ಕೆ.ಆರ್.ಪೇಟೆ: ಪರಿಚಯ ಪ್ರಕಾಶನ, ತಾಲ್ಲೂಕು ಯುವ ಬರಹಗಾರರ ಬಳಗ, ಪ್ರಗತಿ ಶಿಕ್ಷಣ ಸಂಸ್ಥೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ಕರುನಾಡು ಯುವಜನ ವೇದಿಕೆ, ಕರ್ನಾಟಕ ರಕ್ಷಣಾ ಸೇನೆ, ಜಯಕರ್ನಾಟಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕೆ.ಆರ್.ಪೇಟೆ ಪಟ್ಟಣದ ಹಳೇ ಮೈಸೂರು ರಸ್ತೆಯಲ್ಲಿರುವ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.11ರಂದು ಮಧ್ಯಾಹ್ನ 2 ಗಂಟೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 'ಪುಸ್ತಕ ಮೇಳ(ಹಬ್ಬ) ಹಾಗೂ ದೀಪಾವಳಿ ಕವಿಗೋಷ್ಠಿ'ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯರವರು ತಿಳಿಸಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುಸ್ತಕ ಮೇಳ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪುಸ್ತಕ ಹಬ್ಬವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅಂಚಿ ಸಣ್ಣಸ್ವಾಮಿಗೌಡ ಉದ್ಘಾಟಿಸುವರು. ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ದೀಪಾವಳಿ ಕವಿಗೋಷ್ಠಿಗೆ ಚಾಲನೆ ನೀಡುವರು. ಹಿರಿಯ ಲೇಖಕ ಹಾಗೂ ವಿಶ್ರಾಂತ ಪ್ರಾಂಶುಪಾಲ ಕೆ. ಕಾಳೇಗೌಡ ಅಧ್ಯಕ್ಷತೆ ವಹಿಸುವರು.
ಪರಿಚಯ ಪ್ರಕಾಶನದ ಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಕೆ.ಜಿ. ತಮ್ಮಣ್ಣಗೌಡ, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ. ದಿವಿಕುಮಾರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇನಹಳ್ಳಿ ಪದ್ಮೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ತಾಲೂಕು ಘಟಕದ ಅಧ್ಯಕ್ಷರಾದ ಸಮೀರ್, ಜಿಲ್ಲಾ ಉಪಾಧ್ಯಕ್ಷ ಎ.ಸಿ.ಕಾಂತರಾಜು, ಕರುನಾಡ ಯುವಜನ ವೇದಿಕೆ ಜಿಲ್ಲಾಧ್ಯಕ್ಷ ಎಸ್.ರವಿ, ರಾಜ್ಯ ಉಪಾಧ್ಯಕ್ಷ ಲೋಕೇಶ್, ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಎಚ್.ಆರ್.ಸೋಮಶೇಖರ್, ಉಪಾಧ್ಯಕ್ಷ ಆನಂದ್, ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರು ಪೃಥ್ವಿ, ಕರ್ನಾಟಕ ರಕ್ಷಣಾ ಸೇನೆ ತಾಲೂಕು ಅಧ್ಯಕ್ಷರು ಪ್ರಶಾಂತ್ ಗೌಡ, ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ತಾಲೂಕು ಅಧ್ಯಕ್ಷ ಕೆ.ಎಲ್. ಮಹೇಶ್, ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್ ಭಾಗವಹಿಸುವರು.
ದೀಪಾವಳಿ ಕವಿಗೋಷ್ಠಿಯಲ್ಲಿ ಬಲ್ಲೇನಹಳ್ಳಿ ಮಂಜುನಾಥ್, ಚಾ.ಶಿ. ಜಯಕುಮಾರ್, ಅನಿತಾ ಚೇತನ್ ಬಾರ್ಗಲ್, ಸಿ. ವೀರಭದ್ರಯ್ಯ, ಎಂ.ಜಿ. ರೇವಣ್ಣ, ಶ್ರೀಧರ್ ರಾಯಸಮುದ್ರ, ಸುಧಾಮಣಿ ಲಕ್ಷ್ಮಣ್, ಆರ್. ರಂಗನಾಥ್, ಧನಲಕ್ಷ್ಮಿ ಪ್ರಕಾಶ್, ಆರ್.ಎಂ. ಸಹನಾ, ಕೆ.ಜಿ. ನಾಗರಾಜು, ಡಿ. ಜಯಲಕ್ಷ್ಮಿ ಶಿವಸ್ವಾಮಿ, ಬಿ.ಎಸ್. ದೇವರಾಜು, ಮಮತಾ ಪ್ರವೀಣ್, ಶ್ರೀಧರ್ ಅಂಬಿಗರಹಳ್ಳಿ, ಸುಶ್ಮಿತಾ ಹೊಸಹೊಳಲು, ಶ್ರೀನಿವಾಸ್ ಆರ್. ಸಜ್ಜನ್, ಡಿ.ನಾರಾಯಣಸ್ವಾಮಿ, ಕವಿತಾ ಪಟೇಲ್, ಹೆಚ್.ವೈ. ಪ್ರೀತಮ್, ಹೆಚ್.ಎನ್. ವಜ್ರಪ್ರಸಾದ್, ಬಿ.ಆರ್. ಶಶಿಕುಮಾರ್, ಸಿ.ಎಸ್. ಅಶೋಕ್, ಬಾಲಪ್ರತಿಭೆ ಹನ್ಸಿಕಾ, ಶ್ರೀಕಾಂತ್ ಚಿಮಲ್, ವಿ.ಜಿ. ಮಲ್ಲಿಕಾರ್ಜುನಸ್ವಾಮಿ ತಮ್ಮ ಸ್ವರಚಿತ ಕವನ ವಾಚನ ಮಾಡುವರು.
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕತೆ, ಕಾವ್ಯ, ಕಾದಂಬರಿ, ನಾಟಕ, ಆತ್ಮಕತೆ, ವಿಮರ್ಶೆ, ವಿಚಾರ, ಸಂಶೋಧನೆ, ಅನುವಾದ, ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವು ನ. 11 ರಿಂದ 12 ರವರೆಗೆ ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಕರ್ಷಕ ರಿಯಾಯಿತಿ ಇರುತ್ತದೆ. 'ಶೆಲ್ಪಿ ಕಾರ್ನರ್'ನಲ್ಲಿ ಓದುಗರು ತಾವು ಖರೀದಿಸಿದ ತಮ್ಮ ನೆಚ್ಚಿನ ಪುಸ್ತಕದೊಂದಿಗೆ 'ಸೆಲ್ಪಿ' ತೆಗೆದುಕೊಂಡು ಸಂಭ್ರಮಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9916894417 ಮತ್ತು 9606160571 ಸಂಪರ್ಕಿಸಬಹುದು.
ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ತಾಲೂಕು ಘಟಕದ ಅಧ್ಯಕ್ಷರಾದ ಸಮೀರ್, ಜಿಲ್ಲಾ ಉಪಾಧ್ಯಕ್ಷ ಎ.ಸಿ. ಕಾಂತರಾಜು, ಕರುನಾಡ ಯುವಜನ ವೇದಿಕೆ ಜಿಲ್ಲಾಧ್ಯಕ್ಷ ಎಸ್.ರವಿ, ರಾಜ್ಯ ಉಪಾಧ್ಯಕ್ಷ ವಿ.ಲೋಕೇಶ್, ತಾಲ್ಲೂಕು ಅಧ್ಯಕ್ಷ ಯುವರಾಜ್, ಜಯ ಕರ್ನಾಟಕ ತಾಲೂಕು ಉಪಾಧ್ಯಕ್ಷ ಆನಂದ್, ಕರ್ನಾಟಕ ರಕ್ಷಣಾ ಸೇನೆ ತಾಲೂಕು ಅಧ್ಯಕ್ಷ ಪ್ರಶಾಂತ್ ಗೌಡ, ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ತಾಲೂಕು ಘಟಕದ ಅಧ್ಯಕ್ಷ ಕೆ.ಎಲ್. ಮಹೇಶ್, ಕರವೇ ಸಂಘಟನಾ ಕಾರ್ಯದರ್ಶಿ ಹೊಸಹೊಳಲು ಗೋಪಿ, ಕರುನಾಡು ವೇದಿಕೆಯ ಸಾಯಿಕುಮಾರ್, ಪರಿಚಯ ಪುಸ್ತಕ ಪ್ರಕಾಶನದ ಎಸ್.ಪಿ.ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ