ಅಮೃತ ಭಾರತೀ ಕಟ್ಟಡ, ಸ್ಮರಣ ಸಂಚಿಕೆ ಲೋಕಾರ್ಪಣೆ, ಗುರುನಮನ, ಗೋಷ್ಠಿಗಳು, ಮನರಂಜನಾ ಸಂಭ್ರಮ
ಮುಡಿಪು: ಮುಡಿಪು ಶ್ರೀ ಭಾರತೀ ಶಾಲೆಯ 75ನೇ ವರ್ಷಾಚರಣೆ “ಅಮೃತ ಭಾರತೀ” ಹೆಸರಿನಲ್ಲಿ ನ.12ರಂದು ಭಾನುವಾರ ಅದ್ಧೂರಿಯಿಂದ ಸಂಪನ್ನಗೊಂಡಿತು. ವಸ್ತುಪ್ರದರ್ಶನ, ಮನರಂಜನೆ, ಸೇವಾಕಾರ್ಯ, ರಕ್ತದಾನ ಶಿಬಿರ, ಗುರುನಮನ ಹಾಗೂ ವಿವಿಧಗೋಷ್ಠಿಗಳು ಅರ್ಥಪೂರ್ಣ ಅಮೃತ ಮಹೋತ್ಸವದ ಸೊಬಗು ಹೆಚ್ಚಿಸಿದವು.
ನ.12ರಂದು ಬೆಳಗ್ಗೆ ವಿವಿಧ ಗೋಷ್ಠಿಗಳನ್ನು ಮಂಗಳೂರು ವಿ.ವಿ. ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಅಧ್ಯಕ್ಷ ಪ್ರೊ.ಜಿ.ವಿ.ಜೋಷಿ, ವೈದ್ಯಕೀಯ ಶಿಬಿರವನ್ನು ನಿಟ್ಟೆ ಪರಿಗಣಿತ ವಿ.ವಿ. ನಿಕಟಪೂರ್ವ ಕುಲಪತಿ, ಐಎಸ್ ಐಆರ್ ಹಾಗೂ ಸಿಆರ್ ಎಲ್ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ ಬಿ., ರಕ್ತದಾನ ಶಿಬಿರವನ್ನು ಬ್ಲಡ್ ಡೋನರ್ಸ್ ಅಸೋಸಿಯೇಶನ್ ಅಧ್ಯಕ್ಷ ನವಾಜ್ ನರಿಂಗಾನ, ನೆನಪಿನ ತರಗತಿ ಕೊಠಡಿಯನ್ನು ಮುಡಿಪು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ರಮೇಶ್ ಶೇಣವ ಚಕ್ರಕೋಡಿ, ಗ್ರಂಥಾಲಯವನ್ನು ಹಿರಿಯ ಸಾಹಿತಿ ಇರಾ ನೇಮು ಪೂಜಾರಿ, ವಸ್ತುಪ್ರದರ್ಶನವನ್ನು ಮುಡಿಪು ಸರ್ಕಾರಿ ಪ.ಪೂ.ಕಾಲೇಜ್ ಪ್ರಾಂಶುಪಾಲೆ ಪರಮೇಶ್ವರಿ ಉದ್ಘಾಟಿಸಿದರು.
ಕುರ್ನಾಡು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಗಣೇಶ್ ನಾಯಕ್ ಕುರ್ನಾಡುಗುತ್ತು ದೀಪ ಪ್ರಜ್ವಲನೆ ನೆರವೇರಿಸಿದರು. ಶಾಲೆಯ ನಿವೃತ್ತ ಹಿರಿಯ ಶಿಕ್ಷಕರಾದ ಎಂ.ಕೆ.ಲೀಲಾ, ಎ.ಸುಧಾ, ಎಂ.ರಾಮರಾವ್, ಶಶಿಕಲಾ ಜಿ. ಅವರಿಗೆ ಗುರುವಂದನೆ ನೆರವೇರಿಸಲಾಯಿತು.
ನೇತ್ರ ತಪಾಸಣಾ ಶಿಬಿರ, ನೇತ್ರದಾನ ನೋಂದಣಿ, ವೈದ್ಯಕೀಯ ತಪಾಸಣಾ ಶಿಬಿರ, ಅಂಗಾಂಗ ದಾನ ಹಾಗೂ ದೇಹದಾನ ಮಾಹಿತಿ, ರಕ್ತದಾನ ಶಿಬಿರಗಳು ನಡೆದವು.
ಸಮಾರಂಭದಲ್ಲಿ ದ.ಕ., ಉಡುಪಿ ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಕುರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ, ಕ್ಯಾಂಪ್ಕೊ ನಿರ್ದೇಶಕ ಮಹೇಶ್ ಚೌಟ, ಎ.ಎನ್.ರಾಮದಾಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ, ಕುರ್ನಾಡು ಗ್ರಾ.ಪಂ. ಅಧ್ಯಕ್ಷೆ ಲೋಲಾಕ್ಷಿ ಶೇಖರ ಶೆಟ್ಟಿ, ಮಾಜಿ ಅಧ್ಯಕ್ಷ ಸೂಫಿ ಕುಂಞಿ, ಮಂಗಳೂರು ವಕೀಲರ ಸಂಘ ನಿಕಟಪೂರ್ವ ಅಧ್ಯಕ್ಷ ನರಸಿಂಹ ಹೆಗ್ಡೆ, ಫಜೀರು ಗ್ರಾ.ಪಂ. ಅಧ್ಯಕ್ಷ ರಫೀಕ್, ಹಳೆ ವಿದ್ಯಾರ್ಥಿನಿ ವೀಣಾ ತೆಕ್ಕುಂಜ, ಉರಗತಜ್ನ ದಿಲೀಪ್ ಕುಮಾರ್ ಫಜೀರು, ಅಮರನಾಥ ಶೆಟ್ಟಿ ಸರಪಾಡಿ, ಡಾ.ಮಮತಾ ಆರ್. ರೈ, ಡಾ.ನಯನಾ ಗೌರಿ ಮತ್ತಿತರರಿದ್ದರು.
ಅಮೃತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಡಾ.ಅರುಣ್ ಪ್ರಸಾದ್ ಟಿ. ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನರಸಿಂಹ ಭಟ್ ಸ್ವಾಗತಿಸಿದರು. ಉಪಾಧ್ಯಕ್ಷ ನಿಶ್ಚಲ್ ಶೆಟ್ಟಿ ವಂದಿಸಿದರು. ಡಾ.ಮಂಜುಳಾ ಶೆಟ್ಟಿ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಮಂಜುಳಾ ಜಿ.ರಾವ್ ಇರಾ ನಿರ್ದೇಶನದ ಕೊಳಲು ಸಂಗೀತ ವಿದ್ಯಾಲಯ ವಿದ್ಯಾರ್ಥಿಗಳಿಂದ ಅಮೃತ ವರ್ಷಿಣಿ ಸಂಗೀತ ಕಾರ್ಯಕ್ರಮ, ಹಳೆ ವಿದ್ಯಾರ್ಥಿ ಶಿವಪ್ರಸಾದ ಜೋಗಿ ಬಳಗದಿಂದ ನಾದಸ್ವರ ವಾದನ, ಹಳೆ ವಿದ್ಯಾರ್ಥಿ ಚಂದ್ರಶೇಖರ ಕಣಂತೂರು ಅವರಿಂದ ಸ್ಯಾಕ್ಸೋಫೋನ್ ವಾದನ, ಶ್ರೀ ಭಾರತೀ ಶಾಲಾ ಮಕ್ಕಳಿಂದ ಅಮೃತ ಸಾಂಸ್ಕೃತಿಕ ವೈಭವ ಪ್ರದರ್ಶನ ನಡೆದವು.
ಸಭಾ ಕಾರ್ಯಕ್ರಮದ ಬಳಿಕ ಭಾರತೀ ಶಿಕ್ಷಣಾಮೃತ, ಭಾರತಿ ಮಹಿಳಾಮೃತ, ಭಾರತೀ ಕಥಾಮೃತ, ಭಾರತೀ ಕವನಾಮೃತ, ಭಾರತೀ ಚುಟುಕು ಗೋಷ್ಠಿಗಳು ನಡೆದವು. ಹಳೆ ವಿದ್ಯಾರ್ಥಿಗಳು ಗೋಷ್ಠಿಗಳನ್ನು ನಿರ್ವಹಿಸಿದರು.
ಕಟ್ಟಡ ಉದ್ಘಾಟನೆ, ಸ್ಮರಣ ಸಂಚಿಕೆ ಲೋಕಾರ್ಪಣೆ:
ಸಂಜೆ ಅಮೃತ ಭಾರತಿ ಅಮೃತ ಮಹೋತ್ಸವ ಕಟ್ಟಡ ಉದ್ಘಾಟನೆ ಬಳಿಕ ಸಮಾರೋಪ ಸಮಾರಂಭ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಮುಡಿಪು ಸಂತ ಜೋಸೆಫ್ ವಾಝ್ ಚರ್ಚ್ ಧರ್ಮಗುರುಗಳಾದ ಫಾ.ಅಸ್ಸಿಸ್ಸಿ ರೆಬೆಲ್ಲೋ ದಿವ್ಯ ಸಂದೇಶ ನೀಡಿದರು.
ಚೆನ್ನೈಯ ಉಷಾ ಫೈರ್ ಸೇಫ್ಟಿ ಆಂಡ್ ಇಕ್ವಿಪ್ಮೆಂಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಜಗದೀಶ ಅಡಪ ಕಡ್ವಾಯಿ ಅವರು, ಅಮೃತ ಭಾರತೀ ಹೆಸರಿನ ಅಮೃತ ಮಹೋತ್ಸವ ಕಟ್ಟಡವನ್ನು, ಪ್ಲಾಂಟ್ ಟೆಕ್ ಇಂಡಸ್ಟ್ರಿಯಲ್ ಸರ್ವಿಸಸ್ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಯ್ ಟಾರ್ಟ್ ಶಿಕ್ಷಕರ ಕೊಠಡಿಯನ್ನು ಉದ್ಘಾಟಿಸಿದರು. ಗಣ್ಯರು ಇದೇ ಸಂದರ್ಭ ಮಿನಿಹಾಲ್, ತರಗತಿ ಕೊಠಡಿ ಉದ್ಘಾಟಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಜಯಶೀಲ ಅಡಪರ ಸ್ಮರಣಾರ್ಥ ತೆಂಗು, ಕಂಗಿನ ತೋಟ ಉದ್ಘಾಟಿಸಲಾಯಿತು.
ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ವಿಶೇಷ ಆಹ್ವಾನಿತರಾಗಿದ್ದರು. ಪ್ರಮುಖರಾದ ಮಮತಾ ಡಿ.ಎಸ್.ಗಟ್ಟಿ, ಶೈಲಜಾ ಕೆ.ಟಿ. ಭಟ್, ಚಂದ್ರಹಾಸ ಕರ್ಕೇರ, ಜಗನ್ನಾಥ ಚೌಟ, ಸುಚರಿತ ಶೆಟ್ಟಿ, ರವೀಂದ್ರ ರೈ ಕಲ್ಲಿಮಾರು, ಶ್ರೀನಾಥ ಕೊಂಡೆ ಚಕ್ರಕೋಡಿ, ಮಂಜುನಾಥ ಡಿ.ಶೆಟ್ಟಿ ಇರಾ, ಪ್ರವೀಣ್ ಕುಮಾರ್ ಕೊಡಿಯಾಲಬೈಲು, ದೇವಿಪ್ರಸಾದ್ ಶೆಟ್ಟಿ, ನ್ಯಾಯವಾದಿ ಮೋಹನ್ ದಾಸ್ ರೈ, ಜಗದೀಶ ಶೆಟ್ಟಿ ಇರಾಗುತ್ತು, ಡಾ.ಮದನ್ ಮೋಹನ್ ನಾಯಕ್ ಅಡೇಕಳ, ಮಹಮ್ಮದ್ ಫಯಾಝ್ ಮುಡಿಪು, ಮಹಾಬಲ ಚೌಟ, ವೈ.ಬಿ.ಸುಂದರ್, ಕೃಷ್ಣ ಮೂಲ್ಯ, ನವೀನ್ ಪಾದಲ್ಡಾಡಿ, ವಿಜಯಕುಮಾರಿ, ಸಿದ್ಧಾರ್ಥ ಅಡಪ, ಅನೂಷಾ ಅಡಪ, ಚಂದ್ರಹಾಸ ಕಣಂತೂರು, ಶಾಲೆಯ ಸಂಚಾಲಕ ಸುಬ್ರಹ್ಮಣ್ಯ ಭಟ್ ಕೆ., ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಭಾರತೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮುರಳಿಮೋಹನ ಭಟ್ ಮತ್ತಿತರರು ಹಾಜರಿದ್ದರು.
ಸಮಾರಂಭದಲ್ಲಿ ಶಾಲೆಯ ಅಮೃತ ಮಹೋತ್ಸವ ನೆನಪಿಗೆ ಹೊರತರಲಾಗುವ “ಅಮೃತ ಭಾರತೀ” ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಶಾಲೆಗೆ ಸ್ಥಳದಾನ ಮಾಡಿದ ತನಿಯಪ್ಪ ಮೂಲ್ಯ ಅವರ ಪುತ್ರ ಮಂಜುನಾಥ ಮೂಲ್ಯ ಮಜಲು ಕುರ್ನಾಡು, ಕಟ್ಟಡ ಗುತ್ತಿಗೆದಾರ ನಾರಾಯಣಯ್ಯ ಅವರನ್ನು ಗೌರವಿಸಲಾಯಿತು. ಅಮೃತ ಮಹೋತ್ಸವ ಯಶಸ್ಸಿಗೆ ದುಡಿದ ವಿವಿಧ ಸಮಿತಿಗಳ ಪ್ರಮುಖರು, ಕಾರ್ಯಕರ್ತರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್. ಸ್ವಾಗತಿಸಿದರು. ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಮಹಮ್ಮದ್ ಅಸ್ಗರ್ ವಂದಿಸಿದರು.
ಎರಡೂ ದಿನ ಊಟೋಪಚಾರ, ಭಾರತಿ ಪ್ಲಾಟಿನಂ ಫೆಸ್ಟ್ ಹೆಸರಿನ ಮನರಂಜನಾ ವಸ್ತುಪ್ರದರ್ಶನ, ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಹೆಸರುಗಳ ಪಟ್ಟಿ ಪ್ರದರ್ಶನದೊಂದಿಗೆ ಮಾದರಿ ತರಗತಿ ಕೋಣೆ ರಚನೆ, ದೀಪಾವಳಿ ಸಿಹಿ ವಿತರಣೆ, ಸೆಲ್ಫೀ ಪಾಯಿಂಟ್ ಗಳಲ್ಲಿ ಫೋಟೋ ಸೆರೆ ಹಿಡಿಯುವ ಕಾರ್ಯಕ್ರಮ ಮತ್ತಿತರ ಹಲವು ಆಕರ್ಷಣೆಗಳನ್ನು ರೂಪಿಸಲಾಗಿತ್ತು. ಸಹಸ್ರಾರು ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಪೋಷಕರು ಪಾಲ್ಗೊಂಡರು.
ನ.11ರಂದು ಮುಡಿಪು ಪೇಟೆಯಲ್ಲಿ ಅಮೃತ ಭಾರತೀ ವೈಭವ ಹೆಸರಿನಲ್ಲಿ ಭವ್ಯ ಮೆರವಣಿಗೆ ನಡೆಯಿತು ಹಾಗೂ ಶಾಲೆಯ ಪ್ರಧಾನ ದ್ವಾರ ಹಾಗೂ ನವೀಕೃತ ಬಾಲವಿಹಾರ ಪ್ರದೇಶವನ್ನು ಉದ್ಘಾಟಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ