ದಸರಾದಂದು ಬಂಗಾರವೆಂದು ಮಂದಾರದ ಎಲೆಯನ್ನು ಏಕೆ ನೀಡುತ್ತಾರೆ ?

Upayuktha
0



ಸರಾದಂದು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಂದಾರದ ಎಲೆಗಳನ್ನು ಬಂಗಾರವೆಂದು ಪರಸ್ಪರರಿಗೆ ಕೊಟ್ಟು ದಸರಾದ ಶುಭಾಶಯಗಳನ್ನು ಕೋರುತ್ತಾರೆ. 


ಶಮಿಯ ಎಲೆಗಳು : ದಸರಾ ಹಬ್ಬದಂದು ಶಮಿಯ ಎಲೆಗಳನ್ನು ಪರಸ್ಪರರಿಗೆ ಕೊಡದೆ ವಾಸ್ತುವಿನಲ್ಲಿಡಬೇಕು. ಇದರಿಂದ ವಾಸ್ತುವಿನಲ್ಲಿನ ವಾಯುಮಂಡಲದ ಶುದ್ಧೀಕರಣವಾಗುತ್ತದೆ. ಶಮಿಯ ಎಲೆಯು ತೇಜತತ್ತ್ವರೂಪಿಯಾಗಿದೆ. ಇದು ರಜ-ತಮಾತ್ಮಕವಾಗಿರುವುದರಿಂದ ಅದರಿಂದ ಪ್ರಕ್ಷೇಪಿತವಾಗುವ ತೇಜ ಕಣಗಳು ವಾತಾವರಣದಲ್ಲಿ ಅಗ್ನಿಯನ್ನು ನಿರ್ಮಿಸುತ್ತವೆ. ಈ ಅಗ್ನಿಯ ಸೂಕ್ಷ್ಮ ಜ್ವಾಲೆಗಳಿಂದ ಜೀವದಲ್ಲಿ ಕ್ಷಾತ್ರಭಾವವು ಜಾಗೃತವಾಗಲು ಸಹಾಯವಾಗುತ್ತದೆ. ಕ್ಷಾತ್ರಭಾವವು ಆತ್ಮ ಶಕ್ತಿಯ ಬಲದಿಂದ ಜೀವವನ್ನು ಕ್ಷಾತ್ರವೃತ್ತಿ ಯತ್ತ ಕೊಂಡೊಯ್ಯುತ್ತದೆ. 



ಪಾಂಡವರು ವನವಾಸಕ್ಕೆ ಹೋಗುವಾಗ ಶಮಿವೃಕ್ಷದ ಪೊಟರೆಯಲ್ಲಿ ಶಸ್ತ್ರಗಳನ್ನು ಇಟ್ಟಿದ್ದರು. ಶಮಿಯ ಕಾಂಡದಿಂದ ಮತ್ತು ಎಲೆಗಳಿಂದ ಉತ್ಪನ್ನವಾಗುವ ತೇಜ ತತ್ತ್ವದ ಶಾಖದಿಂದ ಶಸ್ತ್ರಗಳಲ್ಲಿರುವ ಸುಪ್ತ ಮಾರಕ ಶಕ್ತಿಯು ಅಖಂಡವಾಗಿ ಕಾರ್ಯ ನಿರತಸ್ಥಿತಿಯಲ್ಲಿ ಉಳಿದಿತ್ತು. ಪಾಂಡವರು ವೃಕ್ಷದಿಂದ ಶಸ್ತ್ರಗಳನ್ನು ಕೆಳಗಿಳಿಸಿದ್ದರೂ, ಆ ಶಸ್ತ್ರಗಳ ಮಾಧ್ಯಮದಿಂದ ದುರ್ಜನರ ಮೇಲೆ ಮಾರಕ ಶಕ್ತಿಯನ್ನು ಬಿಟ್ಟು ಶಮಿ ವೃಕ್ಷದ ಎಲೆಗಳ ಸಹಾಯದಿಂದ ಸಂಪೂರ್ಣ ಬ್ರಹ್ಮಾಂಡದಲ್ಲಿ ಮಾರಕತತ್ತ್ವದ ಕಾರ್ಯವನ್ನು ಮಾಡಿದರು. ದಸರಾದಂದು ಶ್ರೀರಾಮನ ತಾರಕ ಹಾಗೂ ಹನುಮಂತನ ಮಾರಕತತ್ತ್ವಗಳು ಕಾರ್ಯನಿರತವಾಗುವುದರಿಂದ ಶಮಿಯ ಎಲೆಗಳು ಆಯಾ ತತ್ತ್ವಗಳನ್ನು ಆಕರ್ಷಿಸಿಕೊಂಡು ವಾಯುಮಂಡಲದಲ್ಲಿ ಪ್ರಕ್ಷೇಪಿ ಸುವ ಮಹತ್ಕಾರ್ಯವನ್ನು ಮಾಡುತ್ತವೆ.



ಮಂದಾರದ ಎಲೆಗಳು : ಮಂದಾರದ ಎಲೆಗಳು ಆಪ ಮತ್ತು ತೇಜ ಕಣಗಳಿಗೆ ಸಂಬಂಧಪಟ್ಟಿರುತ್ತವೆ. ಶಮಿಯಿಂದ ಪ್ರಕ್ಷೇಪಿತವಾದ ಲಹರಿಗಳು ಮಂದಾರದ ಎಲೆಗಳಿಂದ ಗ್ರಹಿಸಲ್ಪಟ್ಟು ಆಪ ತತ್ತ್ವದ ಬಲದಿಂದ ಚಲಿಸುವಂತೆ ಮಾಡುತ್ತವೆ. ಮಂದಾರದ ಎಲೆಗಳನ್ನು ಪರಸ್ಪರರಿಗೆ ಹಂಚಿದಾಗ ತೇಜತತ್ತ್ವದ ಕಣಗಳು ಎಲೆಗಳ ಮೂಲಕ ಜೀವದ ಅಂಗೈಯಲ್ಲಿ ಸಂಕ್ರಮಣವಾಗುತ್ತವೆ. ಇದರಿಂದ ಜೀವದ ಕೈಗಳಲ್ಲಿರುವ ದೇವತೆಗಳ ಸ್ಥಾನಗಳ ಬಿಂದುಗಳು ಕಾರ್ಯನಿರತವಾಗಿ ಆ ಬಿಂದುಗಳಿಂದ ಅವಶ್ಯಕವಿರುವ ತತ್ತ್ವಗಳು ಆಪಕಣಗಳ ಸಹಾಯದಿಂದ ಜೀವದ ಸೂಕ್ಷ್ಮದೇಹದಲ್ಲಿ ಹರಡುತ್ತವೆ. ಆದುದರಿಂದ ದಸರಾದಂದು ಶಮಿವೃಕ್ಷದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡು ವಾಯುಮಂಡಲದ ಶುದ್ಧೀಕರಣವನ್ನು ಮಾಡಬೇಕು ಮತ್ತು ಮಂದಾರದ ಎಲೆಗಳ ಮೂಲಕ ತೇಜತತ್ತ್ವವನ್ನು ಪರಸ್ಪರರಿಗೆ ನೀಡಿ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಬೇಕಾಗುವ ಕ್ಷಾತ್ರಭಾವವನ್ನು ಜಾಗೃತವಾಗಿಟ್ಟುಕೊಳ್ಳಬೇಕು.




ರಜ-ತಮಾತ್ಮಕ ಶಮಿಯಿಂದ ತೇಜಕಣಗಳು ಹೇಗೆ ಪ್ರಕ್ಷೇಪಿತವಾಗುತ್ತವೆ ?

ಶಮಿಯಿಂದ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳು ತೇಜತತ್ತ್ವದ ಸಹಾಯದಿಂದ ವಾತಾವರಣದಲ್ಲಿ ಪ್ರಕಟ ಕಾರ್ಯವನ್ನು ಮಾಡುತ್ತವೆ. ಮೊದಲು ಶಮಿಯ ಎಲೆಗಳಲ್ಲಿರುವ ರಜೋಕಣಗಳ ಘರ್ಷಣೆಯಿಂದ ಉತ್ಪನ್ನವಾದ ಇಂಧನವು ತೇಜವನ್ನು ನಿರ್ಮಾಣ ಮಾಡುತ್ತದೆ ಮತ್ತು ಈ ತೇಜವು ಅಗ್ನಿಯ ರೂಪದಲ್ಲಿ ತಮ ಕಣಗಳ ಸಹಾಯದಿಂದ ವಾತಾವರಣದಲ್ಲಿರುವ ಕಪ್ಪು ಕಣಗಳನ್ನು ವಿಘಟನೆ ಮಾಡುತ್ತದೆ. ಅಂದರೆ ಶಮಿ ಪತ್ರವು ತಮ ಕಣಗಳ ಸಹಾಯದಿಂದ ಕಪ್ಪು ಕಣಗಳನ್ನು ನಾಶ ಮಾಡುತ್ತದೆ.



-ಸಂಗ್ರಹ

ಶ್ರೀ. ವಿನೋದ ಕಾಮತ್,


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top