ಹೋರಾಟ, ಪರಾಕ್ರಮದ ದ್ಯೋತಕವಾಗಿ ರಥಯಾತ್ರೆ
ಮಂಗಳೂರು: ವಿಶ್ವಹಿಂದೂ ಪರಿಷತ್- ಬಜರಂಗದಳ ರಾಜ್ಯಾದ್ಯಂತ ಆಯೋಜಿಸಿರುವ ಶೌರ್ಯ ಜಾಗರಣ ರಥ ಯಾತ್ರೆಯು ಅ.9ರಂದು ಮಂಗಳೂರಿಗೆ ಆಗಮಿಸಲಿದ್ದು, ನಗರದ ಕದ್ರಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಇದಕ್ಕೆ ಮುನ್ನ ನಗರದಾದ್ಯಂತ ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಜ್ಯೋತಿ ಅಂಬೇಡ್ಕರ್ ವೃತ್ತದಿಂದ 2-30 ಗಂಟೆಗೆ ಸ್ಥಬ್ಧಚಿತ್ರ, ಚೆಂಡೆ, ಕೊಂಬು, ನಾಸಿಕ್ ಬ್ಯಾಂಡ್, ಇನ್ನಿತರ ವೇಷ ಭೂಷಣಗಳೊಂದಿಗೆ ಶೌರ್ಯ ಜಾಗರಣ ರಥಯಾತ್ರೆಯು "ಬೃಹತ್ತಾದ ಶೋಭಾಯಾತ್ರೆ" ಹೊರಟು ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ಸಾಗಿ ಕದ್ರಿ ಮೈದಾನದಲ್ಲಿ ಸೇರುವುದು ಆ ಬಳಿಕ ಸಾರ್ವಜನಿಕ ಸಭೆ, ಸಭೆಯನ್ನು ಉದ್ದೇಶಿಸಿ ಚಕ್ರವರ್ತಿ ಸೂಲಿಬೆಲೆ ಮಾತನಾಡಲಿದ್ದಾರೆ.
ಸೆ.28ರಂದು ಚಿತ್ರದುರ್ಗದಿಂದ ಹೊರಟಿರುವ ಶೌರ್ಯಜಾಗರಣ ರಥಯಾತ್ರೆಯು ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸಿ ನಾಡಿದ್ದು 9ರಂದು ಮಂಗಳೂರಿಗೆ ಆಗಮಿಸುತ್ತಿದೆ.
ಈ ಕುರಿತು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಹಿಂದೂ ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಈಗಾಗಲೇ ಮನೆ ಮನೆ ಸಂಪರ್ಕ ಸಹಿತ ವಿವಿಧ ಪ್ರಚಾರ ಅಭಿಯಾನಗಳಲ್ಲಿ ತೊಡಗಿದ್ದಾರೆ.
ಶೌರ್ಯ ಜಾಗರಣ ರಥಯಾತ್ರೆ: ಯಾಕೆ? ಏನು?
ವಿಶ್ವ ಹಿಂದೂ ಪರಿಷದ್- ಬಜರಂಗದಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಕ್ಷೇತ್ರಗಳಲ್ಲೊಂದು. ದೇಶದ ಶ್ರದ್ದಾಕೇಂದ್ರಗಳ ಅಳಿವು ಉಳಿವಿನ ಪ್ರಶ್ನೆಗಳು ಬಂದಾಗ, ಮತಾಂತರ, ಭಯೋತ್ಪಾದನೆ, ಗೋಹತ್ಯೆ, ಹಿಂದೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೀಗೆ ನಾನಾ ಸವಾಲುಗಳನ್ನು ಹೋರಾಟದ ಮೂಲಕ ಮೆಟ್ಟಿ ನಿಂತ ಸಂಘಟನೆ ಅದು ವಿಹಿಂಪ ಬಜರಂಗದಳ. ದೇಶದಲ್ಲಿ ಅಯೋಧ್ಯೆಯ ರಾಮಮಂದಿರದ ಆಂದೋಲನದ ಮೂಲಕ ಇಡೀ ಜಗತ್ತಿಗೆ ವಿಹಿಂಪದ ಶಕ್ತಿ ಏನೆಂಬುದು ಅಂದು ತಿಳಿದಿತ್ತು. ಜಮ್ಮು ಕಾಶ್ಮೀರದ ಅಮರನಾಥ ದೇವಾಲಯದ ಹೋರಾಟ, ರಾಮಸೇತು ಉಳಿಸಿ ಆಂದೋಲನ, ಆಂದ್ರಪ್ರದೇಶದ ತಿರುಪತಿ ಸಂರಕ್ಷಣಾ ಹೋರಾಟ, ಕರ್ನಾಟಕದ ದತ್ತಪೀಠ ಹೋರಾಟಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ಸಾಮಾಜಿಕ ಸವಾಲು, ಸಾಮಾಜಿಕ ಪಿಡುಗುಗಳ ವಿರುದ್ಧದ ಸಂಘಟಿತ ಹೋರಾಟ ಇಂದಿಗೂ ನಿತ್ಯನಿರಂತರ ಸಾಗಿವೆ. ಸಮಾಜದಲ್ಲಿ ತಾಂಡವವಾಡುತ್ತಿರುವ ಅಸ್ಪೃಶ್ಯತೆ ನಿವಾರಣೆಗೆ, ಸಾಮಾಜಿಕ ಪರಿವರ್ತನೆಗೆ ಸಾಧು ಸಂತರು-ಮಠಾಧೀಶರ ಮೂಲಕ ಜಾಗೃತಿ, ವಿಹಿಂಪ-ಬಜರಂಗದಳದ ಮೂಲಕ ದೇಶದಲ್ಲಿ ನಡೆದ ಸಾವಿರಾರು ಸಂಘಟನಾತ್ಮಕ ಹೋರಾಟಗಳಲ್ಲಿ ಹಲವಾರು ಬಲಿದಾನ, ಜೈಲುವಾಸ, ಗುಂಡೇಟು, ಗೋಲಿಬಾರ್, ಲಾಠಿ ಚಾರ್ಜ್, ಹತ್ತಾರು ಮೊಕದ್ದಮೆಗಳು ಇವೆಲ್ಲವನ್ನೂ ಎದುರಿಸಿ ಮುಂದೆ ಸಾಗಿ ಸಾಮಾಜಿಕ ಹೋರಾಟಗಳು ಆರೆಸ್ಸೆಸ್ಸ್ ತಳಹದಿಯಲ್ಲೇ ಜೀವಂತವಾಗಿ ಉಳಿದಿವೆ. ವಿಹಿಂಪದ ಯುವಘಟಕ ಬಜರಂಗದಳ ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಮೂರು ಧ್ಯೇಯ ವಾಕ್ಯದಡಿಯಲ್ಲಿ ಸೇವೆಯ ಜೊತೆಗೆ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದೆ.
ದೇಶದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳು, ಕ್ಷಾಮ, ಪ್ರವಾಹ, ಭೀಕರ ದುರಂತಗಳು,ಜಗತ್ತಿಗೆ ಬಾಧಿಸಿದ ಕರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು, ಮಾನಪ್ರಾಣ ಉಳಿಸಿದ ಸಹಾಯ ಹಸ್ತ ಚಾಚಿರುವ ಹೆಗ್ಗಳಿಕೆ ವಿಹಿಂಪ ಬಜರಂಗದಳ ಸಂಘಟನೆಗಿದೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಶವಸಂಸ್ಕಾರ, ಅಗತ್ಯ ಆಹಾರ ಕಿಟ್ ವಿತರಣೆ,20,000 ಕ್ಕೂ ಮಿಕ್ಕಿ ಯೂನಿಟ್ ರಕ್ತದಾನ, ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸೇಶನ್ ನಡೆಸಿದೆ. ಇಂದು ವಿಹಿಂಪ ಬಜರಂಗದಳ ಪ್ರತಿ ಗ್ರಾಮಗಳಲ್ಲಿ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು, ಸಂಘಟನೆಯ ಸೇವಾ ಚಟುವಟಿಕೆಗಳ ಅಂಗವಾಗಿ ವಾರ್ಷಿಕ 50,000ಕ್ಕೂ ಮಿಕ್ಕಿ ಮಂದಿ ಕಾರ್ಯಕರ್ತರು ರಕ್ತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳು, ಸುಸಜ್ಜಿತ ಬಸ್ ತಂಗುದಾಣ, ತುರ್ತು ಸೇವೆಗೆಂದು ಸಂಘಟನೆಯ ವತಿಯಿಂದ ಆಂಬ್ಯುಲೆನ್ಸ್ ಸೇವೆ, ಗೋ-ಶಾಲೆಗಳ ಮೂಲಕ ಗೋವುಗಳ ಸಂರಕ್ಷಣೆ, ಬಡ ಹೆಣ್ಣು ಮಕ್ಕಳ ಮದುವೆ, ಶಿಕ್ಷಣ, ಆರೋಗ್ಯ, ವಸತಿ, ಮೂಲಭೂತ ಸೌಕರ್ಯಗಳಿಗೆ ವಿಶೇಷ ಕಾಳಜಿ, ಬುಡಕಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಸಂಸ್ಕಾರದ ತರಬೇತಿ ಇವೆಲ್ಲವೂ ಸಮಾಜದ ಮುಂದೆ ಸಂಘಟನೆಯ ದಿಟ್ಟ ಹೆಜ್ಜೆಯಾಗಿದೆ.
1964 ರಲ್ಲಿ ಮುಂಬೈನ ಸಾಂದಿಪನಿ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಹಿಂಪ ಧರ್ಮ ಸಂರಕ್ಷಣೆಯ ಸ್ಪಷ್ಟ ನಿಲುವಿನೊಂದಿಗೆ ಜನ್ಮ ತಾಳಿದ್ದಲ್ಲದೆ, ಧರ್ಮ, ಕಾರ್ಯಗಳಿಗೆ ಧಕ್ಕೆ, ಆಕ್ರಮಣಗಳಾದಾಗ ಯೋಧರಂತೆ ಶೌರ್ಯ ಮೆರೆದ ಇತಿಹಾಸಗಳಿವೆ. ವಿಹಿಂಪ ಬಜರಂಗದಳದ ಹೋರಾಟ, ಆಂದೋಲನದ ಫಲಶ್ರುತಿಯಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕೆಲಸಗಳು ಭರದಿಂದ ಸಾಗುತ್ತಿದೆ. ವಿಹಿಂಪ ಸ್ಥಾಪನೆಯಾಗಿ 60 ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಧರ್ಮದ ವೈಭವಯುತ, ಚರಿತ್ರೆ, ಹೋರಾಟಗಳನ್ನು ತ್ಯಾಗ, ಪರಾಕ್ರಮದ ಗತವೈಭಗಳನ್ನು ಸಮಾಜಕ್ಕೆ ನೆನೆಪು ಮಾಡುವ ಉದ್ದೇಶದಿಂದ ಬಲಿಷ್ಠ ಸಮಾಜ, ಬಲಿಷ್ಠ ರಾಷ್ಟ್ರ ನಿರ್ಮಾಣದ ಉದ್ದೇಶದಿಂದ ರಾಷ್ಟ್ರಾದ್ಯಂತ ಶೌರ್ಯ ಜಾಗರಣ ರಥಯಾತ್ರೆಯು ಸಾಗಲಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 25-09-2023 ರಂದು ಚಿತ್ರದುರ್ಗದಿಂದ ಪ್ರಾರಂಭಗೊಂಡು 10-10-2023 ಕರಾವಳಿಯ ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ. ಈ ಶೌರ್ಯ ಯಾತ್ರೆಯು ಪ್ರಮುಖವಾಗಿ ರಾಜ್ಯದ ಪ್ರತಿ ಜಿಲ್ಲೆ, ಕೆಲ ತಾಲೂಕುಗಳಲ್ಲಿ ಪ್ರವೇಶಿಸಿ ಬೃಹತ್ ಶೌರ್ಯ ಸಮಾವೇಶಗಳು ಅಲ್ಲಲ್ಲಿ ಜರುಗಲಿದೆ.ಸಾಧು ಸಂತರು ಮಠಾಧೀಶರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಧರ್ಮ ಜಾಗೃತಿ ಸಭೆಗಳು ಕೂಡ ಈಗಾಗಲೇ ಆಯೋಜನೆಗೊಂಡಿದೆ.
ಸಮಾಜಕ್ಕೆ ಅನ್ಯರಿಂದ ಆಗಿರುವ ದಬ್ಬಾಳಿಕೆ, ದೌರ್ಜನ್ಯ, ಹಾನಿಯನ್ನು ಅಳಿಸಿ ಗೌರವಯುತ ಸಮಾಜ ನಿರ್ಮಾಣಕ್ಕೆ ಪ್ರೇರೇಪಣೆ ನೀಡುವುದು, ಹಿಂದೂ ಧರ್ಮದ ಅಡಿಪಾಯಗಳಾದ ಗೋವು, ಶ್ರದ್ದಾಕೇಂದ್ರ, ಉಳಿಸಿ ಬೆಳೆಸುವಲ್ಲಿ ಪ್ರೇರಣೆ ನೀಡುವುದು, ಸಮಾಜದಲ್ಲಿ ಪರಸ್ಪರ ಸಾಮರಸ್ಯದ ಭಾವನೆ ಮೂಡಿಸಿ ವಿಶ್ವಕ್ಕೆ ಮಂಗಲವನ್ನು ಬಯಸುವ, ಯುವ ಪೀಳಿಗೆಯನ್ನು ಪಾಶ್ಚಾತ್ಯ ಅಂಧಾನುಕರಣೆಯಿಂದ ಹೊರತಂದು ಹೆಮ್ಮೆಯ ಧರ್ಮ ಆಚರಣೆಗೆ ಪ್ರೇರಣೆ ನೀಡುವ, ಹಿರಿಯರ ತ್ಯಾಗ, ಸಮರ್ಪಣೆಯ ಬಗ್ಗೆ ಯುವಸಮುದಾಯದಲ್ಲಿ ಗೌರವ ಮೂಡಿಸಿ ಅವರ ಪ್ರೇರಣೆಯಿಂದ ದೇಶಕ್ಕಾಗಿ ಬದುಕುವ ಸಂಕಲ್ಪ ಮೂಡಿಸುವುದು, ಯುವ ಸಮುದಾಯವನ್ನು ವ್ಯಸನಗಳಿಂದ ಮುಕ್ತಗೊಳಿಸಿ ಧರ್ಮ ಸಂಸ್ಕ್ರತಿಯ ಮೇಲಿನ ಗೌರವ ಜಾಗೃತಗೊಳಿಸಿ ಸಮಾಜದಲ್ಲಿ ಸಾಮರಸ್ಯದ ಬದುಕಿನ ಬಗ್ಗೆ ಸಂಕಲ್ಪ ಶೌರ್ಯ ಜಾಗರಣಾ ರಥಯಾತ್ರೆಯ ಮೂಲ ಸದುದ್ದೇಶವಾಗಿದೆ. ಸಂಘಟನೆಯ ಕಾರ್ಯಕರ್ತ ತನ್ನ ವೈಯಕ್ತಿಕ ಬದುಕಿನ ಆಚೆಗೆ ಸಮಾಜಕ್ಕಾಗಿ ಬದುಕುವ, ಸಮಾಜಕ್ಕಾಗಿ ತನ್ನ ಸಮಯವನ್ನು ಮೀಸಲಿಡುವ, ಧರ್ಮ ಸಂರಕ್ಷಣೆಗಾಗಿ ಹತ್ತಾರು ಸೇವಾ ಕೈಂಕರ್ಯಗಳನ್ನು ನಡೆಸುವ, ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜದ ಮುಂದೆ ಧುಮುಕುವ ಒಂದು ಪರಿಪಾಠ ವಿಹಿಂಪ-ಬಜರಂಗದಳ ಅಥವಾ ಪರಿವಾರ ಕ್ಷೇತ್ರದಲ್ಲಿ ಸದಾ ಚಾಲ್ತಿಯಲ್ಲಿದೆ. ಸಂಘಟನೆಯ ಮೇಲೆ ಹತ್ತಾರು ಸವಾಲುಗಳು ಎದುರು ಬಂದರೂ ಕಾರ್ಯಕರ್ತರು ಅದನ್ನು ಸವಾಲಾಗಿಯೇ ಸ್ವೀಕರಿಸಿ ಸಮಾಜದ ಮಧ್ಯೆ ಧರ್ಮ ಕಾರ್ಯದಲ್ಲಿ ತೊಡಗಿದ್ದಾರೆ. ಇಂದಿಗೂ ವಿಹಿಂಪದಲ್ಲಿ ಮನೆ ಮಠ ಎಲ್ಲವನ್ನೂ ತೊರೆದು ಪ್ರಚಾರಕರಾಗಿ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡ ಹಲವಾರು ಹಿರಿಯರನ್ನು ಕಾಣಬಹುದು.
ಸಮಾಜದ ಮಧ್ಯೆ ಕಾರ್ಯನಿರ್ವಹಿಸುವ ಸಂಘಟನೆ ಅಥವಾ ಕಾರ್ಯಕರ್ತ ಕೆಲವೊಂದು ಬಾರಿ ದೂರದಲ್ಲಿ ನಿಂತು ನೋಡುವ ಗುಂಪಿಗೆ, ತನಗಾಗಿ ಬದುಕುವ ಗುಂಪಿಗೆ, ನಿರುದ್ಯೋಗಿಗಳು, ಅಬ್ಬೇಪಾರಿಗಳು, ಪೋಲಿಗಳು ಎಂದು ಹೀಗಳೆಯುವುದನ್ನು ಕಾಣುತ್ತೇವೆ. ಇಂದು ವಿಹಿಂಪ-ಬಜರಂಗದಳ ಅಥವಾ ಪರಿವಾರ ಸಂಘಟನೆಯಲ್ಲಿ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನಿಂದ ಹಿಡಿದು ಅಟೋ ಚಾಲಕ, ಬಸ್ ಚಾಲಕ, ಅಸಂಘಟಿತ ಕಾರ್ಮಿಕರು ಹೀಗೆ ಸಮಾಜದಲ್ಲಿ ವಿವಿಧ ವೃತ್ತಿ ಬದುಕನ್ನು ನಡೆಸುವ ಗುಂಪುಗಳೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಾರೆ. ಪರಿವಾರ ವ್ಯವಸ್ಥೆಯ ಮಧ್ಯೆ ಕೆಲಸ ನಿರ್ವಹಿಸುವಾಗ ಎಲ್ಲಾ ಸಂಘಟನೆಗಳ ಉದ್ದೇಶ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘದ "ಪರಂ ವೈಭವಂ ನೇತು ಮೇ ತತ್ವಸ್ವರಾಷ್ಟ್ರಂ" ಆಗಿದೆ. ಈ ದೇಶ ಜಗದ್ಗುರು, ವಿಶ್ವಗುರು, ಜಗದ್ವಂದ್ಯ ಭಾರತದ ಕಲ್ಪನೆಯ ಜೊತೆಗೆ ಈ ರಾಷ್ಟ್ರವನ್ನು ಪರಮ ವೈಭವದ ಕಡೆಗೆ ಕೊಂಡೊಯ್ಯುವುದು. ಕಾರ್ಯಕರ್ತ ತನ್ನ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಮೀಸಲಿಟ್ಟು, ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಮಿಡಿಯುವ ಸ್ಪಂದಿಸುವ ಗುಣ, ಸವಾಲು, ಅನ್ಯಾಯ, ದೇಶ, ಧರ್ಮದ ವಿಚಾರಗಳು ಬಂದಾಗ ತ್ಯಾಗಮಯ ಬದುಕು ನಡೆಸಿದ ಸಾವಿರಾರು ಕಾರ್ಯಕರ್ತರ ಪರಾಕ್ರಮವನ್ನು ನೆನೆಪಿಸುವ ಒಂದು ಕಾರ್ಯಕ್ರಮವೇ ಮಂಗಳೂರಿನಲ್ಲಿ ತಾ/09/10/2023ರಂದು ನಡೆಯುವ ಹಿಂದೂ ಸಮಾಜೋತ್ಸವ, ಬನ್ನಿ ಸಹೋದರ ಸಹೋದರಿಯರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ ಹಿಂದೂ ವಿರೋಧಿಗಳಿಗೆ ಹಿಂದುತ್ವದ ಶಕ್ತಿಯ ಪರಿಚಯ ತಿಳಿಸೋಣ ನಮ್ಮ ಪೂರ್ವಜರು ನಮಗೆ ಹಾಕಿಕೊಟ್ಟ ಹಿಂದುತ್ವದ ಭದ್ರ ಅಡಿಪಾಯವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹಿಂದುತ್ವದ ಭದ್ರ ಕೋಟೆಯನ್ನು ಕಟ್ಟಿ ಕೊಡುವಂತಹ ಕರ್ತವ್ಯ ನಮ್ಮೆಲ್ಲರದಾಗಿದೆ.
(ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಶೌರ್ಯ ಜಾಗರಣ ರಥಯಾತ್ರೆ ಸಮಿತಿ ಪ್ರಕಟಣೆ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ