ಸಂವಿಧಾನ ಮತ್ತು ಅದರ ಆಶಯಗಳನ್ನು ತಿಳಿಯದ ನಾನು ಒಂದು ದಿನ ತಿಳಿದೋ ತಿಳಿಯದೆಯೋ. ಏನಿರಬಹುದು ಎಂಬ ಕುತೂಹಲದಿಂದ ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಎಂಬ ಪುಸ್ತಕವನ್ನು ಓದಲು ಆರಂಭಿಸಿದೆ ಓದುತ್ತಾ ಓದುತ್ತಾ ಹೋದಂತೆ ನನಗೆ ಅರಿವಿಗೆ ಬಂದದ್ದು, ಸಂವಿಧಾನ ರಚನೆ ಎಂದರೇ ಕೇವಲ ಒಂದು ದಿನದ ಕಾರ್ಯವಲ್ಲ ಅದಕ್ಕೆ ನೂರಾರು ದಿನಗಳು ಸಾವಿರಾರು ಪುಸ್ತಕಗಳನ್ನು ಓದಿ. ಲಕ್ಷಾಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಕೋಟ್ಯಾಂತರ ಜನ ಸಮುದಾಯಕ್ಕೆ ಭಾರತೀಯ ಸಂವಿಧಾನವನ್ನ ನೀಡಿದ ಅಂಬೇಡ್ಕರ್ ಅವರಿಗೆ ತಿಳಿದಿದೆ ಅದರ ಆಳ ಮತ್ತು ಅಗಲ.
ಬ್ರಿಟಿಷರಿಂದ ದಬ್ಬಾಳಿಕೆಗೆ ಒಳಗಾಗುತ್ತಿದ್ದ ಭಾರತೀಯರಿಗೆ ಆಡಳಿತ ನಡೆಸಲು ತಮ್ಮದೆಯಾದ ಒಂದು ಸಂವಿಧಾನದ ಅವಶ್ಯಕತೆ ಇತ್ತು. ಹಾಗಾಗಿ ಭಾರತೀಯ ಸಂವಿಧಾನ ರಚನಾ ಸಮಿತಿಯನ್ನು ಸಚ್ಚಿದಾನಂದ ಸಿನ್ಹಾರವರ ನೇತೃತ್ವದಲ್ಲಿ 1946 ಜುಲೈ 6ರಂದು ಆರಂಭಗೊಳಿಸಲಾಯಿತು.
ಭಾರತದಲ್ಲಿ ಜಾತಿ ವ್ಯವಸ್ಥೆ ಧರ್ಮ ಸಂಘರ್ಷ ಅಸ್ಪೃಶ್ಯತೆ ಬಡತನ ರಾಜಕೀಯ ನಿಪುಣತೆ ಆಡಳಿತ ನಡೆಸುವ ಜಾಣ್ಮೆ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳು ರಾಷ್ಟ್ರದ ಗಡಿರೇಖೆ ಮೊದಲಾದ ಅಂಶಗಳನ್ನು ಅಧ್ಯಯನದ ಮೂಲಕ ತಿಳಿದುಕೊಂಡಿದ್ದ ಹಾಗೂ ಸಾಮಾಜಿಕ ಬದುಕಿನಲ್ಲಿ ಅನುಭವಿಸಿದ ನೋವುಗಳು ಅಂಬೇಡ್ಕರ್ ಅವರು ಮುಂದೆ 1947 ಆಗಸ್ಟ್ 29ರಂದು ಕರಡು ಸಮಿತಿಯ ಅಧ್ಯಕ್ಷರಾಗುವಂತೆ ಮಾಡಿತು.
ಭಾರತೀಯ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಮತನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ನಿರ್ಮಿಸಲು ಭಾರತೀಯ ಪ್ರಜೆಗಳಿಗೆ ಸಾಮಾಜಿಕ ಧಾರ್ಮಿಕ ರಾಜಕೀಯ ಆರ್ಥಿಕ ಅಭಿವ್ಯಕ್ತಿ ಸಮಾನತೆಯನ್ನು ನೀಡಿ ಭಾರತವನ್ನು ಒಂದು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು 1949 ನವೆಂಬರ್ 26ರಂದು ನಡೆದ ಭಾರತೀಯ ಸಂವಿಧಾನ ಅಂಗೀಕಾರ ಸಭೆಯಲ್ಲಿ ಪ್ರಮಾಣ ಮಾಡುತ್ತಿದ್ದೇವೆ ಎಂದು ಸಂವಿಧಾನವನ್ನು ಎಲ್ಲರೂ ಒಪ್ಪಿಕೊಂಡೆವು.
ಸಂವಿಧಾನ ರಚನೆ ಎಂದರೆ ಕೇವಲ ಒಂದು ದಿನದ ಕಾರ್ಯವಲ್ಲ ಜವಾಹರ್ ಲಾಲ್ ನೆಹರು ಸರ್ದಾರ್ ವಲ್ಲಬಾಯಿ ಪಟೇಲ್ ಬಾಬು ರಾಜೇಂದ್ರ ಪ್ರಸಾದ್ ಕೆಂಗಲ್ ಹನುಮಂತಯ್ಯ ಮೊದಲಾದ ರಾಷ್ಟ್ರೀಯ ನಾಯಕರು ಹಾಗೂ 22 ಸಮಿತಿಗಳು ಡಾ.ಬಿ ಆರ್ ಅಂಬೇಡ್ಕರ್ ಅವರೊಂದಿಗೆ ಚರ್ಚಿಸಿ ವಿವಿಧ ವಿಷಯಗಳ ಮಂಡನೆ ಮಾಡಿದ ನಂತರ ಸಂವಿಧಾನ ಬರೆಯಲು ಆರಂಭಿಸಿ ಸುಮಾರು 2 ವರ್ಷ 11 ತಿಂಗಳು 18 ದಿನಗಳನ್ನ ತೆಗೆದುಕೊಂಡು ಅಂತಿಮವಾಗಿ ಸಂವಿಧಾನವನ್ನು ರಚಿಸಿದರೆಂದು ನನಗೆ ತಿಳಿಯಿತು.
ಸಂವಿಧಾನ ಅಂಗೀಕಾರವಾಗಿ ಇಂದಿಗೆ 74 ವರ್ಷಗಳು ಕಳೆದಿವೆ ಆದರೆ ಭಾರತದ ಸಂವಿಧಾನದ ಆಶಯದಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಂಡರೆ ನಮಗೆ ತಿಳಿಯುವುದು ನಾವೆಷ್ಟು ಸಂವಿಧಾನದ ಆಶಯಗಳನ್ನು ಗೌರವಿಸುತ್ತಿದ್ದೇವೆ ಎಂದು.
ಸಂವಿಧಾನ ನಮಗೆ ಮತ್ತು ನಮ್ಮ ಭವಿಷ್ಯದ ಯುವ ಪೀಳಿಗೆಗೆ ದಾರಿ ದೀಪ. ಶಾಸಕಾಂಗ ಕಾರ್ಯಾಂಗ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎನ್ನುವ ಪರಿಕಲ್ಪನೆಯೊಂದಿಗೆ ನಿರ್ಮಿಸಿರುವ ಅಂಬೇಡ್ಕರ ಇವುಗಳು ತಪ್ಪುಗಳನ್ನ ಮಾಡಿದಾಗ ತಿದ್ದಲೆಂದು ಮತ್ತು ತಪ್ಪುಗಳಿಗೆ ಶಿಕ್ಷೆಯನ್ನು ನೀಡಲು ನ್ಯಾಯಾಂಗವನ್ನು ಸೃಷ್ಟಿಸಿ ರಾಷ್ಟ್ರದ ಪರಿಕಲ್ಪನೆಯನ್ನು ಕೊಟ್ಟರು ಶಾಸಕಾಂಗದಲ್ಲಿ ಆದ ಕಾಯ್ದೆ ಕಾನೂನುಗಳನ್ನು ಮತ್ತು ಅದರ ಮಾಹಿತಿಗಳನ್ನು ಜನರಿಗೆ ತಲುಪಿಸಲೆಂದೇ ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯುವ ಪತ್ರಿಕಾ ರಂಗಕ್ಕೆ ಸಂವಿಧಾನದ 19(1)(A) ವಿಧಿಯ ಅಡಿಯಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ನೀಡಲಾಯಿತು.
ಪ್ರಸ್ತುತ ರಾಜಕೀಯ ನಾಯಕರುಗಳು ಮತಗಳ ಲಾಭಕ್ಕಾಗಿ ಧರ್ಮ ಜಾತಿ ಸಮುದಾಯಗಳ ಮಧ್ಯೆ ಬಿರುಕು ಸೃಷ್ಟಿಸಿ ತಮ್ಮ ತಮ್ಮ ರಾಜಕೀಯ ಪಕ್ಷಗಳನ್ನ ಅಧಿಕಾರಕ್ಕೆ ತರುತ್ತಿದ್ದಾರೆ ಆದರೆ ಅವರುಗಳ ಮೋಸದ ಬಲೆಗೆ ಸಿಕ್ಕಿಕೊಂಡಿರುವ ಯುವಕರು ತಮ್ಮ ತಮ್ಮ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳೋಣ ಭಾರತದ ಸಂವಿಧಾನದಲ್ಲಿ ಹೇಳಿರುವ ಹಾಗೆ ಜಾತ್ಯತೀತ ರಾಷ್ಟ್ರವನ್ನು ಮತ್ತಷ್ಟು ಸದೃಢ ರಾಷ್ಟ್ರವನ್ನಾಗಿ ಮಾಡಿ ಭಾರತದ ಸಂವಿಧಾನಕ್ಕೆ ಗೌರವ ಸಲ್ಲಿಸೋಣ.
-ಶಂಕರ್ ಓಬಳಬಂಡಿ
ದ್ವಿತೀಯ ಎಂ.ಎ ವಿದ್ಯಾರ್ಥಿ
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ವಿ ವಿ ಕಾಲೇಜು, ಮಂಗಳಗಂಗೋತ್ರಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ