ತಿಮ್ಮಾಪುರ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಲಿಂಗೈಕ್ಯ ವಿಜಯಮಾಂತ ಶಿವಯೋಗಿಗಳವರ ಜಾತ್ರೆಯ ಅಂಗವಾಗಿ ಗೌರಿ ಹುಣ್ಣಿಮೆಯಂದು ಅಡ್ಡ ಪಲ್ಲಕ್ಕಿ ಮಹೋತ್ಸವ ಸಡಗರದಿಂದ ಜರುಗಿತು.
ಅಂದು ಮುಂಜಾನೆ 12ಕ್ಕೆ ಶ್ರೀಮಠದಿಂದ ಪ್ರಾರಂಭಗೊಂಡ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀಮಠ ತಲುಪಿದ್ದು ಸಾಯಂಕಾಲ ಆರು ಗಂಟೆಗೆ ಅಡ್ಡ ಪಲ್ಲಕ್ಕಿಯಲ್ಲಿ ವಿಜಯ ಮಹಾಂತ ಶಿವಯೋಗಿಗಳ ಅವರ ಬೆಳ್ಳಿ ಮೂರ್ತಿ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾನಗಲ್ಲ ಕುಮಾರ ಶಿವಯೋಗಿಗಳ ಭಾವಚಿತ್ರ ಇಡಲಾಗಿತ್ತು ಮಾರ್ಗದುದ್ದಕ್ಕೂ ಸಾವಿರಾರು ಭಕ್ತರು ಹೂ ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು.
ವಿಜೃಂಭಣೆಯಿಂದ ನಡೆದ ಅಡ್ಡ ಪಲ್ಲಕ್ಕಿ ಮಹೋತ್ಸವ ನಾಡಿನ ವಿವಿಧ ಸಾಂಸ್ಕೃತಿಕ ಮೇಳಗಳು ಪ್ರಮುಖ ಆಕರ್ಷಣೆಗಳಾಗಿದ್ದವು ಈ ಅಡ್ಡ ಪಲ್ಲಕ್ಕಿ ಮಹೋತ್ಸವದಲ್ಲಿ ಮ್ಯೂಸಿಕಲ್ ತಂಡ ವಚನ ಶರಣ ಶರಣೀಯರ ಭಾವಗೀತೆಗಳ ಹಾಡುಗಾರಿಕೆ ಬ್ಯಾಂಡ್ ಸೆಟ್, ಕರಡಿ ಮಜಲು, ಡೊಳ್ಳಿನ ಮೇಳಗಳು ವಿವಿಧ ಭಜನಾ ತಂಡಗಳು ಭಾಗವಹಿಸಿ ಸೇರಿದ ಲಕ್ಷಾಂತರ ಭಕ್ತರ ಮನವನ್ನು ರಂಜಿಸಿದ್ದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ