ಮಂಗಳೂರು: ಕೇಂದ್ರ ಕಛೇರಿಯ ಆದೇಶದಂತೆ ನವೆಂಬರ್ 1 ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ, ಮೇರಿಹಿಲ್ ಮಂಗಳೂರು ಇಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಹಾಗೂ ಕಛೇರಿಯ ಸಿಬ್ಬಂದಿಗಳು ಮತ್ತು ಗೃಹರಕ್ಷಕ/ ಗೃಹರಕ್ಷಕಿಯರು ರಾಷ್ಟ್ರಗೀತೆ,ನಾಡು ಗೀತೆ ಮತ್ತು 5 ಕನ್ನಡ ಗೀತೆಗಳನ್ನು ಹಾಡಿದರು.
ಈ ಕಾರ್ಯಕ್ರಮದಲ್ಲಿ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ, ಮಂಗಳೂರು ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಮಾರ್ಕ್ ಶೇರಾ, ಕಿರಣ್ಮಯಿ, ರಮಣಿ, ಅಂಬಿಕಾ, ಮಮತ, ಶ್ರೀಲತಾ, ಗೃಹರಕ್ಷಕ ಗೃಹರಕ್ಷಕಿಯರಾದ ಸುಲೋಚನಾ, ನಮಿತಾ ಬಾಲಕೃಷ್ಣ, ರೇವತಿ ದಿನೇಶ್, ಉಷಾ, ನೂರ್‍ಜಹಾನ್, ಕವಿತಾ, ಜಯಂತಿ, ಭವ್ಯಶ್ರೀ, ಖತೀಜಮ್ಮ, ಸಂದೇಶ್, ದಿವಾಕರ್, ಸುಮಂತ್, ಮಾಲತೇಶ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


