ಪುರುಷರ ವಾಲಿಬಾಲ್ ಟೂರ್ನಿ: ಆಳ್ವಾಸ್ ಕಾಲೇಜು ತಂಡಕ್ಕೆ ಪಾಟೀಲ್ ಸೌಕೂರ್ ಅಂತಯ್ಯ ಶೆಟ್ಟಿ ಸ್ಮಾರಕ ಫಲಕ

Upayuktha
0



ಉಜಿರೆ: ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ಮತ್ತು ಉಜಿರೆಯ ಎಸ್.ಡಿ.ಎಂ. ಕಾಲೇಜಿನ  ಜಂಟಿ ಆಶ್ರಯದಲ್ಲಿ ಬುಧವಾರ ಉಜಿರೆಯಲ್ಲಿ  ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ  ಅಂತರ ಕಾಲೇಜು ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ತೀವ್ರ ಸೆಣಸಾಟದೊಂದಿಗೆ ಆಳ್ವಾಸ್ ಕಾಲೇಜು ತಂಡ ಮತ್ತು ಅತಿಥೇಯ ಎಸ್.ಡಿ.ಎಂ. ಕಾಲೇಜು ತಂಡದ ಮಧ್ಯೆ ನಡೆದ ಅಂತಿಮ ನಿರ್ಣಯಕ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ಶ್ರೀ ಪಾಟೀಲ್ ಸೌಕೂರ್ ಅಂತಯ್ಯ ಶೆಟ್ಟಿ ಸ್ಮಾರಕ ಫಲಕ ಪಡೆಯಿತು. ಎಸ್.ಡಿ.ಎಂ. ಕಾಲೇಜು ತಂಡ  ರನ್ನರಪ್ ಸ್ಥಾನ ಪಡೆಯಿತು.




ಪಂದ್ಯಾಟಗಳ ವಿವರ: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮತ್ತು ಎಸ್.ಡಿ.ಎಂ. ಕಾಲೇಜು ತಂಡಗಳ ನಡುವೆ ನಡೆದ ಸೆಮಿಫೈನಲ್ ನಲ್ಲಿ 2-0 ಸೆಟ್ ನಿಂದ ಎಸ್.ಡಿ.ಎಂ. ಕಾಲೇಜು ತಂಡ ಅಂತಿಮ ಪಂದ್ಯಾಟಕ್ಕೆ ಆಯ್ಕೆಯಾಯಿತು.

ಇನ್ನೊಂದು ಸೆಮಿಫೈನಲ್‌ನಲ್ಲಿ ಆಳ್ವಾಸ್ ಕಾಲೇಜು ತಂಡವು ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜು ತಂಡವನ್ನು 2-0 ಸೆಟ್ ನಿಂದ ಮಣಿಸಿ ಅಂತಿಮ ಪಂದ್ಯಕ್ಕೆ ಆಯ್ಕೆಯಾಯಿತು.




ಅಂತಿಮ ಪಂದ್ಯ:

ಎಸ್.ಡಿ.ಎಂ. ಕಾಲೇಜು - ಆಳ್ವಾಸ್ ಕಾಲೇಜು

ಅಂಕಗಳು: 25 - 18

25 - 18

16 - 25

18 - 25


ತಲಾ ಎರಡು ಪಂದ್ಯಾಟಗಳಲ್ಲಿ ಸಮಾನವಾಗಿ ಗೆದ್ದುದರಿಂದ ಅಂತಿಮ ನಿರ್ಣಾಯಕ ಪಂದ್ಯ ನಡೆಸಲಾಯಿತು. ಆಳ್ವಾಸ್ ತಂಡ 15 ಅಂಕಗಳಿಸಿದರೆ ಎಸ್.ಡಿ.ಎಂ. ಕಾಲೇಜು ತಂಡ 10 ಅಂಕ ಗಳಿಸಿತು.

ಬೆಸ್ಟ್ ಸೆಟ್ಟರ್: ಸುಶೀಲ್, ಆಳ್ವಾಸ್ ಕಾಲೇಜು, ಮೂಡಬಿದ್ರೆ

ಬೆಸ್ಟ್ ಆಲ್ ರೌಂಡರ್: ಮನು, ಬಿ.ಎಲ್. ಆಳ್ವಾಸ್ ಕಾಲೇಜು, ಮೂಡಬಿದ್ರೆ

ಬೆಸ್ಟ್ ಲಿಬ್ರೊ: ಆಶಿಕ್ ಗೌಡ, ಎಸ್.ಡಿ.ಎಂ. ಕಾಲೇಜು, ಉಜಿರೆ

ಬೆಸ್ಟ್ ಅಟೇಕರ್ : ಉನಾನ್, ಆಳ್ವಾಸ್ ಕಾಲೇಜು, ಮೂಡಬಿದ್ರೆ




ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿ’ಸೋಜ, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಕುಮಾರ ಹೆಗ್ಡೆ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಬಾಲಭಾಸ್ಕರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯರ್ಶಿ ಎಸ್. ಸತೀಶ್ಚಂದ್ರ ವಿಜೇತರಿಗೆ ಫಲಕ ನೀಡಿದರು. ಪ್ರೊ. ಮಹೇಶ್ ಶೆಟ್ಟಿ, ದೈಹಿಕ ನಿರ್ದೇಶಕರುಗಳಾದ ರಮೇಶ್ ಮತ್ತು ಶಾರದಾ, ಸಂದೇಶ್ ಪೂಂಜ ಉಪಸ್ಥಿತರಿದ್ದರು. ಒಟ್ಟು 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದವು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top