ಪೆರ್ನಾಜೆ: ಕೋಗಿಲೆ ರಾಗಕ್ಕೆ ಇಂಪನು ನೀಡುತ ಕಂಪನ ಹೃದಯವ ತಂಪಾಗಿಸಿದವವನಾರು..? ಮಂಚಿ-ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನರಾತ್ರಿ ಉತ್ಸವ ಹಾಗೂ ಅಖಂಡ ಭಜನೋತ್ಸವ 2023 ಪ್ರಯುಕ್ತ ಅ.23ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಟ್ಲ ಸ್ವರ ಸಿಂಚನ ಕಲಾತಂಡದಿಂದ ಮಧುರ ಭಕ್ತಿ ಗೀತೆಗಳ ಗಾಯನ ನಡೆಯಿತು. ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರು ಮತ್ತು ತಂಡದಿಂದ ಕಾರ್ಯಕ್ರಮ ನಡೆಯಿತು.
ಜೀವನದಲ್ಲಿ ಬಣ್ಣಗಳು ಎಷ್ಟು ಮುಖ್ಯವೋ ಹಾಗೆ ಭಾವನೆಗಳು ಅಷ್ಟೇ ಮುಖ್ಯ ವಿಶಿಷ್ಟ ವಸ್ತ್ರ ವಿನ್ಯಾಸ ಜಗಮಗಿಸುವ ವೇದಿಕೆಯಲ್ಲಿ ಹಾಡುಗಳು ರಂಗೇರಿತು. ಹೃದಯ ಅರಳಿಸುವ ಗಾನ ವೈಭವದ ರಸದೌತಣ ಗಾನ ಸಂಕೀರ್ತನೆ, ಭಕ್ತಿ ಗೀತೆಗಳು ಸುಮಧುರವಾಗಿ ಮೂಡಿ ಬಂದು ಎಲ್ಲಾ ಕಲಾ ಪ್ರೇಮಿಗಳ ಮೆಚ್ಚುಗೆಗಳಿಸಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ