ಕನ್ನಡ ರಾಜ್ಯೋತ್ಸವವನ್ನು ಬೇಧ ಭಾವವಿಲ್ಲದೆ ಕನ್ನಡಿಗರೆಲ್ಲರು ಒಟ್ಟಾಗಿ ಆಚರಿಸಬೇಕು: ಡಾ.ಆರ್.ವಾದಿರಾಜು

Upayuktha
0



ಬೆಂಗಳೂರು: ಕನ್ನಡ ರಾಜ್ಯೋತ್ಸವವನ್ನು ಯಾವುದೇ ಬೇಧ ಭಾವವಿಲ್ಲದೆ ಕನ್ನಡಿಗರೆಲ್ಲರು ಒಟ್ಟಾಗಿ ತಾಯಿ ಭುವನೇಶ್ವರಿಯ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಬೇಕು ಎಂದು  ಬೆಂಗಳೂರು ವಿಜಯ ಕಾಲೇಜಿನ ಪ್ರಾಧ್ಯಾಪಕರು, ಕವಿ, ಲೇಖಕ ಮತ್ತು ವಿಮರ್ಶಕರು ಆದ ಡಾ.ಆರ್.ವಾದಿರಾಜು ಹೇಳಿದರು.




ಅವರು ನ.27 ಸೋಮವಾರದಂದು ಶ್ರೀ ಕೃಷ್ಣ ಪದವಿ ಕಾಲೇಜು ಬೆಂಗಳೂರಿನಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. 1956ರಲ್ಲಿ ಕನ್ನಡ ಮಾತನಾಡುವ ಭಾಷಿಕರನ್ನು ಒಂದೆಡೆ ಸೇರಿಸಿ ಮೈಸೂರು ರಾಜ್ಯವನ್ನಾಗಿ ಮಾಡಿದ್ದರ ವಿಷಯವನ್ನ ತಿಳಿಸಿಕೊಟ್ಟರು. 1973ರ ನವೆಂಬರ್ 1ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾದ ದೇವರಾಜು ಅರಸುರವರ ಕಾಲದಲ್ಲಿ ‘’ಕರ್ನಾಟಕ’’ ಎಂದು ನಾಮಕರಣ ಮಾಡಿದ್ದು ಇಲ್ಲಿಗೆ 50ವರ್ಷಗಳು ತುಂಬಿದೆ. ಕನ್ನಡ ಭಾಷೆಗೆ ಪ್ರಪಂಚದಲ್ಲಿಯೇ ಸರಳ, ಸಜ್ಜನಿಕೆ,ಶಾಸ್ತ್ರೀಯ ಸ್ಥಾನಮಾನಗಳು ದೊರಕಿವೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ, ಪ್ರಪಂಚದಲ್ಲಿ ಯಾವ ಭಾಷೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿಲ್ಲ. ಇದರಿಂದ ಪ್ರತಿಯೊಬ್ಬರು ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.




ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಂ.ರುಕ್ಮಾಂಗದನಾಯ್ಡುರವರು ಮಾತನಾಡುತ್ತಾ, ಪ್ರತಿಯೊಬ್ಬರು ತಮ್ಮ ತಂದೆ ತಾಯಿಗೆ ಕೊಡುವ ಗೌರವವನ್ನು ನಮ್ಮ ಮಾತೃ ಭಾಷೆಯಾದ ಕನ್ನಡಕ್ಕೆ ಗೌರವವನ್ನು ನೀಡಬೇಕು. ವಿದೇಶಗಳಿಂದ ಬರುವ ವ್ಯಕ್ತಿಗಳು ಕನ್ನಡವನ್ನು ಕಲಿಯಲು ಆಸಕ್ತಿ ವಹಿಸಿದ್ದಾರೆ. ಇದರಿಂದ ಕನ್ನಡ ಭಾಷೆಯ ಮೇಲಿನ ಅಭಿಮಾನ ಪ್ರೀತಿಯನ್ನು ಕಾಣಬಹುದು. ಈ ನಾಡಿನಲ್ಲಿ ಸಾಧು, ಸಂತರು. ಕವಿಗಳು ಜನಿಸಿದ್ದು ಭಾಷೆಯ ಬೆಳವಣಿಗೆಗಾಗಿ ಶ್ರಮ ವಹಿಸಿರುವುದು ಅತ್ಯಂತ ಶ್ಲಾಘನೀಯ. ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಸಂಸ್ಕøತಿ ಬಗ್ಗೆ ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.




ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಎಸ್.ಪಿ. ಮನೋಹರ್‍ರವರು, ಸ್ನಾತಕೋತ್ತರ ವಿಭಾಗದ ನಿರ್ದೇಶಕರಾದ ಪ್ರೊ.ವೇಣುಗೋಪಾಲ್‍ರವರು, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಉಷಾಕುಮಾರಿಯವರು ಹಾಗೂ ಎಲ್ಲಾ ವಿಭಾಗದ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top