ಕಲೆಯನ್ನು ಉಸಿರಾಗಿಸಿಕೊಂಡು ಕಲಾ ಪಯಣದಲ್ಲಿ ಸಾಗುವ ಕಲಾವಿದರಿಗೆ ಕಲೆಯೇ ಬದುಕು. ಅಂತೆಯೇ ಇವರಿಗೂ ಕಲೆಯ ಮೇಲೆ ಅದೇನೋ ಪ್ರೀತಿ ಗೌರವ.ರಂಗ ಭೂಮಿ ಕಲಾವಿದನಾಗಿ ಬಣ್ಣ ಹಚ್ಚಿ ರಂಗಭೂಮಿಕೆಯಲ್ಲಿ ಹೆಸರಾಗಿ ಉಳಿದ ಜೈ ದೀಪ್ ರೈ ಕೊರಂಗ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಹೊಸಮನೆ ಕೊರಂಗದ ದಿ. ನೆಟ್ಟಾಳ ಮಂಜುನಾಥ್ ರೈ ಮತ್ತು ಪುಷ್ಪಾವತಿ ದಂಪತಿಗಳ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆದಂಬಾಡಿಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ಕುಂಬ್ರದಲ್ಲಿ ಪೂರೈಸಿದ ನಂತರ ತನ್ನ ಹದಿನೆಂಟನೇ ವಯಸ್ಸಿನಲ್ಲಿ ನಾಟಕ ರಂಗಕ್ಕೆ ಪ್ರವೇಶಿಸಿದರು.
ನಾಟಕ ರಂಗದ ನಟನ ಚತುರನ ಕಲಾ ಪಯಣ
ಒಲಿದು ಬಂದ ಕಲೆಯನ್ನು ಬೆಳೆಸುತ್ತ ತಾನು ಬೆಳೆದು ನಿಲ್ಲುವ ಸಾಹಸ ಮಾಡಿ ನಾಟಕ ರಂಗ ಭೂಮಿಕೆಗೆ ತನ್ನ ಹದಿನೆಂಟನೆ ವಯಸ್ಸಿನಲ್ಲಿ ಕಾಲಿಟ್ಟ ಇವರು ಶಿಕ್ಷಕಿ ಚಂದ್ರಕಲಾ ರಾಮಚಂದ್ರ ಇವರ ಪ್ರೋತ್ಸಾಹ ಮತ್ತು ಪ್ರೇರಣೆನೆಯೊಂದಿಗೆ ನಾಟಕ ರಂಗಕ್ಕೆ ಧುಮುಕಿದರು. ತನ್ನ ರಂಗ ಭೂಮಿಕೆಯ ಹಾದಿಯಲ್ಲಿ ಮೊದಲನೇ ಹೆಜ್ಜೆಯಾಗಿ ಆರು ಬೊಂಬೆಗಳು ಎಂಬ ನಾಟಕದಲ್ಲಿ ಅಭಿನಯಿಸಿದ ಇವರು ರಂಗ ಭೂಮಿಯಲ್ಲಿ ತನ್ನದೇ ಆದ ಚಾಪು ಮೂಡಿಸಲು ಆರಂಭದಲ್ಲಿ ಮಾಡಿದ ಈ ನಾಟಕದ ಅಭಿನಯವು ಯಶಸ್ವಿಯಾಯಿತು ಮತ್ತು ನಂತರ ಸಣ್ಣ ಪುಟ್ಟ ನಾಟಕಗಳ ಮೂಲಕ ಬಣ್ಣ ಹಚ್ಚಿ ರಂಗ ಭೂಮಿಯಲ್ಲಿ ಬಲವಾಗಿ ಬೇರೂರಿದರು.
ಅಲ್ಲಿಂದ ಶುರುವಾಗಿ ನಾಟಕ ರಂಗ ಪಯಣದಲ್ಲಿ ಸಾಗಿ 2015 ರಲ್ಲಿ ಬೊಳ್ಳಿ ಬೊಲ್ಪು ನಾಟಕ ತಂಡದಿಂದ ಸುಬ್ಬು ಸಟ್ಯಾಂರ್ ನೇತೃತ್ವದಲ್ಲಿ " ಮಂಡೆ ಹಾಕೋರ್ಚಿ ನಾಟಕದಲ್ಲಿ ಸ್ತ್ರಿ ಪಾತ್ರದಲ್ಲಿ ನಟಿಸಿ ಜನಮೆಚ್ಚುಗೆ ಪಡೆದರು. ಪುಲಿಮುಂಚಿ, ಪಚ್ಚು ಪಾತೆರೋಡು, ಕಾಸ್ ದ ಕಸರತ್ತು,ಸೀತೆ ಸೋತೆಗೆ, ಮಂಗಳೂರಿನ ಮನೋಜ್ ಕೊಡಕ್ಕಲ್ ನಿರ್ದೇಶನದ ದೆಸೆ ತಿರ್ಗ್ ನಗ, ಆಯಿನಾತ್ ಬೇಗ ಪನ್ಪೆ, ಹೀಗೆ 40 ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯಿಸಿದ ಕೀರ್ತಿ ಇವರದು.ಮಾತ್ರವಲ್ಲದೇ ತುಳು ಭಾಷೆಯ ಆಲ್ಬಮ್ ಹಾಡು, ಕಿರುಚಿತ್ರಗಳು ಮತ್ತು ಪಿರ್ಕಿಲು, ಸಂಚಾರಿ ವಿಜಯ್ ನಟನೆಯ ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ನಟಿಸಿದ್ದಾರೆ.
ಗಾಯನ ಕ್ಷೇತ್ರದಲ್ಲಿ ಜೈದೀಪ್ ಕೊರಂಗ
ರಂಗಭೂಮಿ ಕಲಾವಿದ ಮಾತ್ರವಲ್ಲದೇ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇವರು ಭಜನೆಯ ಮೂಲಕ ಸ್ವ ಕಲಿಕೆಯಲ್ಲಿ ಹಾಡುಗಾರಿಕೆಯನ್ನು ಕಲಿತುಕೊಂಡರು. ಇವರು ತನ್ನ ಗಾಯನದ ಮೂಲಕ ಜನ ಮೆಚ್ಚುಗೆ ಪಡೆದರು ಮಾತ್ರವಲ್ಲದೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಬಿರುದು
ನಾಟಕರಂಗದಲ್ಲಿ ಮಿಂಚಿದ ಇವರಿಗೆ ರಂಗ ಮಾಣಿಕ್ಯ ಸುಬ್ಬು ಸಂಟ್ಯಾರ್ ಇವರಿಂದ ತೆಲಿಕ್ಕೆದ ತೇಡಿಲ್, ಮನೋಜ್ ಕೊಡಕಲ್ಲ್ ಮತ್ತು ಮಂಜುಶ್ರೀ ತಂಡದಿಂದ ತುಳುನಾಡ ಕಲ್ಪವೃಕ್ಷ ಎಂಬ ಬಿರುದು ಪಡೆದಿದ್ದಾರೆ. ಸಂಸಾರ ಕಲಾವಿದರು ಪುತ್ತೂರು ಇವರ ಭಾಗ್ಯ ಬೋಡು ಹಾಗೂ ಇನ್ನೇನು ತೆರೆ ಕಾಣುವ ಹಂತದಲ್ಲಿರುವ ಅಜ್ಜೆ ನಾಟಕದಲ್ಲಿ ಅಭಿನಯಿಸಲಿದ್ದಾರೆ.
-ಪೃಥ್ವಿ ಆರ್ ಆಳ್ವ
ಪತ್ರಿಕೋದ್ಯಮ ವಿದ್ಯಾರ್ಥಿನಿ ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ