ನ .30: ಕನಕ ಜಯಂತಿ ಪ್ರಯುಕ್ತ ಗಮಕ ವಾಚನ ವ್ಯಾಖ್ಯಾನ

Upayuktha
0



ಕಾರ್ಕಳ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಕನಕ ಜಯಂತಿ ಪ್ರಯುಕ್ತ ನ.30 ಗುರುವಾರದಂದು ಸಾಯಂಕಾಲ 4.30ಕ್ಕೆ ಎ.ಎಸ್.ಎನ್. ಹೆಬ್ಬಾರ್ ಅವರ ‘ನುಡಿ’ ಸ್ವಗೃಹದಲ್ಲಿ ಕನಕದಾಸ ಕೀರ್ತನೆಗಳ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ.




ಗಮಕ ಕಲಾ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಸತೀಶ್ ಕುಮಾರ್ ಕೆಮ್ಮಣ್ಣು ಉಪಸ್ಥಿತಿಯಲ್ಲಿ ಕುಂದಾಪುರದ ಹಿರಿಯ ನ್ಯಾಯವಾದಿ ಮತ್ತು ಕಲಾ ಸಾಹಿತ್ಯ ಪೋಷಕರಾದ ಎ.ಎಸ್.ಎನ್. ಹೆಬ್ಬಾರ್ ಮುಖ್ಯ ಅತಿಥಿಗಳಾಗಿದ್ದು,  ದ.ರಾ ಬೇಂದ್ರೆಯವರ ಮೇಘದೂತ (ಪೂರ್ವ ಮೇಘ)ವನ್ನು ಪ್ರಸಿದ್ಧ ಗಮಕಿ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಅವರು ವಾಚಿಸಲಿದ್ದು ಸಂಸ್ಕøತ ವಿದ್ವಾಂಸರು ಹಾಗೂ ಕವಿಗಳಾದ ಡಾ.ರಾಘವೇಂದ್ರ ರಾವ್ ಪಡುಬಿದ್ರೆ ಅವರು ವ್ಯಾಖ್ಯಾನವನ್ನು ನೆರವೇರಿಸಿಕೊಡಲಿದ್ದಾರೆ ಎಂಬುದಾಗಿ ಸತೀಶ್ ಕುಮಾರ್ ಕೆಮ್ಮಣ್ಣು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top