ಕುಲಾಲ ಸಂಘ ಮುಂಬಯಿಯ ಮುಖವಾಣಿ "ಅಮೂಲ್ಯ"ದ ಬೆಳ್ಳಿ ಹಬ್ಬ ಸಮಾರೋಪ, ವಿಶೇಷ ಸಂಚಿಕೆ ಲೋಕಾರ್ಪಣೆ

Upayuktha
0

ಪತ್ರಿಕೆಯನ್ನು ಇನ್ನೂ ಉನ್ನತ ಮಟ್ಟದಲ್ಲಿ ಮುಂದುವರಿಸಲು ಎಲ್ಲರೂ ಕೈಜೋಡಿಸಬೇಕು: ರಘು ಎ ಮೂಲ್ಯ 



ಮುಂಬಯಿ: ಸಾಹಿತ್ಯ ಕ್ಷೇತ್ರದಲ್ಲಿ ಕುಲಾಲ ಸಮಾಜ ಬಂಧುಗಳು ತೊಡಗಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಮುಂಬೈ ಕುಲಾಲ ಸಂಘ 25 ವರ್ಷಗಳ ಹಿಂದೆ ಅಮೂಲ್ಯ ಪತ್ರಿಕೆಯನ್ನು ಲೋಕಾರ್ಪಣೆ ಗೊಳಿಸಿದೆ ಇಂದು ಸಮಾಜದ ಬಹುತೇಕ ಸಾಹಿತಿಗಳು ಪತ್ರಿಕೆ ಮೂಲಕ ಬೆಳಕಿಗೆ ಬಂದಿದ್ದಾರೆ ಅದು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಿದೆ. ಎಲ್ಲರ ಸಹಾಯ ಹಾಗೂ ಪ್ರೋತ್ಸಾಹದಿಂದ ವಿಶೇಷ ರೀತಿಯಲ್ಲಿ ಅರ್ಥಪೂರ್ಣವಾಗಿ 25ನೇ ವರ್ಷದ ಸಂಚಿಕೆ ಲೋಕಾರ್ಪಣೆ ನಡೆದಿದೆ. ಇಂದಿನ ಈ ಬೆಳ್ಳಿ ಹಬ್ಬ ಸಮಾರಂಭವು ಸಮಾಜದಲ್ಲಿ ಶಾಶ್ವತವಾಗಿ  ಉಳಿಯಲಿದೆ ಎಂದು ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ಪಾದೆಬೆಟ್ಟು ಅವರು ಈ ನುಡಿದರು.



ಕುಲಾಲ ಸಂಘ ಮುಂಬಯಿಯ ಮುಖವಾಣಿ ಅಮೂಲ್ಯ ತ್ರೈಮಾಸಿಕದ ಬೆಳ್ಳಿ ಹಬ್ಬ ಸಮಾರಂಭವು ನ.5 ರಂದು ನಂದಾದೀಪ ಹೈಸ್ಕೂಲ್ ಸಭಾಗ್ರಹ, ಜಯಪ್ರಕಾಶ್ ನಗರ್, ಗೋರೆಗಾಂವ್ ಪೂರ್ವ ಇಲ್ಲಿ ದಿ. ಪಿ.ಕೆ. ಸಾಲ್ಯಾನ್ ಸ್ಮಾರಕ ವೇದಿಕೆಯಲ್ಲಿ ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಘು ಎ ಮೂಲ್ಯ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಬಾರ ವ್ಯಕ್ತಪಡಿಸುತ್ತಾ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವ ಅವಕಾಶ ಒದಗಿದ್ದು ನನ್ನ ಸೌಭಾಗ್ಯ ಎಂದರು. ಜನಮನ ಗೆದ್ದ ನಮ್ಮ ಪತ್ರಿಕೆ ಅಮೂಲ್ಯ. ಪತ್ರಿಕೆ ಸಮಯಕ್ಕೆ ಸರಿಯಾಗಿ ಹೊರ ಬರುವಂತೆ ಸಂಪಾದಕ  ಶಂಕರ್ ವೈ ಮೂಲ್ಯ ಮತ್ತು ಮಂಡಳಿಗೆ ಅಪಾರವಾದ ಶ್ರಮ ವಹಿಸುತ್ತದೆ. ಪತ್ರಿಕೆಗೆ ಜಾಹೀರಾತನ್ನು ನೀಡಿ ಸಹಕರಿಸಿ, ಯುವ ಸಾಹಿತಿಗಳು, ಹೊಸ ಬರಹಗಾರರು ಪತ್ರಿಕೆ ಲೇಖನ ಬರಹಗಳನ್ನು ಕಳುಹಿಸಬೇಕು. ಅಂತರ್ಜಾಲದ ಈ ಕಾಲದಲ್ಲಿ ಪತ್ರಿಕೆಯನ್ನು ಇನ್ನೂ ಉನ್ನತ ಮಟ್ಟದಲ್ಲಿ ಮುಂದುವರಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.



ಸಂಘದ ಗೌರವ ಅಧ್ಯಕ್ಷರಾದ ಪಿ ದೇವದಾಸ್ ಎಲ್ ಕುಲಾಲ್ ಇವರ ಗೌರವ ಉಪಸ್ಥಿತಿಯಲ್ಲಿ ಸಂಪಾದಕರಾದ ಶಂಕರ್ ವೈ ಮೂಲ್ಯ ರ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಂಘದ ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್ ಅತಿಥಿಗಳನ್ನು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ, ಕರುಣಾಕರ ಬಿ. ಸಾಲ್ಯಾನ್ ಪ್ರಸ್ತಾವನೆ ಮಾತುಗಳನ್ನಾಡಿದರು.



ಗೌರವ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅವರು ಮಾತನಾಡುತ್ತಾ ಊರಿನ ನಮ್ಮ ಯಾವುದೇ ಅಭಿವೃದ್ದಿ ಕೆಲಸಕ್ಕೆ ನಮಗೆ ಶಕ್ತಿಯಾಗಿ ನಿಲ್ಲುವವರು ಮುಂಬಯಿಯ ನಮ್ಮ ಸಮಾಜ ಬಾಂಧವರು. ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಮುಂಬಯಿಗರ ನಮ್ಮ ಸಮಾಜದವರ ಕೊಡುಗೆಯನ್ನು ಯಾವತ್ತೂ ಮರೆಯುವಂತಿಲ್ಲ. ಅಮೂಲ್ಯ ಪತ್ರಿಕೆಯು ಸಮಸ್ತ ಕುಲಾಲರ ದ್ವನಿಯಾಗಲಿ. ಸಮಾಜದ ಎಲ್ಲಾ ಪ್ರತಿಭೆಗಳನ್ನು ಈ ಪತ್ರಿಕೆ ಗುರುತಿಸಿ ಬೆಳಕಿಗೆ ತರಲಿ ಎನ್ನುತ್ತಾ ಮಾತೃ ಸಂಘವು ಎರಡು ಯೋಜನೆಗಳಾದ ಸಮಾಜದ ಬಡ ಹೆಣ್ಣು ಮಕ್ಕಳಿಗೆ ಉಚಿತ ಹಾಸ್ಟೆಲ್ ಹಾಗೂ ವಿವಾಹವಾಗುವ ವಯಸ್ಸಿಗೆ ಬಂದಂತಹ ಸಮಾಜದ ಯುವ ಜನಾಂಗಕ್ಕೆ ಕರೆದು ಪ್ರತೀ ವರ್ಷ ವೀರನಾರಾಯಣ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ವೈವಾಹಿಕ ಪ್ರಸ್ತಾಪ ವನ್ನು ಮಾಡುವ ಈ ಎಲ್ಲಾ ಯೋಜನೆಗಳಿಗೆ ಮುಂಬಯಿಯ ಸಮಾಜ ಬಾಂದವರು ಉಪಸ್ಥಿತರಿದ್ದು ಸಹಕರಿಸಬೇಕೆಂದರು.


ಗೌರವ ಅತಿಥಿ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಕುಲಶೇಖರ ಅಧ್ಯಕ್ಷರಾದ ಬಿ. ಪ್ರೇಮಾನಂದ ಕುಲಾಲ್ ಮಾತನಾಡುತ್ತಾ, ನಮ್ಮ ಹಿರಿಯರು 94 ವರ್ಷಗಳ ಹಿಂದೆ ಸಂಘಟನೆಯನ್ನು ಕಟ್ಟಿ ಅದಕ್ಕೆ ಪೂರಕವಾಗಿ ಜ್ಯೋತಿ ಕ್ರೆಡಿಟ್ ಸೊಸೈಟಿಯನ್ನು ಕಟ್ಟಿ ಸಮಾಜದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬಂದಿರುವ ಅಮೂಲ್ಯ ಪತ್ರಿಕೆಗೆ ಇಂದು 25 ರ ಸಂಭ್ರಮ. ನನಗೆ ನೀಡಿದ ಗೌರವಕ್ಕೆ ನಾನು ಚಿರಋಣಿಯಾಗಿದ್ದೇನೆ. ದೇವಸ್ಥಾನಕ್ಕೆ ನೀಡಿದ ನಿಮ್ಮ ಸಹಕಾರ ಎಂದೂ ಮರೆಯುವಂತಿಲ್ಲ. ಅಮೂಲ್ಯ ಪತ್ರಿಕೆ ಸಮಾಜದ ಎಲ್ಲರಿಗೂ ತಲಪುವಂತಾಗಲಿ ಎಂದರು.


ತುಳು ವಿಚಾರಗೋಷ್ಠಿ- ಮಾಧ್ಯಮ ಕ್ಷೇತ್ರದಲ್ಲಿ ಕುಲಾಲರು ಎಂಬ ವಿಷಯದ ಬಗ್ಗೆ ಅಬ್ಬಕ್ಕ ಟಿವಿ ಮಂಗಳೂರು ಇದರ ಆಡಳಿತ ನಿರ್ದೇಶಕರಾದ ಶಶಿಧರ ಪೊಯ್ಯತ್ತಬೈಲ್ ಮಾತನಾಡಿದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗದ ಅಯ್ಯ ಪ್ಯಾಕರ್ಸ್ ಅಂಡ್ ಮೂವರ್ಸ್ ಮುಂಬೈ ಇದರ ಸಿಎಂಡಿ ಅಶೋಕ್ ರಾಜು ಮೂಲ್ಯ ಧಾಣ್. ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲ್ಯಾನ್, ಮುಂಬಯಿಯ ಉದ್ಯಮಿ ದಾನಿ ಸುನಿಲ್ ಆರ್. ಸಾಲ್ಯಾನ್, ಅಂಬರ್ನಾಥ ನ ಜಯದೀಪ್ ಕನ್ಸ್ಟ್ರಕ್ಷನ್ ನ ಮಾಲಕರಾದ ಜಗದೀಶ್ ಆರ್ ಭಂಜನ್, ಗೌರವ ಅತಿಥಿಗಳಾದ ನಾಸಿಕ್ ಹೋಟೆಲ್ ಉದ್ಯಮಿ ಸಂಜೀವ ಕೆ ಬಂಗೇರ,  ಪುಣೆಯ ಉದ್ಯಮಿ ಎಸ್, ಅರ್. ಬಂಜನ್, ನೇರುಳ್ ಹರೀಶ್ ಹಾಸ್ಪಿಟಲ್‌ನ ಆಡಳಿತ ನಿರ್ದೇಶಕ ಡಾ.ಹರೀಶ್ ಬಿ. ಸಾಲ್ಯಾನ್, ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್, ಸದಾನಂದ ಎಸ್. ಕುಲಾಲ್, ಸಂಘದ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಸಂಜೀವ ಬಂಗೇರ (ಸಿಎಸ್‌ಟಿ  ಮುಲೂಂಡ್ ಮಾನ್ಕುರ್ಡ್), ಆನಂದ ಕೆ. ಕುಲಾಲ್, (ಚರ್ಚ್ ಗೇಟ್ ದಹಿಸರ್), ಮೋಹನ್ ಎಂ ಬಂಜನ್ (ಮೀರಾ ರೋಡ್ ವಿರಾರ್), ಸದಾನಂದ ಸಾಲ್ಯಾನ್, ಕುಷಾ ಕುಲಾಲ್, ಅಮೂಲ್ಯ ಉಪ ಸಂಪಾದಕ ಆನಂದ ಬಿ. ಮೂಲ್ಯ, ಜೊತೆ ಕಾರ್ಯದರ್ಶಿ ಎಲ್ ಅರ್ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.



ಸಮಾರಂಭದಲ್ಲಿ ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ದಂಪತಿ, ಅಮೂಲ್ಯ ಸಂಪಾದಕರಾದ ಶಂಕರ್ ವೈ ಮೂಲ್ಯ ದಂಪತಿ ಬಿ. ಪ್ರೇಮಾನಂದ ಕುಲಾಲ್ ದಂಪತಿಯನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ಮುದ್ರಣ ವಿನ್ಯಾಸಗಾರ ವಾಮನ್ ಡಿ ಮೂಲ್ಯ ಅದ್ಯಪಾಡಿ ದಂಪತಿ, ಪತ್ರಕರ್ತ ಗುರುರಾಜ್ ಪೋಟ್ನಿಸ್, ಮತ್ತು ಪತ್ರಕರ್ತ ಹಾಗೂ ಸಂಘಟಕ ಬಿ. ದಿನೇಶ್ ಕುಲಾಲ್, ದಂಪತಿಯನ್ನು ಗೌರವಿಲಾಯಿತು.



ಕಾರ್ಯಕ್ರಮಗಳನ್ನು ರಂಗ ಕಲಾವಿದ ಹೆಚ್ ಕೆ ನಯನಾಡು ನಿರ್ವಹಿಸಿದರು. ಆನಂದ ಬಿ ಮೂಲ್ಯ ವಂದಿಸಿದರು. ಜೊತೆ ಕಾರ್ಯದರ್ಶಿಗಳಾದ ಎಲ್ ಆರ್ ಮೂಲ್ಯ ಮತ್ತು ಜೊತೆ ಕೋಶಾಧಿಕಾರಿ ಸುನಿಲ್ ಕುಲಾಲ್, ಅಮೂಲ್ಯ ಉಪ ಸಂಪಾದಕರಾದ ಆನಂದ ಬಿ. ಮೂಲ್ಯ, ಸಂಪಾದಕ ಮಂಡಳಿಯ ರಘು ಎ ಮೂಲ್ಯ, ಗಿರೀಶ್ ಬಿ ಸಾಲಿಯಾನ್, ಡಿ ಐ ಮೂಲ್ಯ, ಪಿ ಶೇಖರ್ ಮೂಲ್ಯ,  ರಘುನಾಥ್  ಕರ್ಕೇರ, ವಾಮನ್ ಡಿ ಮೂಲ್ಯ ಅದ್ಯಪಾಡಿ, ಸೂರಜ್ ಹಂಡೆಲ್, ಎಲ್ ಆರ್ ಮೂಲ್ಯ, ಅಶೋಕ್ ಬಿ ಕುಲಾಲ್, ಕುಲಾಲ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸ್ಥಳೀಯ ಸಮಿತಿಗಳ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು.

------+


ಪತ್ರಿಕೆ ಉಳಿಯಲು ಓದುಗರು ಚಂದಾದಾರರಾಗಬೇಕು: ಸಂಪಾದಕ ಶಂಕರ್ ವೈ ಮೂಲ್ಯ


'ಅಮೂಲ್ಯ' ಸಂಪಾದಕರಾದ ಶಂಕರ್ ವೈ ಮೂಲ್ಯ ಅವರು ವಿಶೇಷ ಸಂಚಿಕೆ ಬಗ್ಗೆ ಮಾತನಾಡುತ್ತಾ ಪತ್ರಿಕೆ 25 ವರ್ಷ ಸಮರ್ಥ ರೀತಿಯಲ್ಲಿ ಓದುಗರನ್ನು ತಲುಪುವಲ್ಲಿ ಸಂಘದ ಮತ್ತು ಅಮೂಲ್ಯ ಪತ್ರಿಕಾ ಸಂಪಾದಕ ಮಂಡಳಿ ಅಪಾರವಾದ ಶ್ರಮವಹಿಸುತ್ತಿದೆ. ಪತ್ರಿಕೆಯನ್ನು ಜಾಹೀರಾತು ನೀಡಿ ಸಮಾಜ ಬಾಂಧವರು ಮತ್ತು ನಮ್ಮ ಹಿತೈಷಿಗಳು ಬೆಳೆಸಿದ್ದಾರೆ. ಬೆಳ್ಳಿಹಬ್ಬ ಸಂಭ್ರಮ ಆಚರಣೆ ಮಾಡಲು ಸಂಘದ ಸರ್ವ ಸದಸ್ಯರು ಸಮಾಜ ಬಾಂಧವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಅವರೆಲ್ಲರ ಪರಿಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಯಿತು. ಹಿತೈಷಿಗಳೆಲ್ಲರೂ ಅಮೂಲ್ಯ ಪತ್ರಿಕೆಯ ಚಂದಾದಾರರಾಗಬೇಕು ಎಂದು ವಿನಂತಿಸಿದರು.


------+----------------

ಅಮೂಲ್ಯ ಹೆಸರಿಗೆ ಮಹತ್ವವಿದೆ: ಆಚಾರ್ಯ ಪ್ರಹ್ಲಾದ ಆಚಾರ್ಯ ಆರ್ ನಾಗರಹಳ್ಳಿ


ಅಮೂಲ್ಯ ವಿಶೇಷ ಸಂಚಿಕೆಯನ್ನು ಸರ್ವಜ್ಞ ವಿದ್ಯಾಪೀಠ ವಿರಾರ್ ಪಶ್ಚಿಮ ಇದರ ಕುಲಪತಿ ಆಚಾರ್ಯ ಪ್ರಹ್ಲಾದ ಆಚಾರ್ಯ ಆರ್ ನಾಗರಹಳ್ಳಿ ಬಿಡುಗಡೆಗೊಳಿಸಿದರು. ಆ ನಂತರ ಮಾತನಾಡಿದ ಅವರು ಸಂಕೋಚವಿಲ್ಲದೆ ಮನಸ್ಸಿನಲ್ಲಿರುವ ಸಮಾಜಕ್ಕೆ ಉಪಯೋಗವಾಗುವ ವಿಚಾರಗಳನ್ನು ವ್ಯಕ್ತಮಾಡುವು ಕೃತಿ ಪತ್ರಿಕೆ. ಮುಂಬಯಿಯಲ್ಲಿ ಸುಮಾರು 20-30 ವರ್ಷಗಳ ಹಿಂದೆ ಪತ್ರಿಕೆ ಓದುಗರ ಸಂಖ್ಯೆ ಬಹಳ ಇತ್ತು. ಆದರೆ ಇಂದು ಎಲ್ಲರಲ್ಲೂ ಮೊಬೈಲ್ ಇದೆ. ಪತ್ರಿಕೆಯನ್ನು 25 ವರ್ಷ ನಡೆಸುವುದು ಒಂದು ಸಾಹಸ. ಅಮೂಲ್ಯ ಹೆಸರಿಗೆ ಮಹತ್ವವಿದೆ. ಈ ಪತ್ರಿಕೆಯನ್ನು ಆರಂಭದಲ್ಲಿ ನೋಡಿದ್ದೆ. ನಾನು ಬೆಳೆದದ್ದು ತುಳು ಸಮಾಜದ ಮಧ್ಯೆ. ಸಮಾಜಕ್ಕೆ ಈ ಪತ್ರಿಕೆ ಹೆಚ್ಚಿನ ಮಟ್ಟಕ್ಕೆ ಪ್ರಯೋಜನಕಾರಿಯಾಗಲಿ ಎಂದು ಶುಭ ಹಾರೈಸಿದರು. 

------------


ಮುಂಬೈ ಸಂಘಸಂಸ್ಥೆಗಳ ಕನ್ನಡ ಪತ್ರಿಕೆಗಳು- ಅಂದು ಇಂದು": ವಿಚಾರಗೋಷ್ಟಿ

 

ನಾಲ್ಕು ಹಂತಗಳಲ್ಲಿದೆ ಮುಂಬೈ ಕನ್ನಡ ಪತ್ರಿಕಾ ರಂಗದ ಇತಿಹಾಸ: ಶ್ರೀನಿವಾಸ ಜೋಕಟ್ಟೆ


'ಮುಂಬೈ ಸಂಘಸಂಸ್ಥೆಗಳ ಕನ್ನಡ ಪತ್ರಿಕೆಗಳು- ಅಂದು ಇಂದು" ವಿಚಾರ ಗೋಷ್ಟಿಯಲ್ಲಿ ಮಾತನಾಡಿದ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆ ಅವರು ಮುಂಬೈಯ ಕನ್ನಡ ಪತ್ರಿಕಾರಂಗವನ್ನು ನಾಲ್ಕು ಹಂತಗಳಲ್ಲಿ ನಾವು ಗುರುತಿಸಬಹುದು ಎಂದರು.


ಅರುವತ್ತರ ದಶಕದ ತನಕದ ಸ್ವತಂತ್ರ ಪತ್ರಿಕೆಗಳ ಕಾಲ, 70ರ ದಶಕದ ನಂತರ ಜಾತಿ ಸಂಘಗಳು ಆರಂಭಿಸಿದ ಕನ್ನಡ ಮಾಸಿಕ ತ್ರೈಮಾಸಿಕಗಳು, 90ರ ದಶಕದಲ್ಲಿ ಕನ್ನಡ ದೈನಿಕಗಳ ಆರಂಭ, ಹಾಗೂ ಕೋವಿಡ್ 19 ರ ಕಾಲದ ನಂತರದ ಕನ್ನಡ ಪತ್ರಿಕಾರಂಗ- ಹೀಗೆ ನಾಲ್ಕು ಹಂತಗಳನ್ನು ತಿಳಿಸಿದ ಜೋಕಟ್ಟೆ ಅವರು, ಕೆಲವು ಸಂಘ ಸಂಸ್ಥೆಗಳು 4 ಪುಟ, 12 ಪುಟ, 16 ಪುಟವಷ್ಟೇ ತಂದರೆ ಕೇವಲ ಐದಾರು ಮಾಸಪತ್ರಿಕೆಗಳು ಮಾತ್ರ ಐವತ್ತು ಪುಟಗಳಿಂದ ಹಿಡಿದು ಎಪ್ಪತ್ತು- ಎಂಬತ್ತು ಪುಟಗಳವರೆಗೂ ಪ್ರಕಟಿಸುತ್ತವೆ.  ಒಂದೊಮ್ಮೆ ಸ್ವತಂತ್ರ ಪತ್ರಿಕೆಗಳಲ್ಲಿ ಬರುತ್ತಿದ್ದ ರಂಗವಿಮರ್ಶೆಗಳಿಗೆ ಗಲಾಟೆ ಆದದ್ದೂ ಇದೆ. ಇಂದು ಆ ರೀತಿಯ ಯಾವ ವಿಮರ್ಶೆಗಳೂ ಬರುತ್ತಿಲ್ಲ. ಇಂದು ಪ್ರಾದೇಶಿಕ ಸಮಿತಿಗಳು ಇರುವ ಜಾತಿ ಸಂಘಗಳ ಪತ್ರಿಕೆಗಳಲ್ಲಿ ಅವರದೇ ಕಾರ್ಯಕ್ರಮಗಳ ವರದಿ ಹೆಚ್ಚು ತುಂಬಿರುತ್ತವೆ. ಲೇಖನಗಳಿಗೆ ಅಲ್ಲಿ ಪುಟಗಳು ಸಿಗದಂತಹ ದೃಶ್ಯ ಇದೆ. ಇಂದು ಇಂಗ್ಲಿಷ್ ಪತ್ರಿಕೆಗಳು ಕೂಡ ಪುಟಗಳ ಸಂಖ್ಯೆ ಹೆಚ್ಚಿಸಿವೆ. ಆದರೆ ಕಲರ್ ಪುಟಗಳು, ಆಕರ್ಷಕ ವಿನ್ಯಾಸಗಳಿಂದ ಇಂದಿನ (ಜಾತಿ) ಸಂಘ ಸಂಸ್ಥೆಗಳ ಪತ್ರಿಕೆಗಳು ಹೊರಬರುತ್ತಿವೆ. ಒಂದೊಮ್ಮೆ ಮಾಸಿಕಗಳಿಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜಾಹೀರಾತುಗಳು ಸಿಗುತ್ತಿದ್ದರೆ ಇಂದು ಶ್ರದ್ಧಾಂಜಲಿ, ಹುಟ್ಟುಹಬ್ಬಗಳ ಜಾಹೀರಾತುಗಳೇ ಹೆಚ್ಚಾಗಿ ಮಾಸಿಕಗಳಲ್ಲಿ ಕಾಣುತ್ತಿವೆ. ಮುಂಬೈಯಲ್ಲಿ ದೈನಿಕಗಳು ಪ್ರಕಟವಾದ ನಂತರ ಮಾಸ ಪತ್ರಿಕೆಗಳ ವರದಿಗಳು ಹಿಂದಿನಂತೆ ಕುತೂಹಲ ಉಳಿಸುತ್ತಿಲ್ಲ. ಕಾರಣ ಅವೆಲ್ಲ ದೈನಿಕಗಳಲ್ಲಿ ಆಗಲೇ ಪ್ರಕಟವಾಗಿ ಬಂದಿರುತ್ತವೆ, ಜನರೂ ಓದಿರುತ್ತಾರೆ.ಸಂಘಸಂಸ್ಥೆಗಳ ಸದಸ್ಯರು ತಮ್ಮ ಮುಖವಾಣಿಗಳ‌ನ್ನು ಓದಬೇಕು, ಏನಾದರೂ ಬರೆಯುವ ಹವ್ಯಾಸ ಸದಸ್ಯರು ರೂಢಿಸಿಕೊಳ್ಳಬೇಕು ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top