ನವದೆಹಲಿ: ನವದೆಹಲಿ ವಸಂತ್ ಕುಂಜ್ ನ ಪೇಜಾವರ ಮಠದ ಶಾಖೆ ಶ್ರೀ ಕೃಷ್ಣಧಾಮದಲ್ಲಿ ನಿರ್ಮಿತವಾದ ನೂತನ ಗೋಶಾಲೆಯನ್ನು ಬುಧವಾರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು. ಕೇಂದ್ರ ಸರ್ಕಾರಿ ಉದ್ಯೋಗಿಯಾಗಿರುವ ಮೂಲತಃ ತಮಿಳುನಾಡಿನವರಾದ ಶ್ರೀ ಮಾಧವನ್ ಮತ್ತು ಜ್ಯೋತ್ಸ್ನಾ ದಂಪತಿಗಳು ಸೇವಾ ರೂಪದಲ್ಲಿ ಗೋಶಾಲೆಯನ್ನು ನಿರ್ಮಿಸಿಕೊಟ್ಟು ಹಸು ಮತ್ತು ಕರುವನ್ನೂ ಮಠಕ್ಕೆ ಅರ್ಪಿಸಿದರು. ಶ್ರೀಗಳು ಗೋಪೂಜೆ ನೆರವೇರಿಸಿ ವಿದ್ಯುಕ್ತವಾಗಿ ಉದ್ಘಾಟಿಸಿ ದಾನಿಗಳನ್ನು ಹರಸಿದರು .
ವಿಠೋಬಾಚಾರ್ಯ , ಸತ್ಯಪ್ರಮೋದಾಚಾರ್ಯ ಶ್ರೀವತ್ಸ ತಂತ್ರಿ ಮೊದಲಾದವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


