ಇದು ದೇವರ ಮಹಿಮೆಯಲ್ಲದೇ ಮತ್ತಿನ್ನೇನು?...

Upayuktha
0


ಕೇರಳದ ಕಾಸರಗೋಡು ಜಿಲ್ಲೆಯಲ್ಲಿನ ಪ್ರಸಿದ್ಧ ಶ್ರೀ ಅನಂತಪುರ ಸರೋವರ ದೇವಸ್ಥಾನದಲ್ಲಿ ಹಲವು ಶತಕಗಳಿಂದಲೇ ಮೊಸಳೆಯೊಂದು ಅತಿಥಿಯಾಗಿದ್ದ. ಇಲ್ಲಿಗೆ ಬೀಟಿ ನೀಡುವ ಭಕ್ತರ ಪಾಲಿಗೆ ದೇವರ ನೈವೇದ್ಯವನ್ನು ಮಾತ್ರ ಸೇವಿಸುವ ಬಾಬಿಯಾ ಎಂದರೆ ದೇವರಂತೆಯೇ ಆಗಿದ್ದ,ಹಾಗೂ ದೇವರ ಮೊಸಳೆ ಎಂದೇ ಪ್ರಸಿದ್ಧನಾಗಿದ್ದ. ವರ್ಷದ ಹಿಂದೆ ಹರಿಪಾದ ಸೇರಿದ್ದ.ಇಲ್ಲಿಂದ ದೇವಸ್ಥಾನಕ್ಕೆ ಬೇಟಿ ನೀಡುವವರ ಸಂಖ್ಯೆಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು ಎನ್ನಬಹುದು.


ಆದರೆ ಇದೀಗ ಈ ವರ್ಷದ ದೀಪಾವಳಿಗೆ ಉಡುಗೊರೆ ಎಂಬಂತೆ ಮತ್ತೆ ಶ್ರೀ ಅನಂತಪುರ ದೇವಸ್ಥಾನದ ಸರೋವರದಲ್ಲಿ ಮತ್ತೊಂದು ಹೊಸ ಮೊಸಳೆಯೊಂದು ಕೆಲವು ದಿನಗಳಿಂದ ಕಾಣಸಿಕ್ಕಿರುವುದು ವಿಶೇಷ ಸಂಗತಿ.


ಭಕ್ತಾದಿಗಳ ಪಾಲಿಗೆ ಬಬಿಯಾ ಮತ್ತೆ ಹುಟ್ಟಿ ಬಂದಂತೆ, ಒಂದು ವರ್ಷದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಇದ್ದ ಭಕ್ತರ ಸಂಖ್ಯೆ ಇದೀಗ ಒಂದೇ ದಿನದಲ್ಲಿ ಬಹಳಷ್ಟು ಜಾಸ್ತಿಯಾಗಿದೆ ಎಂದರೆ ಅದು ದೇವರ ಮಹಿಮೆಯಲ್ಲದೇ ಮತ್ತಿನ್ನೇನು?


ಭಾರತದ ಸುಪ್ರಸಿದ್ಧ ದೇವಸ್ಥಾನಗಳ ಪೈಕಿ ಇರುವ ಶ್ರೀ ಅನಂತಪ್ಮನಾಭ ಸ್ವಾಮಿ ದೇವಸ್ಥಾನ ತಿರುವನಂತರಪುರ ಇಲ್ಲಿಗೂ ಹಾಗೂ ಶ್ರೀ ಅನಂತಪುರ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ.ಈ ಎರಡೂ ದೇವಾಲಯಾಗಳೂ ಕೂಡ ಪರಸ್ಪರ ಸುರಂಗ ಮಾರ್ಗಗಳಿಂದ ಒಂದಕ್ಕೊಂದು ಮಾರ್ಗವನ್ನು ಕಲ್ಪಿಸಿಕೊಂಡಿವೆ ಎಂಬುವುದು ಬಹಳಷ್ಟು ಹಿಂದಿನಿಂದ ಕೇಳಿ ಬಂದ ಮಾತು. ಬಹುಶಃ ಈ ದೇವಸ್ಥಾನದ ಹಾಗೂ ಮೊಸಳೆಗೂ ಇರುವ ನಂಟು ದೇವರಿಗೆ ಮತ್ತೊಮ್ಮೆ ಇಲ್ಲಿಗೆ ತನ್ನನ್ನು ಮೊಸಳೆಯ ಸ್ವರೂಪದಲ್ಲಿ ಬರಮಾಡಿಕೊಳ್ಳಬೇಕು ಎಂದೇ ಮತ್ತೊಮ್ಮೆ ಇಲ್ಲಿ ಪ್ರತ್ಯಕ್ಷನಾಗಿದ್ದು ಎಂಬ ನಂಬಿಕೆ ಭಕ್ತರಲ್ಲಿ... ಆದ್ದರಿಂದ ಈ ಪವಾಡದ ಹಿಂದಿರುವ ದೇವರ ಮಹಿಮೆ ಅಪಾರ ಎಂದಷ್ಟೇ ಹೇಳಬೇಕಲ್ಲವೇ?..


-ಶ್ರೇಯಾ ಮಿಂಚಿನಡ್ಕ                                                       

                                                               

 ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ

 ಎಸ್ ಡಿ ಎಂ ಕಾಲೇಜ್ ಉಜಿರೆ 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top