ಪುರಾಣ ಪ್ರಸಿದ್ಧ ಬಲರಾಮ‌ ಸನ್ನಿಧಿಯ ಪುನರುತ್ಥಾನಕ್ಕೆ ಮುನ್ನುಡಿ: ಫಲಿಮಾರು ಶ್ರೀಗಳಿಂದ ಶಿಲಾನ್ಯಾಸ

Upayuktha
0


ಉಡುಪಿ: ಪೌರಾಣಿಕ ಇತಿಹಾಸದೊಂದಿಗೆ ಥಳುಕು ಹಾಕಿಕೊಂಡಿರುವ ದಿವ್ಯ ಕ್ಷೇತ್ರ ಮಲ್ಪೆ ವಢಬಾಂಡೇಶ್ವರದ ಶ್ರೀ ಬಲರಾಮ ದೇವಸ್ಥಾನದ ಪುನರುತ್ಥಾನಕ್ಕೆ ಭಾನುವಾರ ಶರನ್ನವರಾತ್ರಿ ಆರಂಭದ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರುವ ಮೂಲಕ ಚಾಲನೆ ದೊರೆತಿದೆ.


ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಭಾನುವಾರ ಮುಂಜಾನೆ 5ಕ್ಕೆ ಸುಮುಹೂರ್ತದಲ್ಲಿ ವಿಧ್ಯುಕ್ತವಾಗಿ ಶಿಲಾನ್ಯಾಸ ನೆರವೇರಿಸಿ ಶುಭನುಡಿಯ ಮೂಲಕ ಸತ್ಕಾರ್ಯದ ನಿರ್ವಿಘ್ನ ಸಿದ್ಧಿಗೆ ಹರಸಿದರು. ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.


 

ಶಾಸಕ ಯಶ್ಪಾಲ್ ಸುವರ್ಣ, ಸುಬ್ರಹ್ಮಣ್ಯ ಭಟ್, ಉದ್ಯಮಿ ಆನಂದ್ ಸುವರ್ಣ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ಸೇರಿದಂತೆ ನೂರಾರು ಗಣ್ಯರು ಭಕ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top