ತಗ್ಗಹಳ್ಳಿ ಮಂಡ್ಯ
3. ಉಷಾ ಅನಂತ್, ಬೆಂಗಳೂರು
ಪ್ರಶಸ್ತಿ ಪತ್ರ, ಪದಕ ಮತ್ತು ಗಾಂಧೀ ಸಾಹಿತ್ಯ ಪುಸ್ತಕಗಳನ್ನು ರಿಜಿಸ್ಟರ್ಡ್ ಅಂಚೆಯ ಮೂಲಕ ಕಳುಹಿಸಲಾಗುತ್ತದೆ. ಇಲ್ಲಿಯ ಕೆಲವು ಲೇಖನಗಳನ್ನು ಗಾಂಧಿ ತತ್ವ ಪ್ರಚಾರಗಳಿಗೆ ಮೀಸಲಾದ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಲೇಖನ ಸ್ಪರ್ಧೆಯ ಸಂಚಾಲಕರಾದ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

