ಮಂಗಳೂರು: ಕೆನರಾ ಕಾಲೇಜಿನಲ್ಲಿ ಮಧ್ವ ಜಯಂತಿ ಪ್ರಯುಕ್ತ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲ್ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಜಗದ್ಗುರು ಶ್ರೀ ಮದ್ವಾಚಾರ್ಯರ ಕುರಿತು ವಿದ್ಯಾರ್ಥಿಯರಲ್ಲಿ ಇನ್ನಷ್ಟು ಜ್ಞಾನ ಮೂಡಿಸುವ ಉದ್ದೇಶದಿಂದ ಆಚರಿಸಲಾಯಿತು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಚೇತನ ಇವರು ಮಧ್ವಾಚಾರ್ಯರ ಜೀವನ ಚರಿತ್ರೆ ಸಿದ್ಧಾಂತ ಹಾಗೂ ಅವರ ಬಗ್ಗೆ ಇದ್ದ ತಪ್ಪು ಕಲ್ಪನೆಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ನೈಜ ವಿಚಾರಗಳ ಕುರಿತು ಪಿಪಿಟಿ ಮೂಲಕ ಪ್ರಸ್ತುತಪಡಿಸಿದರು.
ಮಧ್ವಾಚಾರ್ಯರ ಜೀವನ ವೃತ್ತಾಂತದ ಕುರಿತು ಶ್ರೀ ವರದರಾಜ ಭಕ್ತ ಸಂಸ್ಕೃತದಲ್ಲಿ ಭಾಷಣ ಮಾಡಿದರು. ಮಧ್ವಾಚಾರ್ಯ ಹಾಗೂ ಜಿಎಸ್‌ಬಿ ಸಮುದಾಯಕ್ಕೆ ಇರುವ ಸಂಬಂಧದ ಬಗ್ಗೆ ಕೊಂಕಣಿಯಲ್ಲಿ ಶ್ರೀ ಎಂ ವೆಂಕಟೇಶ ಭಟ್ ಅವರು ಉಪನ್ಯಾಸ ನೀಡಿದರು. ಶ್ವೇತಾ ಕಾಮತ್ ಅವರು ದ್ವಾದಶ ಸ್ತೋತ್ರದಲ್ಲಿ ಒಂದಾದ ಪ್ರೀಣಯಾಮೋ ವಾಸುದೇವಂ ಎಂಬ ಹಾಡನ್ನು ಹಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ವೇತಾ ಕಾಮತ್ ಪ್ರಾರ್ಥಿಸಿ ಸೃಜನ್ ವಂದಿಸಿದರು. ಸೌರವ್ ಸಾಲಿಯಾನ್ ನಿರೂಪಿಸಿದರು. ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲದ ಸಂಯೋಜಕಿ ಶ್ರೀಮತಿ ಸುಜಾತ ಜಿ ನಾಯಕ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ