ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು ಉಜಿರೆಯಲ್ಲಿ ರಾಷ್ಟೀಯ ಸೇವಾ ಯೋಜನಾ ಘಟಕಗಳು ಮತ್ತು ರಾಜ್ಯಶಾಸ್ತ್ರ ವಿಭಾಗ ಜಂಟಿಯಾಗಿ ಆಯೋಜಿಸಲ್ಪಟ್ಟ 'ಸಂವಿಧಾನ ದಿನ' ವನ್ನು ನ.25 ರಂದು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಿಜಿಸ್ಟ್ರರ್ ಅಡ್ಮಿನಿಸ್ಟ್ರೇಟರ್ ಹಾಗೂ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ಶಲಿಪ್ ಕುಮಾರಿ ಎ.ಪಿ ಅವರು ಸಂವಿಧಾನದ ರಚನೆಯ ಇತಿಹಾಸ, ಸಂವಿಧಾನದ ಪ್ರಾಮುಖ್ಯತೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದರು.
"ನ.26 ಸಂವಿಧಾನವನ್ನು ಒಪ್ಪಿಕೊಂಡ ದಿನ. ಸಂವಿಧಾನದ ಪ್ರಸ್ತಾವನೆಯಿಂದಲೇ ತಿಳಿಯುತ್ತದೆ, ಇಡೀ ಸಂವಿಧಾನದ ಬಗ್ಗೆ. ಸಂವಿಧಾನ ಸುಮಾರು 2 ವರ್ಷ 11 ತಿಂಗಳು 18 ದಿನಗಳ ಪರಿಶ್ರಮವಾಗಿದೆ. ಇದಕ್ಕೆ ಅಂಬೇಡ್ಕರ್ ಅವರ ಕೂಡುಗೆ, ಅವರ ಶಕ್ತಿ, ಜ್ಞಾನ, ಪದಗಳ ಶಬ್ದ, ವಿಚಾರ ಎಲ್ಲ ಅಪಾರವಾದದ್ದು. ಪ್ರತಿಯೊಬ್ಬ ಮನುಷ್ಯನಿಗೂ ನೈತಿಕವಾಗಿ ಹೇಳುವುದು ಧರ್ಮಗ್ರಂಥಗಳಾದರೆ, ಕಾನೂನಾತ್ಮಕವಾಗಿ ಹೇಳುವುದು ಸಂವಿಧಾನ. ಸಂವಿಧಾನ ಪವಿತ್ರವಾದದ್ದು. ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು" ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ, "ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧಾರಾವಾಹಿಯ ಚಿತ್ರಣಗಳನ್ನ ನೋಡಿದ್ರೆ ತಿಳಿಯುತ್ತೆ ಯಾಕೆ ಸಂವಿಧಾನ ಬೇಕು ಅಂತ. ನನಗೆ ಈಗ ಮಾತಾಡಲು ಅವಕಾಶ ಇದೆ ಅಂದರೆ, ನೀವು ಕೇಳುತ್ತಿದ್ದೀರಿ ಅಂದರೆ, ನಮಗೆ ನ್ಯಾಯ ಸಿಗುತ್ತಾ ಇದೆ ಅಂದರೆ ಅದಕ್ಕೆ ಕಾರಣ ಸಂವಿಧಾನ" ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಯೋಜನಾಧಿಕಾರಿ ಪ್ರೊ. ದೀಪ ಆರ್. ಪಿ. ಮಾರ್ಗದರ್ಶಿಸಿದರು. ಸ್ವಯಂ ಸೇವಕರಾದ ಅಶ್ಮಿತ ಸ್ವಾಗತಿಸಿದ, ನಿಶಾ ವಂದಿಸಿದರು. ಸ್ವಯಂ ಸೇವಕರಾದ ತ್ರಿಶೂಲ್ ಹಾಗೂ ಶ್ವೇತಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ