‘ತಾರಾ’ ಭಾರತೀಯ ಸಮಾಜದ ಹೆಣ್ಣಿನ ಬಿಂಬ: ಡಾ.ವಿಷ್ಣು ಮೂರ್ತಿ ಪ್ರಭು

Upayuktha
0




ವಿದ್ಯಾಗಿರಿ : ಪಿತೃ  ಪ್ರಧಾನ ಸಮಾಜವು ಮಹಿಳೆಯನ್ನು ಹೇಗೆ ಬಿಂಬಿಸಿದೆ  ಎನ್ನುವುದೇ ‘ತಾರಾ’ ನಾಟಕದ ಅಂತಸತ್ವ ಎಂದು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಮೂರ್ತಿ ಪ್ರಭು ಹೇಳಿದರು. 



ಅವರು ಆಳ್ವಾಸ್ ಕಾಲೇಜು ಪದವಿ ಇಂಗ್ಲಿಷ್ ವಿಭಾಗವು ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಮಹೇಶ್ ದತ್ತಣಿ ಅವರ ಕೃತಿ ‘ತಾರಾ’ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು. 



ಸಾಂಪ್ರದಾಯಿಕ ಸಮಾಜವು ಪುರಷನೇ ಎಲ್ಲದಕ್ಕೂ ಆಧಾರ. ಹೆಣ್ಣು ಪರಾವಲಂಬಿ ಎಂಬಂತೆ ಬದುಕನ್ನು ರೂಪಿಸಿತ್ತು. ಆದರೆ, ಕೈಗಾರೀಕರಣದ ಬಳಿಕ ಮಹಿಳೆಗೆ  ತನ್ನ ಸಾಮಥ್ರ್ಯ ಪ್ರದರ್ಶನದ ಜೊತೆ ಕುಟುಂಬ ಹಾಗೂ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಯಿತು. ಮಹೇಶ್ ದತ್ತಣಿ ಅವರು ‘ತಾರಾ’ ಕೃತಿ ಮೂಲಕ ಭಾರತೀಯ ಸಮಕಾಲೀನ ಸಮಾಜದಲ್ಲಿನ ಲಿಂಗ ತಾರತಮ್ಯದ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ ಎಂದರು. 



ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಕಾಲೇಜು ಪದವಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ವನಿತಾ ಪ್ರಭು, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಚ್ಛೇಂದ್ರ ಬಿ., ಸಹಾಯಕ ಪ್ರಾಧ್ಯಾಪಕಿ ಸುರೇಖಾ ಬಂಗೇರ ಹಾಗೂ ಶ್ರೇಯಸ್ವಿ ಇದ್ದರು.  ವಿದ್ಯಾರ್ಥಿನಿ ಸುಮಿತ್ರಾ ಅತಿಥಿಗಳನ್ನು ಪರಿಚಯಿಸಿ, ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಅಲ್ಮಾಸ್ ಸ್ವಾಗತಿಸಿ, ಪ್ರಣಮ್ಯ ವಂದಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top