ಮಂಗಳೂರು: ತುಳು ಭಾಷೆಯ ಸೌಂದರ್ಯ ವೃದ್ಧಿಸಲು ಮನೆಯ ಮಾತೆಯರು ಶ್ರಮಿಸಬೇಕು. ಇಂದು ವಿಶ್ವದಲ್ಲೇ ತುಳುವಿಗೆ ಮಾನ್ಯತೆ ಇದೆ. ತುಳುವರು ಪಸರಿಸಿಕೊಂಡಿದ್ದಾರೆ. ಆದರೆ ನಾವು ನಮ್ಮ ಮಕ್ಕಳಿಗೆ ಆಂಗ್ಲ ವ್ಯಾಮೋಹವನ್ನೇ ಹಚ್ಚುವ ಜೊತೆ ಜೊತೆಗೆ ನಮ್ಮ ಅನಾದಿ ಭಾಷೆಯಾದ ತುಳುವನ್ನು ನಿರ್ಲಕ್ಷಿಸಬಾರದು. ಮಾತ್ರ ಸಂಸ್ಕಾರದಿಂದಲೇ ಇದು ಬೆಳೆಯಬೇಕು. ಹಾಗಾಗಿ ಮಾತಾ- ಭಗಿನಿಯರೇ, ತುಳುವಿಗಾಗಿ ಶ್ರಮಿಸೋಣ ಎಂದು ಕುಡ್ಲ ತುಳು ಕೂಟ (ರಿ)ದ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ಕರೆ ನಿಡಿದರು.
ಅವರು ಟೆಲಿಕಾಂ ರಸ್ತೆಯಲ್ಲಿರುವ ಶ್ರೀದೇವಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಕುಡ್ಲ ತುಳು ಕೂಟದ ಬಂಗಾರ್ ಪರ್ಬ ಸರಣಿ ವೈಭವ -08 ರ ಕಾರ್ಯಕ್ರಮ 'ಮಾರ್ನೆಮಿದ ಮಿನದನ' ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಕಣ್ಣೂರು ನ ಮಾಜಿ ಮ.ನಾ.ಪ. ಸದಸ್ಯ ಮೋಹನ್ ಪಡೀಲ್ ರವರು ತುಳು ಕೂಟದ ತುಳುವಿಗಾಗಿ ನಡೆಸುವ ಹೋರಾಟಕ್ಕೆ ತುಳುವರಾದ ನಾವು ಬೆಂಬಲ ನೀಡಬೇಕು. ಅದು ನಮ್ಮ ಕರ್ತವ್ಯವೂ ಹೌದು. ತುಳು ಭಾಷಾ ಬೆಳವಣಿಗೆಗೆ ಶ್ರಮಿಸುವವರು ಇರುವವರಿಂದಲೇ ಇಂದು ಭಾಷೆ- ಭಾಷಿಗರು ಎಲ್ಲೆಡೆ ಇದ್ದಾರೆ. ನಾವೆಲ್ಲಾ ಇವರ ಜೊತೆ ಹೆಜ್ಜೆ ಹಾಕೋಣ ಎಂದರು.
ವಿಶೇಷವಾಗಿ ಗೆಲುವಿನ ವಿಜಯದಶಮಿಯ ಬಗ್ಗೆ ಬೀರಿ- ಕೋಟೆಕಾರ್ ನ ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ. ರಾಕೇಶ್ ಕುಮಾರ್ ಹಾಗೂ ಆದಿ ಅಕ್ಷರದ ದಿನ ವಿದ್ಯಾ ದಶಮಿಯ ಬಗ್ಗೆ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶೇಷಪ್ಪ ಅಮೀನ್ ಉಪನ್ಯಾಸವಿತ್ತರು.
ಶ್ರೀದೇವಿ ದೇವಸ್ಥಾನದ ಅಧ್ಯಕ್ಷ ಹಾಗೂ ಧಾರ್ಮಿಕ ಮುಂದಾಳು ಮಯೂರ್ ಉಳ್ಳಾಲ್ ಶುಭ ಹಾರೈಸಿದರು. ಆನಂದ ಕೆ. ಸರಿಪಳ್ಳ, ಸಿವಿಲ್ ಕಂಟ್ರಾಕ್ಟರ್. ಕೂಟದ ಖಚಾಂಚಿ ಚಂದ್ರಶೇಖರ್ ಸುವರ್ಣ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿ, ಸುವರ್ಣರು ಧನ್ಯವಾದವಿತ್ತರು. ಶ್ರೀಮತಿ ಹೇಮಾ ನಿಸರ್ಗ ನಿರ್ವಹಿಸಿದ್ದರು.
ಆರಂಭದಲ್ಲಿ ಅಶೋಕ್, ಬಿ..ಶ್ರೀಮತಿ ಶೋಭಾ ವಿ. ಐತಾಳ್, ಶಿವಪ್ರಸಾದ್ ಪ್ರಭು, ಮಧುಸೂದನ ಅಲೆವೂರಾಯ ಕೂಟದಿಂದ ತುಳುವಿನಲ್ಲೇ ಯಕ್ಷಗಾನ ವೈಭವ ನಡೆಯಿತು. ತುಳುಕೂಟದ ಗೋಪಾಲ ಕೃಷ್ಣ ಪಿ, ರಮೇಶ್ ಕುಲಾಲ್, ವಿಶ್ವನಾಥ್ ಸಹಕರಿಸಿದರು.
ಸದಸ್ಯ ದಿನೇಶ್ ಕುಂಪಲ ರ ನೇತೃತ್ವದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ, ಮಾರ್ನೆಮಿಯ ಬಗೆ ಬಗೆಯ ವೇಷಗಳು, ಶಾರ್ದೂಲ, 'ಹುಲಿ ಕುಣಿತ ಮತ್ತು ಕಂಗೀಲು ನೃತ್ಯಗಳು ಅತ್ಯುತ್ತಮವಾಗಿ ಮೂಡಿ ಬಂತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ