ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾ) ಉಜಿರೆಯ ಸಸ್ಯಶಾಸ್ತ್ರ ವಿಭಾಗದ ಸಕ್ರಿಯ ಸಂಘಗಳಾದ ಸಸ್ಯ ಸೌರಭ ಮತ್ತು ಇಕೋ ಕ್ಲಬ್ ಆಯೋಜಿಸಿದ ಬೆಂಕಿ ರಹಿತ ಪೌಷ್ಟಿಕ ಆಹಾರ ತಯಾರಿ ಎಂಬ( interclass level ) ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳಲ್ಲಿ ಬೆಂಕಿಯ ಬಳಕೆ ಇಲ್ಲದೆ ತುರ್ತು ಸಂದರ್ಭದಲ್ಲಿ ಕೆಲವೊಂದು ಹಸಿ ಪದಾರ್ಥಗಳಿಗೆ ಪೌಷ್ಠಿಕ ಮಿಶ್ರಣವನ್ನು ಬೆರೆಸಿ ವಿಶೇಷವಾದ ಆಹಾರ ವನ್ನು ತಯಾರಿಸುವುದು, ಮೂಲ ಆಹಾರ ವಾಸ್ತುವಿನಲ್ಲಿ ಇರುವ ನೈಜ ಪೋಷ್ಟಿಕ ಅಂಶಗಳು ಬೇಯಿಸಿದಾಗ ಇಲ್ಲವಾಗುವುದು, ಬೇಯಿಸದೆ ಇರುವ ಆಹಾರವನ್ನು ಅಂದವಾಗಿ ಅಲಂಕರಿಸಿ ಆಯೋಜಿಸುವಂತಹ ಸೃಜನಶೀಲತೆ ಬೆಳೆಸುವ ಉದ್ದೇಶದಿಂದ ಈ ಚಟುವಟಿಕೆಯನ್ನು ಆಯೋಜಿಸಲಾಯಿತು.
ಕಾರ್ಯ್ರಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ತೀರ್ಪುಗಾರರಾಗಿ ಗೃಹವಿಜ್ಞಾನ ವಿಭಾಗದ ಮುಖ್ಯಸ್ಥೆ ಶೋಭ ಎಸ್. ಹಾಗು ಸಸ್ಯಶಾಸ್ತ್ರ ವಿಭಾಗದ ಪ್ರಾದ್ಯಾಪಕಿಯಾದ ಶಕುಂತಲಾ ಬಿ. ಅವರು ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ, ಸಹಾಯಕ ಪ್ರಾಧ್ಯಾಪಕರಾದ ಅಭಿಲಾಷ್ ಕೆ.ಎಸ್, ಕು| ಸ್ವಾತಿ, ಕು| ಮಂಜುಶ್ರೀ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ