ಸೇವಾ ಮನೋಭಾವ ರೂಪಿಸುವುದು ರೆಡ್ ಕ್ರಾಸ್ ಸಂಸ್ಥೆ: ಬಸ್ರೂರು ರಾಜೀವ್ ಶೆಟ್ಟಿ

Upayuktha
0


ಉಡುಪಿ: ಯುವ ಜನತೆಯಲ್ಲಿ ಸೇವಾ ಮನೋಭಾವವನ್ನು ರೂಪಿಸುವುದು ಯುುವ ರೆಡ್ ಕ್ರಾಸಿನ ಉದ್ದೇಶವಾಗಿದ್ದು, ಇದರಿಂದಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿ, 4 ಬಾರಿ ನೋಬೆಲ್ ಪ್ರಶಸ್ತಿ ಪಡೆದ ಸಂಸ್ಥೆಯಾಗಿದೆ ಎಂದು ರೆಡ್‍ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.  

  

ಅವರು ಶಿರ್ವ ಸೈಂಟ್ ಮೆರಿಸ್ ಕಾಲೇಜಿನ ರೆಡ್‍ಕ್ರಾಸ್ ಘಟಕದ ವರ್ಷದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.     

ಉಡುಪಿಯಲ್ಲಿ ಕಳೆದ 20 ವರ್ಷಗಳಿಂದ ರೆಡ್‍ಕ್ರಾಸ್ ಸಂಸ್ಥೆಯು ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಾ ವಿಕಲಚೇತನರ ಪುನರ್ವಸತಿ ಕೇಂದ್ರದ ಮೂಲಕ ವಿಕಲಚೇತನರನ್ನು ಗುರುತಿಸಿ ಅವರಿಗೆ ಬೇಕಾದ ಸಾಧನ ಸಲಕರಣೆಗಳು ಮತ್ತು ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಾ ಬಂದಿದೆ. ಕಾಲೇಜುಗಳಲ್ಲಿ ಯುವ ರೆಡ್‍ಕ್ರಾಸ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಯುವ ರೆಡ್‍ಕ್ರಾಸ್ ಘಟಕಗಳನ್ನು ಪ್ರಾರಂಭಿಸಲಾದೆ ಎಂದರು.


ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಸಮಾಜ ಸೇವೆಯಲ್ಲಿ ಯುವಕರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕಗಳ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಭೇತಿ, ರಕ್ತದಾನ, ವಿಪತ್ತು ನಿರ್ವಹಣೆ, ಕ್ಯಾನ್ಸರ್ ತಪಾಸಣಾ ಮಾಹಿತಿ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ವಹಿಸಿದ್ದರು. 


ರೆಡ್‍ಕ್ರಾಸ್ ಕಾರ್ಯಕ್ರಮ ಅಧಿಕಾರಿ ಸಂಗೀತ ಹೆಚ್ ಪೂಜಾರಿ, ಪ್ರಾಧ್ಯಾಪಕ ವಿಠ್ಠಲ್ ನಾಯಕ್, ಯುವ ರೆಡ್‍ಕ್ರಾಸ್ ಮುಖಂಡ ಪ್ರೀಲ್ಸನ್ ಸ್ಯಾಮುವಲ್ ನೊರೊನ್ನ ಮತ್ತು ಐಕ್ಯೂಎಸಿ ಕೋ-ಅರ್ಡಿನೇಟರ್ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top