ಮೈಸೂರಿನ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ನರಕ ಚತುರ್ದಶಿ ಆಚರಣೆ

Chandrashekhara Kulamarva
0

ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿಯಿಂದ ವಿಶೇಷ ಪೂಜೆ



- ವಿದ್ಯಾಪೀಠದಲ್ಲಿ ಅಭ್ಯಂಗ

- ತೈಲ ಸಮರ್ಪಣೆ

ನರಕ ಚತುರ್ದಶಿ ನಿಮಿತ್ತ  ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರಿಗೆ ಡಾ. ಡಿ.ಪಿ. ಮಧುಸೂದನಾಚಾರ್ಯ ಅವರು ತೈಲವನ್ನು ಹಚ್ಚುತ್ತಿರುವುದು. ಶ್ರೀಗಳು ಭಕ್ತರಿಗೆ ಅಭ್ಯಂಜನಕ್ಕಾಗಿ ತೈಲ ನೀಡುತ್ತಿರುವುದು.


ಮೈಸೂರಿನ ಕೆ.ಆರ್. ಪುರಂನ ಸೋಸಲೆ ಶ್ರೀ ವ್ಯಾಸರಾಜರ ಮಠದಲ್ಲಿ ನರಕ ಚತುರ್ದಶಿ ನಿಮಿತ್ತ  ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಭಾನುವಾರ ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಪೂಜೆ ಸಮರ್ಪಿಸಿ ಮಹಾ ಮಂಗಳಾರತಿ ನೆರವೇರಿಸಿದರು.


ಮೈಸೂರು: ಮೈಸೂರಿನ ಕೆ.ಆರ್. ಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ನರಕ ಚತುರ್ದಶಿ ಆಚರಣೆ ಸಂಭ್ರಮದಿಂದ ನೆರವೇರಿತು. ಭಾನುವಾರ ಮುಂಜಾನೆ 5ಕ್ಕೆ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಮೂಲ ಪ್ರತಿಮೆ ಶ್ರೀ ಗೋಪಾಲಕೃಷ್ಣ ದೇವರಿಗೆ ತೈಲ ಸಮರ್ಪಣೆ ಮಾಡಿ ಅದನ್ನು ಭಕ್ತರಿಗೆ, ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಹಂಚಿದರು.


ನಂತರ ವಿದ್ಯಾಪೀಠದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ಸ್ವಾಮೀಜಿಯವರಿಗೆ ಅಭ್ಯಂಗ ಸ್ನಾನ ಮಾಡಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ತೈಲ ಹಚ್ಚಿ ಎಣ್ಣೆ- ನೀರು ಸ್ನಾನ ಮಾಡಿಸಿದ್ದು ಗಮನ ಸೆಳೆಯಿತು. ನಂತರ ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿದರು.


ವ್ಯಾಸತೀರ್ಥ ವಿದ್ಯಾಪೀಠದ  ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ, ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ, ಉಪನ್ಯಾಸಕರು ಮತ್ತು ವಿದ್ವಾಂಸರು ಇದಕ್ಕೆ ಸಾಕ್ಷಿಯಾದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top