ಕ್ಯಾಪ್ಟನ್ ಪ್ರಾಂಜಲ್ ಬಲಿದಾನ ವ್ಯರ್ಥವಾಗದಿರಲಿ: ಡಾ ಚೂಂತಾರು

Upayuktha
0



ಮಂಗಳೂರು: ದೇಶದ ರಕ್ಷಣೆಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ಹುತಾತ್ಮರಾದ ಶ್ರೀ ಕ್ಯಾಪ್ಟನ್ ಪ್ರಾಂಜಲ್ ಅವರು ನಮ್ಮ ಯುವ ಪೀಳಿಗೆಗೆ ಮಾದರಿ. ಅವರ ತ್ಯಾಗ ಮತ್ತು ಬಲಿದಾನ ವ್ಯರ್ಥವಾಗದಿರಲಿ. ಭಯೋತ್ಪಾದನೆ ಮತ್ತು ಹಿಂಸಾಚಾರ ವನ್ನು ಬೇರು ಸಮೇತ ಕಿತ್ತು ಹಾಕಿ ಅಗಲಿದ ಕ್ಯಾಪ್ಟನ್ ಪ್ರಾಂಜಲ್ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ನಾವೆಲ್ಲಾ ನಮ್ಮ ಜಾತಿ ಮತ ಧರ್ಮ ಎಂದು ಕಚ್ಚಾಡದೆ, ದೇಶದ ಆಂತರಿಕ ಭದ್ರತೆ ಮತ್ತು ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಕಟಿಬಧ್ಧರಾಗಬೇಕಾಗಿದೆ. ಅದುವೇ ನಾವು ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ನಾವು ನೀಡುವ ಅತಿ ದೊಡ್ಡ ಗೌರವ ಮತ್ತು ಶ್ರದ್ಧಾಂಜಲಿ ಎಂದು ದ ಕ ಜಿಲ್ಲಾ ಗ್ರಹ ರಕ್ಷಕ ದಳದ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.




ದ ಕ ಜಿಲ್ಲಾ ಗ್ರಹ ರಕ್ಷಕ ದಳ ಮತ್ತು ದ ಕ ಜಿಲ್ಲಾ ಪೌರ ರಕ್ಷಣಾ ಪಡೆ ವತಿಯಿಂದ ಇತ್ತೀಚೆಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮ ರಾದ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಪುಷ್ಪ ನಮನ, ಶ್ರದ್ಧಾಂಜಲಿ ಸಭೆ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಅವರು ನೇತೃತ್ವದಲ್ಲಿ 27 ಸೋಮವಾರದಂದು ಇಳಿಸಂಜೆ ದ ಕ  ಜಿಲ್ಲಾ ಗ್ರಹ ರಕ್ಷಕ ಕಛೇರಿಯಲ್ಲಿ ನಡೆಯಿತು. ಮೊಂಬತ್ತಿ ಹಚ್ಚಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. 




ಈ ಸಂದರ್ಭದಲ್ಲಿ ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ ಶೆರಾ, ಪೌರ ರಕ್ಷಣಾ ಪಡೆ ಯ ಶ್ರೀ ಸಂತೋಷ್ ಪೀಟರ್, ಶ್ರೀ ನಿತಿನ್, ಹಿರಿಯ ಗ್ರಹ ರಕ್ಷಕ ರಾದ ಶ್ರೀ ಸುನಿಲ್,ಕನಕಪ್ಪ, ದಿವಾಕರ್,ಹೊನ್ನಪ್ಪ, ಪ್ರಶಾಂತ್,ಜ್ಞಾನೇಶ್ ಹಾಗೂ ಇತರರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top