ಮಂಗಳೂರು: ಗಾಂಧೀಜಿ ಮಹಾ ಮಾನವತಾವಾದಿ, ಚಿಂತಕ. ಸತ್ಯಾಗ್ರಹ, ಸಹಬಾಳ್ವೆ ಮೂಲಕ ಅಸ್ಪøಶ್ಯತೆ ಹೋಗಲಾಡಿಸಿದ ವ್ಯಕ್ತಿತ್ವ. ಇವರನ್ನು ಕೇವಲ ವ್ಯಕ್ತಿಯಾಗಿ ಪರಿಗಣಿಸದೆ, ಸಿದ್ಧಾಂತವಾಗಿ ಪರಿಗಣಿಸಬೇಕು. ಯುವಜನತೆಯಲ್ಲಿ ಈ ಬಗ್ಗೆ ಯಾವುದೇ ಗೊಂದಲಗಳ ಅಗತ್ಯವಿಲ್ಲ, ಎಂದು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅಭಿಪ್ರಾಯಪಟ್ಟರು.
ಅವರು ಕಾಲೇಜಿನ ಗ್ರಂಥಾಲಯದಲ್ಲಿ ಐಕ್ಯೂಎಸಿ ಮತ್ತು ಬಿ.ಬಿ.ಎ ವಿಭಾಗಗಳ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಲಾಗಿದ್ದ ಪುಸ್ತಕ ಪ್ರದರ್ಶನ ಮತ್ತು ವಿಮರ್ಶೆ ಕಾರ್ಯಕ್ರಮ `ಗ್ರಂಥಾವಲೋಕನʼದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐಕ್ಯೂಎಸಿ ಸಂಯೋಜಕ ಡಾ.ಸಿದ್ಧರಾಜು ಎಂ.ಎನ್ ಮಾತನಾಡಿ, ಗಾಂಧೀಜಿಯವರಲ್ಲಿ ಸ್ವಾತಂತ್ರ್ಯ ಪಡೆಯುವ ನಿಖರ ಯೋಚನೆ ಮತ್ತು ಬಲ ಇತ್ತು. ಅವರ ಯೋಚನೆ, ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿನಿ ಪೂಜಾ ರಮೇಶ್ ಹಡಪದ ಗಾಂಧೀಜಿಯ ಆತ್ಮಕಥೆ `ಸತ್ಯದೊಂದಿಗೆ ನನ್ನ ಪ್ರಯೋಗಗಳುʼ ಪುಸ್ತಕವನ್ನು ವಿಮರ್ಶಿಸಿದರು. ಗ್ರಂಥಪಾಲಕಿ ಡಾ.ವನಜಾ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ್ ಕೆ, ಬಿಬಿಎ (ಟೂರಿಸಂ ಮತ್ತು ಟ್ರಾವೆಲ್ ಮ್ಯಾನೇಜ್ಮೆಂಟ್) ವಿಭಾಗದ ಶ್ರೀರಾಜ್ , ಗ್ರಂಥಾಲಯ ನಿರ್ವಹಣಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


