ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸುವುದು ಸಂಸ್ಥೆಯ ಉದ್ದೇಶ: ನಿಟ್ಟೆ ವಿನಯ ಹೆಗ್ಡೆ

Upayuktha
0


ನಿಟ್ಟೆ: 'ಇಲೆಕ್ಟ್ರಿಕಲ್ ವಿಭಾಗವು ಸತತ 12 ವರ್ಷಗಳಿಂದ ನಡೆಸುತ್ತಾ ಬಂದಿರುವ 'ಎಲಿಕ್ಸಿರ್' ಎಂಬ ಪ್ರಾಜೆಕ್ಟ್ ಪ್ರದರ್ಶನವು ವಿಭಾಗದಲ್ಲಿ ನಡೆಸಲಾಗುತ್ತಿರುವ ಹಾಗೂ ವಿಭಾಗದಿಂದ ಸಂಶೋಧನೆಗೆ ಸಿಗುತ್ತಿರುವ ಪ್ರೋತ್ಸಾಹಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗದು. ಇಂಜಿನಿಯರಿಂಗ್ ನ ಸೈದ್ದಾಂತಿಕ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಸಂಪಾದಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತದೆ' ಎಂದು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.



ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗವು ನ.27 ರಂದು ವಿಭಾಗದ ಹಳೆವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ 'ಎಲಿಕ್ಸಿರ್ 2023' ವಿದ್ಯಾರ್ಥಿಗಳ ಮಾದರಿ ವಸ್ತು ಪ್ರದರ್ಶನದ ಹನ್ನೆರಡನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


'ನಿಟ್ಟೆ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಇಂತಹ ಒತ್ತು ವಿಭಾಗವು ನೀಡಿದರೆ ಪ್ರವೇಶಾತಿ ಹಾಗೂ ಉದ್ಯೋಗಾವಕಾಶಗಳು ಇನ್ನಷ್ಟು ತೆರೆದುಕೊಳ್ಳುತ್ತದೆ. ಇಂತಹ ವಸ್ತುಪ್ರದರ್ಶನಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗುತ್ತವೆ. ವಿಭಾಗದಲ್ಲಿ ಕಲಿತು ಇಂದು ಉತ್ತಮ ಉದ್ಯೋಗದಲ್ಲಿದ್ದು ಇಂತಹ ಪ್ರಾಜೆಕ್ಟ್ ಪ್ರದರ್ಶನಕ್ಕೆ ಸಹಾಯ ಮಾಡುವ ಹಳೆವಿದ್ಯಾರ್ಥಿಗಳ ಕೊಡುಗೆ ಶ್ಲಾಘನೀಯ' ಎಂದರು.



ಕಾರ್ಯಕ್ರಮದ ಗೌರವ ಅತಿಥಿ ನಿಟ್ಟೆ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಪ್ರೊ. ಡಾ| ಗೋಪಾಲ್ ಮುಗೆರಾಯ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ 'ಇಂದಿನ ದಿನಗಳಲ್ಲಿ ಪಠ್ಯ ಅಥವಾ ಕ್ಲಾಸ್ ರೂಮ್ ಶಿಕ್ಷಣಕ್ಕಿಂತ ಪ್ರಾಜೆಕ್ಟ್ ಬೇಸ್ಡ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯವೆಂಬುದನ್ನು ಅರಿತಿರುವ ಇಲೆಕ್ಟ್ರಿಕಲ್ ವಿಭಾಗವು ಬಹಳ ಉತ್ತಮ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತಾಂತ್ರಿಕ ಶಿಕ್ಷಣವನ್ನು ಎಲ್ಲಾ ವಿಭಾಗವೂ ಈ ರೀತಿ ಕುತೂಹಲಕಾರಿಯಾಗಿ ಮಾಡಬೇಕು' ಎಂದರು.



ಕಾರ್ಯಕ್ರಮದ ಇನ್ನೋರ್ವ ಅತಿಥಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ತಮ್ಮ ನುಡಿಗಳಲ್ಲಿ 'ಈ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳುತ್ತಿರುವ 114 ಮಾದರಿಗಳು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿದ್ಯಾರ್ಥಿಗಳ ಬೆಳವಣಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಹಳೆವಿದ್ಯಾರ್ಥಿಗಳು ಉತ್ತಮ ಕೊಡುಗೆ ಸಲ್ಲಿಸುತ್ತಿರುವರು. ಇಲೆಕ್ಟ್ರಿಕಲ್ ವಿಭಾಗವು ಕ್ಯಾಂಪಸ್ ನಲ್ಲಿ ನೀರಿನ ಸದ್ಬಳಕೆಗೆ ಸಾಧನ, ಸೋಲಾರ್ ಬೀದಿ ದೀಪಗಳಂತಹ ಉಪಯುಕ್ತ ಪರಿಕರಗಳನ್ನು ತಯಾರಿಸಿ ಕ್ಯಾಂಪಸ್ ನ ವಿವಿಧ ಅಗತ್ಯಗಳನ್ನು ಪೂರೈಸುವಲ್ಲಿ ಕೆಲಸ ನಡೆಸುತ್ತಿದೆ' ಎಂದರು.



ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ| ಐ ರಮೇಶ್ ಮಿತ್ತಂತಾಯ, ಡಾ| ಶ್ರೀನಿವಾಸ ರಾವ್ ಬಿ ಆರ್, ಎಲಿಕ್ಸಿರ್ ಫ್ಯಾಕಲ್ಟಿ ಸಂಯೋಜಕ ಅನೂಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಂಪೆನಿಗಳ ಮುಖ್ಯಸ್ಥರು, ಪ್ರತಿನಿಧಿಗಳು, ಕಾಲೇಜಿನ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಇದೇ ಸಂದರ್ಭದಲ್ಲಿ 4 ಪ್ರಾಡಕ್ಟ್ ಗಳನ್ನು ಬಿಡುಗಡೆಗೊಳಿಸಲಾಯಿತು. ಈ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮದಲ್ಲಿ 114 ಪ್ರಾಜೆಕ್ಟ್ ಗಳು ಪ್ರದರ್ಶನಗೊಂಡವು.


ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ| ಸೂರ್ಯನಾರಾಯಣ ಕೆ ಸ್ವಾಗತಿಸಿ ಎಲಿಕ್ಸೀರ್ 2023 ವಸ್ತುಪ್ರದರ್ಶನದ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಲಿಕ್ಸೀರ್ ವಿದ್ಯಾರ್ಥಿ ಸಂಯೋಜಕ ವಿಶ್ವಕೀರ್ತಿ ಎಂ ಭಟ್ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top