ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯುಎಸ್ಸಿ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯೂತ್ ರೆಡ್ ಕ್ರಾಸ್ ಘಟಕ, ರೋವರ್ ರೇಂಜರ್ಸ್, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಲಯನ್ಸ್ ಅಮೃತ್ ಉಡುಪಿ ಇವರ ಸಹಯೋಗದಲ್ಲಿ ಸ್ವಚ್ಛತಾ ಹೈ ಸೇವಾ ಮತ್ತು ಗಾಂಧಿ ಜಯಂತಿಯ ಅಂಗವಾಗಿ ಕ್ಯಾಂಪಸ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಲಯನ್ಸ್ ಅಮೃತ್ ಉಡುಪಿ ಇದರ ಅಧ್ಯಕ್ಷರಾದ ಭಾರತಿ ಎಚ್ ಚಾಲನೆಯಿತ್ತು ಶುಭ ಹಾರೈಸಿದರು. ಪ್ರಾಂಶುಪಾಲರಾದ ಪ್ರೊ ಸುರೇಶ್ ರೈ ಕೆ. ಕಾರ್ಯಕ್ರಮದ ಔಚಿತ್ಯವನ್ನು ವಿವರಿಸುತ್ತಾ, ನಮ್ಮ ದೇಹದ ಸ್ವಚ್ಛತೆ ಜೊತೆಗೆ ನಾವು ಬದುಕುವ ಪರಿಸರವನ್ನು ಸ್ವಚ್ಛವಾಗಿಸಿದರೆ ಮಾತ್ರ ನಾವು ಆರೋಗ್ಯಪೂರ್ಣರಾಗಿ ಬದುಕಲು ಸಾಧ್ಯ. ಪರಿಸರ ಮಾಲಿನ್ಯ ಇಡೀ ವಿಶ್ವದಾದಂತ್ಯಾ ಮಾನವ ಸಮಾಜ ಎದುರಿಸುವ ಬಹುದೊಡ್ಡ ಸವಾಲುಗಳಲ್ಲೊಂದು. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯುವಜನತೆ ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಕರೆಯಿತ್ತರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ರಘು ನಾಯ್ಕ ಕಾರ್ಯಕ್ರಮ ಸಂಘಟಿಸಿದರು.
ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ., ರೋವರ್ ಸ್ಕೌಟ್ ಲೀಡರ್ ಡಾ ಉದಯ ಶೆಟ್ಟಿ ಕೆ. ರೇಂಜರ್ ಲೀಡರ್ ಡಾ. ಆಶಾ ಸಿ. ಇಂಗಳಗಿ, ಯೂತ್ ರೆಡ್ ಕ್ರಾಸ್ ಸಂಚಾಲಕರಾದ ಪ್ರಶಾಂತ್ ನೀಲಾವರ, ಎನ್.ಎಸ್.ಎಸ್. ಘಟಕ 2ರ ಯೋಜನಾಧಿಕಾರಿ ಮಮತಾ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಧಾಕೃಷ್ಣ., ಡಾ. ಪ್ರಸಾದ್ ರಾವ್ ಎಂ., ಸಾಂಸ್ಕೃತಿಕ ಸಂಘದ ಸಂಚಾಲಕರಾದ ಕೃಷ್ಣ ಸಾಸ್ತಾನ, ಲಯನ್ಸ್ ಅಮೃತ್ ಉಡುಪಿ ಇದರ ಪದಾಧಿಕಾರಿಗಳು ಹಾಗೂ ಎಲ್ಲಾ ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು
ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕಿ ಪಲ್ಲವಿ ಕಾಮತ್ ಸ್ವಾಗತಿಸಿ, ಪ್ರಜ್ವಲ್ ಜತನ್ ವಂದನಾರ್ಪಣೆಗೈದರು. ನಿತೀಶ್ ಜಿ. ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ 380ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


