ಸಾವಯವ ಕೃಷಿ ಬಗ್ಗೆ ಪ್ರಮಾಣೀಕೃತ ಸರಣಿ ತರಬೇತಿ ಉದ್ಘಾಟನೆ

Upayuktha
0


ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ (ರಿ) ಮಂಗಳೂರು ಇವರ ಆಶ್ರಯದಲ್ಲಿ, ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಟಾನ ಮತ್ತು ಭಾರತಿ ಶಿಕ್ಷಣ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಸಾವಯವ ಕೃಷಿ ಬಗ್ಗೆ ಒಂದು ಪ್ರಮಾಣೀಕೃತ ಸರಣಿ ತರಬೇತಿ (certificate course) ಶ್ರೀ ಭಾರತಿ ವಿದ್ಯಾಸಂಸ್ಥೆ ಸಮುಚ್ಚಯದಲ್ಲಿ ಉದ್ಘಾಟನೆಗೊಂಡಿತು.


ಉದ್ಘಾಟನೆ ಮಾಡಿದ ಪ್ರಗತಿ ಪರ ಸಾವಯವ ಕೃಷಿಕರು, ಸಾಧಕಿ, ಜಿಲ್ಲಾ ಪ್ರಶಸ್ತಿ ವಿಜೇತೆ ಶ್ರೀಮತಿ ಅನಿತಾ ಬೆಟ್ಟಂಪಾಡಿಯವರು  ಸಾವಯವ ಕೃಷಿ ಬಗ್ಗೆ ತನ್ನ ಸ್ವ ಅನುಭವದ ಮಾತುಗಳನ್ನು ನುಡಿದರು.


ಪ್ರಸ್ತುತ ವಾತಾವರಣ ದಲ್ಲಿ ವಿಷ ಮುಕ್ತ ಆಹಾರ ಸೇವನೆಯ ಅನಿವಾರ್ಯತೆ ನಿಟ್ಟಿನಲ್ಲಿ ಸಾವಯವ ಬಳಗ ಕೈ ಗೊಳ್ಳುತ್ತಿರುವ ಚಟುವಟಿಕೆಗಳ ಬಗ್ಗೆ ಶ್ಲಾಗಿಸಿದರು. ಈ ಸಂದರ್ಭ ಬಳಗ ಪ್ರಕಟಿಸಿದ್ದ  ಬಳಗದ ಸದಸ್ಯೆ ಶ್ರೀಮತಿ ಸರೋಜಾ ಪ್ರಕಾಶ್ ರವರ ಲೇಖನ 'ನಮ್ಮ ಕೈತೋಟ ನಮ್ಮ ಹೆಮ್ಮೆ' ಎಂಬ ಮಾಹಿತಿ ಕೈಪಿಡಿ ಯನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಾಯಕ ಆಯುಕ್ತರಾದ ಗೀತಾ ಕುಲಕರ್ಣಿಯವರು ಬಿಡುಗಡೆ ಮಾಡಿದರು. ಸಾವಯವ, ಕಲಬೆರಕೆ ರಹಿತ ಆಹಾರ ಸೇವನೆಯ ಅವಶ್ಯಕತೆ ಬಗ್ಗೆ ಪುನರುಚ್ಚರಿಸಿದರು.


ಸಂಚಾರಿ ನಿಯಮ ಪಾಲನೆ ನಮ್ಮ ಸಂಚಾರ ಸುರಕ್ಷತೆಗೆ ಹೇಗೆ ಅಗತ್ಯಯೋ  ಅದೇ ರೀತಿ ನಮ್ಮ ಶಿಸ್ತು ಬದ್ದ ಜೀವನ ಶೈಲಿಯು ನಮ್ಮ ಆರೋಗ್ಯ ಪೂರ್ಣ ಜೀವನ ನಿರ್ವಹಣೆಗೆ ಪ್ರಾಮುಖ್ಯ ಎಂದರು. ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ಯವರು ತಮ್ಮ ಸಂಸ್ಥೆಯ ಕೃಷಿ ಪೂರಕ ಕಾರ್ಯಕ್ರಮಗಳ ಬಗ್ಗೆ ತಿಳಿ ಹೇಳಿದರು. ಸಾವಯವ ಬಳಗದ ಕಾರ್ಯಕ್ರಮವನ್ನು ಪ್ರಶಂಸಿಸಿ ಈ ಸರಣಿ ಪ್ರಮಾಣೀಕೃತ ತರಬೇತಿ ಪಡೆದ ವ್ಯಕ್ತಿಗಳನ್ನು ತಮ್ಮ ಸಂಸ್ಥೆಯಲ್ಲಿ ಕೃಷಿಕರ ತರಬೇತಿದಾರರಾಗಿ ನಿಯುಕ್ತಿ ಮಾಡುವಲ್ಲಿ ಯೋಜನೆ ಹಾಕಲಾಗುವುದು ಎಂದರು.



ಇನ್ನೋರ್ವ ಅತಿಥಿ ಶ್ರೀಮತಿ ಸುಮಾ ರಮೇಶ್ ರವರು ಭಾರತಿ ವಿದ್ಯಾ ಸಂಸ್ಥೆ ಇಂತಹ ಸಮಾಜ ಮುಖಿ ಕಾರ್ಯಕ್ರಮಕ್ಕೆ ತಮ್ಮ ಸಹಯೋಗ ಸಹಕಾರ ನೀಡುವುದಾಗಿ ಹೇಳಿದರು.


ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇದರ ಅಧ್ಯಕ್ಷ ಜಿ ಆರ್ ಪ್ರಸಾದ್ ರವರು ಸ್ವಾಗತಿಸಿ ಪರಿಚಯಿಸಿದರು. ಕಾರ್ಯದರ್ಶಿ  ರತ್ನಾಕರ್ ಕುಳಾಯಿ ಯವರು ಪ್ರಸ್ತಾವಿಸಿದರು. ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು. ಬಳಗದ ಸದಸ್ಯೆ ಶ್ರೀಮತಿ ಮಾಯ ರವರು ಕಾರ್ಯಕ್ರಮ ನಿರ್ವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top