ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು ಅ. 6 ಮತ್ತು 7 ರಂದು 'ರೀಸೆಂಟ್ ಎಡ್ವಾನ್ಸಸ್ ಇನ್ ಪ್ರೊಸೆಸಿಂಗ್ ಟೆಕ್ನಿಕ್ಸ್ ಫಾರ್ ಇಂಪ್ರೂವಿಂಗ್ ದ ಸರ್ಫೇಸ್ ಇಂಟಗ್ರಿಟಿ ಆಫ್ ಏರೋಸ್ಪೇಸ್-ಡಿಫೆನ್ಸ್ ಮೆಟೀರಿಯಲ್ಸ್ (ಆರ್ಪಿಐಎಸ್ಡಿ 2023)' ಎಂಬ ನವದೆಹಲಿ ಡಿ.ಆರ್.ಡಿ.ಒ ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
ಈ ವಿಚಾರ ಸಂಕೀರ್ಣವನ್ನು ಡಿ.ಆರ್.ಡಿ.ಒ ಬೆಂಗಳೂರಿನ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ನ ಸೈಂಟಿಸ್ಟ್ 'ಎಫ್' ಡಾ| ದಿಲ್ಲಿಬಾಬು ವಿಜಯಕುಮಾರ್ ಅಕ್ಟೋಬರ್ 6 ರಂದು ಉದ್ಘಾಟಿಸಿ ಮಾತನಾಡಿದರು. ನಿಟ್ಟೆಯ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಮತ್ತು ಡೀನ್ (ಶೈಕ್ಷಣಿಕ) ಡಾ|ಐ.ರಮೇಶ್ ಮಿತ್ತಂತಾಯ ಅಧ್ಯಕ್ಷತೆ ವಹಿಸಿದ್ದರು.
ಡಾ.ದಿಲ್ಲಿಬಾಬು ವಿಜಯಕುಮಾರ್ ಅವರು ಎಂಜಿನಿಯರಿಂಗ್ ಬೋಧಕರು, ವಿದ್ಯಾರ್ಥಿಗಳು ಮತ್ತು ಸ್ಟಾರ್ಟ್ ಅಪ್ ಗಳಿಗೆ ಡಿ.ಆರ್.ಡಿ.ಒ ದ ಆರ್&ಡಿ ಅವಕಾಶಗಳ ಕುರಿತು ಮಾತನಾಡಿದರು.
ಡಾ|ಐ.ರಮೇಶ್ ಮಿತ್ತಂತಾಯ ಅವರು 'ಎಂಜಿನಿಯರ್ಸ್ ವಿತೌಟ್ ಬಾರ್ಡರ್ಸ್' ಯೋಜನೆಯ ಮಹತ್ವವನ್ನು ಎತ್ತಿ ತೋರಿಸಿದರು ಮತ್ತು ಡಿ.ಆರ್.ಡಿ.ಒ ಸಹಯೋಗದೊಂದಿಗೆ ಈ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಡಾ|ದಿಲ್ಲಿಬಾಬು ವಿಜಯಕುಮಾರ್ ಅವರು ಡಿ.ಆರ್.ಡಿ.ಒ ಅಭಿವೃದ್ಧಿಪಡಿಸಿದ ಯೋಜನೆಗಳ ಪುಸ್ತಕವನ್ನು ಡಾ|ಐ.ಆರ್.ಮಿತ್ತಂತಾಯ ಅವರಿಗೆ ಹಸ್ತಾಂತರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಮತ್ತು ಸಿಒಇ ಡಾ|ಶ್ರೀನಿವಾಸ ರಾವ್ ಬಿ.ಆರ್., ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್ ನ ಡಿಸಿಒಇ ಡಾ|ಸುಬ್ರಹ್ಮಣ್ಯ ಭಟ್ ಕೆ., ವಿದ್ಯಾರ್ಥಿ ಕಲ್ಯಾಣ ಡೀನ್ ಡಾ|ನರಸಿಂಹ ಬೈಲ್ಕೆರೆ ಉಪಸ್ಥಿತರಿದ್ದರು.
ವಿಚಾರ ಸಂಕಿರಣದ ಸಂಯೋಜಕ ಡಾ|ಗ್ರೈನಲ್ ಡಿ'ಮೆಲ್ಲೋ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ|ಶ್ರೀನಿವಾಸ ಪೈ ಪಿ ವಿಚಾರ ಸಂಕಿರಣದ ಅವಲೋಕನ ನೀಡಿದರು. ವಿಚಾರ ಸಂಕಿರಣದ ಸಂಚಾಲಕ ಭಾಸ್ಕರ ಪಿ.ಆಚಾರ್ ವಂದಿಸಿದರು. ಸಂಚಾಲಕ ವಿಕಾಸ್ ಮರಕಿಣಿ ಕಾರ್ಯಕ್ರಮ ಸಂಯೋಜಿಸಿದರು.
ಡಿ.ಆರ್.ಡಿ.ಒ, ಎನ್ಐಟಿ, ರಕ್ಷಣಾ ಮತ್ತು ಖಾಸಗಿ ಸಂಸ್ಥೆಗಳ ತಜ್ಞರು ಎರಡು ದಿನಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ವಿಚಾರ ಸಂಕಿರಣದಲ್ಲಿ ವಿವಿಧ ಸಂಸ್ಥೆಗಳ ಹತ್ತು ಸ್ಪರ್ಧಿಗಳು ತಮ್ಮ ಪೋಸ್ಟರ್ ಗಳನ್ನು ಪ್ರಸ್ತುತಪಡಿಸಿದರು. ಈ ವಿಚಾರ ಸಂಕಿರಣದಲ್ಲಿ 35 ಪ್ರತಿನಿಧಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ