ಸೂಕ್ತ ಸಕಾಲಿಕ ಅಧ್ಯಯನದಿಂದ ಸ್ಪರ್ಧಾತ್ಮಕ ಯಶಸ್ಸು: ಪ್ರೊ.ಮನು ಬಿ

Upayuktha
0
ಎಸ್.ಡಿ.ಎಂ ಯುಜಿಸಿ, ನೆಟ್ ತರಬೇತಿ ಕಾರ್ಯಾಗಾರ




ಉಜಿರೆ: ಪ್ರಶ್ನೆಪತ್ರಿಕೆಗಳ ಮಾದರಿಯ ಜೊತೆಗೆ ಪೂರ್ವಸಿದ್ಧತೆಗೆ ಪೂರಕವಾಗುವ ಲಭ್ಯ ಹತ್ತುಹಲವು ಜ್ಞಾನಸಂಪನ್ಮೂಲಗಳ ನೆರವಿನೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಸೇಂಟ್ ಥಾಮಸ್ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರೊ.ಮನು ಬಿ ಹೇಳಿದರು.



ಅವರು ಉಜಿರೆ ಎಸ್ .ಡಿ. ಎಂ ಸ್ನಾತಕೋತರ ಕೇಂದ್ರದ ಇಂಗ್ಲೀಷ್ ವಿಭಾಗವು ಮಂಗಳವಾರ ಆಯೋಜಿಸಿದ್ದ  ಯುಜಿಸಿ - ನೆಟ್ ತರಬೇತಿ ಹಾಗೂ ಸಂಶೋಧನಾ ಬರವಣಿಗೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಮಾತನಾಡಿದರು. 



ಈ ಹಿಂದೆ ನೆಟ್, ಸ್ಲೆಟ್ ಸೇರಿದಂತೆ ವಿವಿಧ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆಗಳು ಮಾತ್ರ ಲಭ್ಯವಾಗಿರುತ್ತಿದ್ದವು. ಆದರೆ, ಈಗಿನ ತಾಂತ್ರಿಕ ಆವಿಷ್ಕಾರದ ದಿನಗಳಲ್ಲಿ ಮಾದರಿ ಪ್ರಶ್ನೆಗಳ ಜೊತೆಗೆ ಅವುಗಳು ನಿರೀಕ್ಷಿಸುವ ಉತ್ತರಗಳ ವಿವರಗಳನ್ನು ಒಳಗೊಂಡ ಅನೇಕ ವಿಷಯವಾರು ಸಂಪನ್ಮೂಲಗಳೂ ಕೈಗೆಟುಕುತ್ತಿವೆ. ಹೀಗಾಗಿ ಇವುಗಳನ್ನು ಹುಡುಕಿಕೊಂಡು ಸ್ಪಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕು ಎಂದರು.



ಈಗ ಪೂರ್ವಸಿದ್ಧತೆಗೆ ಬೇಕಾದ ನೂರಾರು ಪುಸ್ತಕಗಳು ದೊರೆಯುತ್ತಿವೆ. ಅವುಗಳಲ್ಲಿ ಸರಿಯಾಗಿರುವುದನ್ನು ಆಯ್ಕೆ ಮಾಡುವುದೇ ಒಂದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ದೃಷ್ಟಿಯಲ್ಲಿರಿಸಿಕೊಂಡು ನಿಖರವಾದ ಕೃತಿಗಳನ್ನು ಆಯ್ಕೆ ಮಾಡಿಕೊಂಡು ಓದಿದರೆ ನಿರೀಕ್ಷಿತ ಫಲಿತಾಂಶ ದೊರಕುತ್ತದೆ ಎಂದು ತಿಳಿಸಿದರು.



ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಅಭಿವೃದ್ದಿಯಿಂದಾಗಿ ಕಂಪ್ಯೂಟರೀಕೃತ ಉತ್ತರ ಬರವಣಿಗೆಯ ಸಾಧ್ಯತೆಗಳು ವಿಸ್ತøತವಾಗಿವೆ. ಈ ನೂತನ ತಂತ್ರಜ್ಞಾನ ಉತ್ತರಗಳನ್ನು ಮರುಪರಿಶೀಲಿಸಿ ಬರೆಯುವ ಅವಕಾಶ ನೀಡಿದೆ. ಇದರಿಂದಾಗಿ ಮೊದಲ ಅಥವಾ ಎರಡನೇ ಪ್ರಯತ್ನದಲ್ಲಿಯೇ ಪರೀಕ್ಷೆಗಳನ್ನು ಉತ್ತೀರ್ಣವಾಗಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುವಾಗ  ಹಂತ ಹಂತವಾಗಿ ವಿಷಯಗಳನ್ನು ಓದಬೇಕು. ಅನೇಕ ಬಾರಿ ಪ್ರಶ್ನೆಗಳು ಪುನರಾವರ್ತಿತವಾಗುತ್ತವೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆ ಮಾದರಿಯಾಗಿ ತೆಗೆದುಕೊಳ್ಳುವುದು ಉತ್ತಮ ಎಂದು ಮಾಹಿತಿ ನೀಡಿದರು.  



ಸ್ಪರ್ಧಾತ್ಮಕ ಪರೀಕ್ಷೆಗಳು ದೊಡ್ಡ ಸವಾಲುಗಳಲ್ಲ, ವಿದ್ಯಾರ್ಥಿಗಳು ತರಗತಿಗಳಲ್ಲಿ ಕಲಿಯುವುದೇ ಬಹುತೇಕ ಪರೀಕ್ಷೆಗೆ ಬರುತ್ತದೆ. ಏಕಾಗ್ರತೆ, ಶ್ರದ್ಧೆಯಿಂದ ತರಗತಿಗಳನ್ನು ಕೇಳಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದರು. ನೆಟ್-ಜೆಅರ್‍ಎಫ್ ಪರೀಕ್ಷೆಗಳ ಕುರಿತು ವಿಸ್ತøತ ಮಾಹಿತಿ ನೀಡಿದರು.



ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ಮಂಜುಶ್ರೀ ಉಪಸ್ಥಿತರಿದ್ದರು. ಜ್ಯೋತ್ಸ್ನಾ ಶರ್ಮಾ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top