ಸುರತ್ಕಲ್: ವಿವಿಧ ವೈದ್ಯಕೀಯ ಸನ್ನಿವೇಶಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಸೂಕ್ತ ಸಂದರ್ಭದಲ್ಲಿ ತುರ್ತಾಗಿ ರಕ್ತ ಲಭ್ಯವಾದಾಗ ಜೀವರಕ್ಷಣೆ ಸಾಧ್ಯವಿದೆ. ರಕ್ತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಜಿಲ್ಲಾ ರೆಡ್‌ಕ್ರಾಸ್ ಘಟಕದ ಸಂಯೋಜಕ ಪ್ರವೀಣ್ ನುಡಿದರು. ಅವರು ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಯುವ ರೆಡ್‌ಕ್ರಾಸ್ ಘಟಕ, ರೋಟರಾಕ್ಟ್ ಕ್ಲಬ್, ರೆಡ್ ರಿಬ್ಬನ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಎನ್.ಸಿ.ಸಿ ಘಟಕಗಳ ಸಹಯೋಗದಲ್ಲಿ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಮಂಗಳೂರು, ರೋಟರಿ ಕ್ಲಬ್ ಸುರತ್ಕಲ್ ಹಾಗೂ ಇನ್ನರ್ ವೀಲ್ ಕ್ಲಬ್ ಸುರತ್ಕಲ್‌ಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು.
ರೋಟರಿ ಕ್ಲಬ್ ಸುರತ್ಕಲ್‌ನ ಅಧ್ಯಕ್ಷ ಯೋಗೀಶ್ ಕುಳಾಯಿ ಉದ್ಘಾಟನೆ ನೆರವೇರಿಸಿದರು. ಇನ್ನರ್‌ವೀಲ್ ಕ್ಲಬ್ ಸುರತ್ಕಲ್‌ನ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ ಮಾತನಾಡಿ, ರಕ್ತದಾನ ಶ್ರೇಷ್ಠದಾನವಾಗಿದ್ದು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಅವರು ಗೋವಿಂದ ದಾಸ ಕಾಲೇಜು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು ವಿವಿಧ ಸಂದಭಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿಸುತ್ತಿದೆ ಎಂದರು. ಯುವ ರೆಡ್‌ಕ್ರಾಸ್ ಮಂಗಳೂರಿನ ನೋಡಲ್ ಆಫೀಸರ್ ಡಾ. ಗಾಯತ್ರಿ ಎನ್ ಶುಭ ಹಾರೈಸಿದರು.
ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಉಪ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರಾದ ಪ್ರೊ. ಹರೀಶ ಆಚಾರ್ಯ ಪಿ, ಪ್ರೊ. ನೀಲಪ್ಪ ವಿ., ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಪೂರ್ಣಿಮಾ ಗೋಖಲೆ, ಅಶ್ವಿನ್ ಎಂ., ಎನ್.ಸಿ.ಸಿ ಅಧಿಕಾರಿ ಕ್ಯಾ.ಡಾ. ಸುಧಾ ಯು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಅಕ್ಷತಾ ವಿ., ಡಾ. ಭಾಗ್ಯಲಕ್ಷ್ಮಿ ರೋಟರಾಕ್ಟ್ ಕ್ಲಬ್‌ನ ಸಂಯೋಜಕಿ ಶಿಲ್ಪಾರಾಣಿ ಕೆ., ರೋವರ‍್ಸ್ ಕ್ಲಬ್‌ನ ಸಂಯೋಜಕ ಡಾ. ಪ್ರಶಾಂತ್ ಎಂ.ಡಿ, ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ. ಆಶಾ, ಹೆಚ್.ಡಿ.ಎಫ್.ಸಿ ಬ್ಯಾಂಕಿನ ಉಪ ವ್ಯವಸ್ಥಾಪಕಿ ಮೈತ್ರಿ ಶೆಟ್ಟಿ, ಸರಕಾರಿ ಲೋಡಿಗೋಷನ್ ಆಸ್ಪತ್ರೆ ಮಂಗಳೂರಿನ ವೈದ್ಯಕೀಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅರುವತ್ತೇಳು ಮಂದಿ ರಕ್ತದಾನ ಮಾಡಿದರು.
ದಿಯಾ ಸ್ವಾಗತಿಸಿ ಜನ್ಯ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ