ಉಜಿರೆ: ರಾಷ್ಟ್ರೀಯ ಪೋಷಣಾಯುಕ್ತ ಆಹಾರ ತಿಂಗಳು ಎಂದು ಸಪ್ಟೆಂಬರ್ ತಿಂಗಳನ್ನು ಆಚರಿಸಲಾಗುತ್ತಿದ್ದು, ಅದರ ಪ್ರಯುಕ್ತ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜು ಎಸ್ ಡಿ ಎಂ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರವನ್ನು ನಡೆಸಿತು. ಸತ್ವ ಪೂರ್ಣ ಆಹಾರದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಯೋಗ ವಿಜ್ಞಾನ ಕಾಲೇಜಿನ ಪೊಷಣೆ ಮತ್ತು ಆಹಾರ ಪದ್ಧತಿ ವಿಭಾಗವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಸ್.ಡಿ.ಎಂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಡಾ. ಮಧು ಪ್ರಿಯದರ್ಶಿನಿ ಎಂ, ಡಾ.ಮೇಧಿನಿ ವಿದ್ಯಾರ್ಥಿಗಳಿಗೆ ಆರೋಗ್ಯಕರವಾದ ಆಹಾರ ಪದ್ಧತಿಯ ಕುರಿತು ಮಾಹಿತಿ ನೀಡಿದರು.
ಡಯೇಟ್ ಆ್ಯಂಡ್ ನ್ಯೂಟ್ರೀಷಿಯನ್ ವಿಭಾಗದ ಮುಖ್ಯಸ್ಥೆಯಾದ ಡಾ. ಗೀತಾ ಬಿ ಶೆಟ್ಟಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಉತ್ತಮ ಆರೋಗ್ಯ ಹೊಂದಲು ಕೇವಲ ಆಹಾರ ಸೇವನೆ ಮಾತ್ರ ಮುಖ್ಯವಲ್ಲ, ಸರಿಯಾದ ಸಮಯದಲ್ಲಿ ಆರೋಗ್ಯಕರವಾದ ಆಹಾರ ಸೇವನೆಯೂ ಮುಖ್ಯವಾಗಿರುತ್ತದೆ. ಮನುಷ್ಯನ ದೇಹದ ಸಂಪೂರ್ಣ ಬೆಳವಣಿಗೆಯು ಯವ್ವನದಲ್ಲಾಗುವುದರಿಂದ ಈ ಸಮಯದಲ್ಲಿ ಸೇವಿಸುವ ಆಹಾರವು ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಈ ವರ್ಷವನ್ನು ಅಂತರಾಷ್ಟ್ರೀಯ ಧಾನ್ಯಗಳ ವರ್ಷ ಎಂದು ಆಚರಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಸಪ್ಟೆಂಬರ್ ತಿಂಗಳನ್ನು ಪೋಷಣಾಯುಕ್ತ ಆಹಾರದ ತಿಂಗಳು ಎಂದು ಆಚರಿಸುತ್ತಿರುವುದರಿಂದ ಆಹಾರ ಪದ್ಧತಿಯ ಕುರಿತು ತಿಳುವಳಿಕೆ ಹೊಂದಲು ಇದು ಸಕಾಲ ಎಂದು ಅಭಿಪ್ರಾಯಪಟ್ಟರು.
ಡಾ. ಮಧು ಪ್ರಿಯದರ್ಶಿನಿ ಎಂ, ಡಾ.ಮೇಧಿನಿ ವಿದ್ಯಾರ್ಥಿಗಳಿಗೆ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವ ಮಾರ್ಗವನ್ನು ಹಾಗೂ ವಿಧಾನಗಳನ್ನು ತಿಳಿಸಿದರು. ಪರಿಪೂರ್ಣ ಆಹಾರವು ಕಾರ್ಬೊಹೈಡ್ರೇಟ್, ಪ್ರೋಟೀನ್, ಆರೋಗ್ಯಯುತವಾದ ಕೊಬ್ಬು, ವಿಟಮಿನ್ಸ್,ಮಿನರಲ್ಸ್ ಹಾಗೂ ಸರಿಯಾದ ಪ್ರಮಾಣದ ನೀರನ್ನು ಹೊಂದಿರಬೇಕು ಎಂದು ತಿಳಿಸಿದರು. ಮನುಷ್ಯ ಆರೋಗ್ಯಯುತ ದೇಹವನ್ನು ಹೊಂದಲು ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯವೂ ಪ್ರಮುಖ ಪಾತ್ರವಹಿಸುತ್ತದೆ ಅಷ್ಟೇ ಅಲ್ಲದೆ ದೇಹಕ್ಕೆ ವ್ಯಾಯಾಮದ ಅವಶ್ಯಕತೆಯ ಕುರಿತೂ ಮಾಹಿತಿ ನೀಡಿದರು. ನಿತ್ಯ ಜೀವನದಲ್ಲಿ ಸುಲಭವಾಗಿ ಹೇಗೆ ಸತ್ವಯುತವಾದ ಆಹಾರ ತಯಾರಿಸಬಹುದು ಎಂಬುದನ್ನು ಸರಳೀಕರಿಸಿ ತಿಳಿಸಿದರು.
ಊಟದಲ್ಲಿ ಬಣ್ಣಗಳಿರಲಿ ಆರೋಗ್ಯಕರವಾದ ಶರೀರಕ್ಕೆ ವಿವಿಧ ಪೋಷಕಾಂಶಗಳ ಅಗತ್ಯವಿರುವುದರಿಂದ ಹಲವು ವಿದಧ ಆಹಾರ ಮುಖ್ಯ ಆದ್ದರಿಂದ ಆಹಾರವು ನೈಸರ್ಗಿಕ ಬಣ್ಣದ ವೈವಿಧ್ಯತೆಗಳಿಂದ ಕೂಡಿರಲಿ. ಕಾಮನಬಿಲ್ಲಿರುವ 7 ಬಣ್ಣಗಳನ್ನೂ ಆಹಾರ ಸೇವನೆಯಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಸಿದ್ಧಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಕ್ಷೇಮಪಾಲನಾ ಸಹಯೋಜಕ ಡಾ. ನವೀನ್ ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ವಿಷ್ಣುಪ್ರಿಯಾ ಸ್ವಾಗತಿಸಿ, ಶಿವಪ್ರಿಯಾ ವಂದಿಸಿ, ಆದಿರಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ