ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿ: ಸರ್ಕಾರಕ್ಕೆ ಆರೋಗ್ಯಸೇವಾ ಕ್ಷೇತ್ರದ ಉದ್ಯಮಿಗಳ ಮನವಿ

Upayuktha
0

 

ಬೆಂಗಳೂರು: ಆರೋಗ್ಯಸೇವಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿ. ನೀತಿ ನಿರೂಪಣೆಯಲ್ಲಿ ನಮ್ಮ ಅಭಿಪ್ರಾಯ ಮಂಡನೆಗೂ ಅವಕಾಶ ನೀಡಿ ಎಂದು ಆರೋಗ್ಯಸೇವಾ ಕ್ಷೇತ್ರದ ಉದ್ಯಮಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು.



ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ 2023ರ 2ನೇ ದಿನ ನಡೆದ, ಯುಎಸ್-ಭಾರತ ಜಂಟಿಯಾಗಿ ನಿರ್ವಹಿಸಿದ, “ಭವಿಷ್ಯದ ಆರೋಗ್ಯಸೇವೆ ನಿರೂಪಿಸುವ ನವೀನ ತಂತ್ರಜ್ಞಾನಗಳು” ಕುರಿತು ಸಂವಾದದಲ್ಲಿ ಈ ಅಭಿಪ್ರಾಯ ಕೇಳಿಬಂತು.



ಬೋಸ್ಟನ್ ಸೈಂಟಿಫಿಕ್‌ನ ನಿರ್ದೇಶಕರಾದ ಡಾ.ವೈಭವ್ ಗಾರ್ಗ್ ಅವರು, ಜನರಿಗೆ ಗುಣಮಟ್ಟದ, ಹೊಸ ತಂತ್ರಜ್ಞಾನದ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು. ಆರೋಗ್ಯ ಕ್ಷೇತ್ರದಲ್ಲಿ ಪಿಪಿಪಿ ಮಾದರಿಯ ಅನುಷ್ಠಾನದ ಮೂಲಕ ಅಂತರ ತೆಗೆದುಹಾಕಬೇಕು ಎಂದು ಮನವಿ ಮಾಡಿದರು. 



ಇದೇ ವೇಳೆ ಇನ್‌ಟ್ಯೂಟಿವ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕರಾದ ಸ್ವಾತಿ ಗುಪ್ತಾ ಮಾತನಾಡಿ, ರೋಬೋಟಿಕ್ ಸರ್ಜರಿಯು ಅನಪೇಕ್ಷಿತ ಸಂಕೀರ್ಣತೆಗಳಿಲ್ಲ, ವೇಗವಾದ ಹಾಗೂ ಮಿತವ್ಯಯದ ವಿಧಾನವಾಗಿದೆ. ಇದನ್ನು ವಿಮಾ ವ್ಯಾಪ್ತಿಗೆ ತರುವ ಮೂಲಕ ಜನರಿಗೆ ಈ ಆಧುನಿಕ ತಂತ್ರಜ್ಞಾನ ಕೈಗೆಟಕುವಂತೆ ಮಾಡಬೇಕು ಎಂದು ಮನವಿ ಮಾಡಿದರು.



ಶೀಘ್ರವೇ ಆರೋಗ್ಯ ನೀತಿ

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿಯಾಗಿರುವ ಡಾ.ಅಮೃತ್ ಕದಮ್ ಅವರು ಮಾತನಾಡಿ. ಅಂತರ ಇರುವುದು ಹೌದು, ಪ್ರಸ್ತುತ ಸಾರ್ವಜನಿಕ ಆರೋಗ್ಯಸೇವೆಯಲ್ಲಿ ನಿಬಂಧನೆಗಳಿವೆ. ಖಾಸಗಿ ಸಹಭಾಗಿತ್ವ ಸಾಧ್ಯವಾಗುತ್ತಿಲ್ಲ. ಆಧುನಿಕ ತಂತ್ರಜ್ಞಾನ ಅಳವಡಿಕೆ, ಪಿಪಿಪಿ ಮಾದರಿಯನ್ನು ಎಷ್ಟರಮಟ್ಟಿಗೆ ಅನುಷ್ಠಾನಗೊಳಿಸಲು ಸಾಧ್ಯ ಎಂಬುದರ ಚಿಂತನೆ ನಡೆಯುತ್ತಿದೆ. ಶೀಘ್ರವೇ ಆರೋಗ್ಯ ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದರು.



ಭಾರತಕ್ಕಿದೆ ಸಾಮರ್ಥ್ಯ

ಭಾರತಕ್ಕೆ ಆರೋಗ್ಯಸೇವಾ ಉಪಕರಣಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ಇದ್ಕಕಾಗಿ ಸರ್ಕಾರ, ಉದ್ಯಮ ಹಾಗೂ ಮಾರುಕಟ್ಟೆ- ಈ ಮೂರನ್ನೂ ಒಂದುಗೂಡಿಸುವ ಕೆಲಸ ಆಗಬೇಕಿದೆ ಎಂದು ಜಿ.ಇ. ಹೆಲ್ತ್‌ಕೇರ್‌ನ ಹಿರಿಯ ಇಂಜಿನಿಯರಿಂಗ್ ನಿರ್ದೇಶಕರಾದ ರಾಮಕೃಷ್ಣ ರಾವ್ ಹೇಳಿದರು.



ಉದ್ಯಮಗಳೊಂದಿಗೆ ಕೈಜೋಡಿಸುತ್ತಿದೆ ಐಸಿಎಂಆರ್

ಲ್ಯಾಬ್‌ನಲ್ಲಿ ರೂಪುಗಳೊಂಡ ತಂತ್ರಜ್ಞಾನಗಳು ಮಾರುಕಟ್ಟೆಗೆ ಬರುತ್ತಿಲ್ಲ. ತಂತ್ರಜ್ಞಾನಗಳನ್ನು ಜನರ ಆರೋಗ್ಯಸೇವೆಗೆ ತರುವ ಸಲುವಾಗಿಯೇ ಉದ್ಯಮಗಳ ಜೊತೆ ಕೈಜೋಡಿಸಲು ಐಸಿಎಂಆರ್ ಕಾರ್ಯಪ್ರವೃತ್ತವಾಗಿದೆ ಎಂದು ಐಸಿಎಂಆರ್‌ನ ವಿಜ್ಞಾನಿ ಡಾ.ಸುಚಿತಾ ಮಾರ್ಕನ್ ಹೇಳಿದರು.



ಮಧುಮೇಹ ಟ್ರ್ಯಾಕ್‌ಗೆ ಲಿಬ್ರ್

ಗ್ಲುಕೋಸ್ ಮಟ್ಟದ ಮೇಲೆ ನಿರಂತರವಾಗಿ ನಿಗಾ ಇಡಲು ಲಿಬ್ರ್ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಗ್ಲುಕೋಸ್ ಮಟ್ಟದ ಮೇಲೆ ನಿಗಾ ಇಡುವುದರ ಜೊತೆಗೆ ವೈದ್ಯರ ಸಲಹೆಯನ್ನೂ ಒದಗಿಸುತ್ತದೆ. ಮೊಬೈಲ್‌ನಲ್ಲೇ ನಿರ್ವಹಿಸುವ ಈ ಸಾಧನ ಬಳಸುವುದರಿಂದ ಆಸ್ಪತ್ರೆಗೆ ದಾಖಲಾಗುವಿಕೆ ಶೇ.28 ರಷ್ಟು ಕಡಿಮೆಯಾಗಿದೆ ಎಂದು ಅಬಾಟ್ ಇಂಡಿಯಾ ಸಂಸ್ಥೆಯ ಜಿಎಂ ಕಲ್ಯಾಣ್ ಸಟ್ಟರು ಅವರು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top