ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ 2023-24ನೇ ಸಾಲಿನ ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ನ.7 ಮಂಗಳವಾರದಂದು ಡಾ. ಜಗದೀಶ ಶೆಟ್ಟಿ ನಿವೃತ್ತ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿಗಳು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಎಂ.ಜಿ.ಎಂ. ಕಾಲೇಜು, ಉಡುಪಿ ಇವರು ಉದ್ಘಾಟಿಸಿ ಶೈಕ್ಷಣಿಕವಾಗಿ ಉತ್ತಮ ಹೆಸರು ಗಳಿಸಿರುವ ಈ ಸಂಸ್ಥೆಯಲ್ಲಿ ಹೊಣೆಗಾರಿಕೆಯಿಂದ ಅಧ್ಯಯನ ಮಾಡುವಂತೆ ಕರೆಯಿತ್ತು ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಗಣನಾಥ ಶೆಟ್ಟಿ ಎಕ್ಕಾರು ನಿವೃತ್ತ ಪ್ರಾಂಶುಪಾಲರು ಹಾಗೂ ಗೌರವ ಕಾರ್ಯದರ್ಶಿಗಳು ರೆಡ್‍ಕ್ರಾಸ್ ಘಟಕ, ಉಡುಪಿ ಇವರು ಸ್ನಾತಕೋತ್ತರ ಅಧ್ಯಯನದಲ್ಲಿ ವೈಚಾರಿಕ ಪ್ರಜ್ಞೆಯೊಂದಿಗೆ ಕೌಶಲ, ಆರೋಗ್ಯ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಜ್ಞಾನಾರ್ಜನೆ ಮಾಡುವುದು ಇಂದಿನ ಅಗತ್ಯ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಸಾದ್ ರಾವ್ ಎಂ. ಶೈಕ್ಷಣಿಕ ಸಂಚಾಲಕರು ಡಾ. ಮೇವಿ ಮಿರಾಂದ ಐ.ಕ್ಯೂ.ಎ.ಸಿ. ಸಂಚಾಲಕರು ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಡಾ. ರಾಘವ ನಾಯ್ಕ ಮುಖ್ಯಸ್ಥರು ಸಮಾಜಶಾಸ್ತ್ರ ವಿಭಾಗ ಸ್ವಾಗತಿಸಿ, ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್. ವಿಭಾಗ ಮುಖ್ಯಸ್ಥರು ಕನ್ನಡ ವಿಭಾಗ ಇವರು ವಂದಿಸಿದರು. ಅಮೃತ ಮತ್ತು ಬಳಗ ಪ್ರಥಮ ಎಂ.ಎ. ಇಂಗ್ಲೀಷ್ ಪ್ರಾರ್ಥಿಸಿದರು. ಶ್ರೀಮತಿ ರತ್ನಮಾಲಾ ಕನ್ನಡ ಸಹಾಯಕ ಪ್ರಾಧ್ಯಾಪಕರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ