ಬಂಟ್ವಾಳ ತಾಲೂಕು ಅ.ಭಾ.ಸಾ.ಪ. ಸಾಹಿತ್ಯ ಸಮಾವೇಶ 2023 ಕೈರಂಗಳ ಪುಣ್ಯಕೋಟಿ ನಗರದಲ್ಲಿ

Upayuktha
0



ಕೈರಂಗಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಗಂಗಳದಲ್ಲಿ ಸಾಹಿತ್ಯ ಸಮಾವೇಶ 2023 ಡಿಸೆಂಬರ್ 1 ರಂದು ನಡೆಯಲಿದೆ. ಉದ್ಘಾಟನೆಯ ಬಳಿಕ ಅಭಿರುಚಿ ಗೋಷ್ಠಿ, ಸಾಹಿತ್ಯ ಸೌರಭ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಯೋಜಿಸಲಾಗಿದೆ.


ದ.ಕ. ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್ ಎಸ್ ನಾಯಕ್ ಮಂಗಳೂರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಅ.ಭಾ.ಸಾ.ಪ. ಜಿಲ್ಲಾಧ್ಯಕ್ಷ ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಆಶಯ ಭಾಷಣ ಮಾಡಲಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಮುಖ್ಯ ಅತಿಥಿಯಾಗಿರುತ್ತಾರೆ. ಅಭ್ಯಾಗತರಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಭಾಗವಹಿಸಲಿದ್ದು, ಹಿರಿಯ ಸಾಹಿತಿ ಶ್ರೀನಿವಾಸ ಭಟ್ ಸೇರಾಜೆ  ಇವರ ಸರ್ವಾಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ.  ಸ್ವಾಗತ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮಭಟ್  ಶುಭ ಹಾರೈಸಲಿದ್ದಾರೆ ಎಂದು ಅ.ಭಾ.ಸಾ. ಪರಿಷತ್ ಬಂಟ್ವಾಳ ಸಮಿತಿ ಅಧ್ಯಕ್ಷ ಡಾ.ಸುರೇಶ ನೆಗಳಗುಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಪೂರ್ವಾಹ್ನ 10:30 ರಿಂದ ಅಭಿರುಚಿ ಕವಿಗೋಷ್ಠಿಯು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದು ಕವನ ಕಾವ್ಯ ವಾಚನ ಗೋಷ್ಠಿಯು  ಕವಯಿತ್ರಿ ಮಧುರಾ ಕಡ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿದ್ಯಾರ್ಥಿ ಕವಿಗೋಷ್ಠಿಯು ಕವಯಿತ್ರಿ ಸೀತಾಲಕ್ಷ್ಮೀ ವರ್ಮ ವಿಟ್ಲ, ಸಾಹಿತ್ಯ ರಸಪ್ರಶ್ನೆ ಗೋಷ್ಠಿಯು ಪತ್ರಿಕಾ ಸಂಪಾದಕ ರೇಮಂಡ್ ಡಿಕುನ್ಹಾ ತಾಕೋಡೆ, ಭಾರತ ದರ್ಶನ ಗೋಷ್ಠಿಯು ಬರಹಗಾರ ಸೀತಾರಾಮ ಭಟ್, ಪಾತ್ರವೈವಿಧ್ಯ ನಿರೂಪಣೆ ಗೋಷ್ಠಿಯು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ರಮೇಶ ಬಾಯರ್, ದೇಶ ಭಕ್ತಿಗೀತೆ ಗಾಯನ ರಸಗೋಷ್ಠಿಯು ಕವಿ ಗುಣಾಜೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.



ಅಪರಾಹ್ನ 1:30 ರಿಂದ ಸಾಹಿತ್ಯ ಸೌರಭ ಗೋಷ್ಠಿಯು ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕ ಕವಿ ರಘು ಇಡ್ಕಿದು ಅಧ್ಯಕ್ಷತೆಯಲ್ಲಿ ನಡೆಯಲಿದೆ.  ಹೊಸತಲೆಮಾರಿಗೆ ಸಾಹಿತ್ಯ ಪ್ರಸ್ತುತತೆ ಕುರಿತು ಸಾಹಿತಿ ಮೀನಾಕ್ಷಿ ರಾಮಚಂದ್ರ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಸಿದ್ಧ ಸಾಹಿತಿ, ಕವಿ, ಬರಹಗಾರರಿಂದ ಬಗೆಬಗೆಯ ಸಾಹಿತ್ಯ ಪ್ರಸ್ತುತಿ ನಡೆಯಲಿದೆ. 


ಅಪರಾಹ್ನ 3:30 ರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿದ್ದು ಸಾಹಿತಿ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ ಕಾಸರಗೋಡು ಇಲ್ಲಿನ ಪ್ರಾಧ್ಯಾಪಕ ಚೇತನ್ ಮುಂಡಾಜೆ ಸಮಾರೋಪ ಭಾಷಣ ಮಾಡಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top