ಬೆಂಗಳೂರು : ಪ್ರೇಕ್ಷಕರ ಮನಸೆಳೆದ ಭರತನಾಟ್ಯ ಪ್ರದರ್ಶನ

Upayuktha
0



ಬೆಂಗಳೂರು : ನೃತ್ಯ ದಿಶಾ ಟ್ರಸ್ಟಿನ ವತಿಯಿಂದ ಸೆಪ್ಟೆಂಬರ್ 30 ಶನಿವಾರ ಸಂಜೆ ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ "ನೃತ್ಯ ನೀರಾಜನ" ಎಂಬ ಶೀರ್ಷಿಕೆಯಲ್ಲಿ ಕಿರಿಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಜರುಗಿತು.  `ಕಲಾಭೂಷಿಣಿ' ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ನಯನ ಹರೀಶ್, ಪವಿತ್ರ ರಮೇಶ್ ಮತ್ತು ತ್ರಿಶಾ ಶಿವಕುಮಾರ್ ಇವರುಗಳು ಭರತನಾಟ್ಯ ಪ್ರದರ್ಶನ ನೀಡಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕೊಳಲು ವಾದಕರಾದ ವಿ|| ವೇಣುಗೋಪಾಲ್, ಮೃದಂಗ ವಿ|| ಗಿರಿಧರ್ ಹಾಗೂ ವಿ|| ಸುಮ ಕೃಷ್ಣಮೂರ್ತಿ ವಹಿಸಿದ್ದರು.



ಕಲಾವಿದರು ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ರಾಗದ 'ಪುಷ್ಪಾಂಜಲಿಯೊಂದಿಗೆ  ಕಲಾವಿದರು ಕಾರ್ಯಕ್ರಮ ಪ್ರಾರಂಭಿಸಿ, ತದನಂತರ ಆದಿಶಂಕರರ "ಗಣೇಶ ಶ್ಲೋಕ" ನರ್ತಿಸಿದರು. ಮುಂದೆ ಖಂಡ ಅಲರಿಪು, ತೋಡಿ ಜತಿಸ್ವರ ನರ್ತಿಸಿದರು. ತ್ರಿಶಾ ಶಿವಕುಮಾರ್- ತಂಜಾವೂರು ಶಂಕರ್ ಅಯ್ಯರ್ ರವರ "ಮಹಾದೇವ ಶಿವ ಶಂಭೋ", ಶ್ರೀ ಅದಿಶಂಕರಚಾರ್ಯರ "ಐಗಿರಿ ನಂದಿನಿ", ನಯನ ಹರೀಶ್ ನರ್ತಿಸಿದರು. ಪವಿತ್ರ ರಮೇಶ್ ಅನ್ನಮಾಚಾರ್ಯರ "ಬ್ರಹ್ಮಮೊಕ್ಕಟೆ", "ಕಂಜದಳಾಯತಾಕ್ಷಿ ಕಾಮಾಕ್ಷಿ" ಹಾಗೂ ಬೃಂದಾವನಿ ರಾಗದ "ತಿಲ್ಲಾನ"ದೊಂದಿಗೆ ಕಾರ್ಯಕ್ರಮ ಸಂಪೂರ್ಣಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top