ವಿದ್ಯಾಗಿರಿ: ‘ತುಳುನಾಡು ಮಾತೃ ಪ್ರಧಾನವಾಗಿದ್ದು, ಇಲ್ಲಿ ಹೆಣ್ಣು ಮತ್ತು ಮಣ್ಣಿಗೆ ಹೆಚ್ಚಿನ ಗೌರವ ಇದೆ’ ಎಂದು ಸಾಹಿತಿ ಹಾಗೂ ಸಂಶೋಧಕರಾದ ಡಾ.ಇಂದಿರಾ ಹೆಗ್ಗಡೆ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಸಂಸ್ಕøತಿ ಅಧ್ಯಯನ ಕೇಂದ್ರ ಹಮ್ಮಿಕೊಂಡ ‘ಸಂಸ್ಕøತಿ ಚಿಂತನ ಕಾರ್ಯಕ್ರಮ’ದಲ್ಲಿ ಅವರು ‘ಆದಿ ಆಲಡೆಗಳು’ ಕುರಿತು ಮಾತನಾಡಿ ತುಳುನಾಡು ಹೊರತು ಪಡಿಸಿದರೆ, ಅಸ್ಸಾಂ ಹಾಗೂ ಕೇರಳ ರಾಜ್ಯದಲ್ಲಿ ನಾವು ಮಾತೃಪ್ರಧಾನ ಸಂಸ್ಕøತಿಯನ್ನು ಕಾಣಬಹುದಾಗಿದೆ. ಯಾವುದೇ ಆಚರಣೆ ಮಾಡುವ ಮೊದಲು, ಅದರ ಆಶಯ ಹಾಗೂ ಅಂತಸತ್ವ ಅರಿತುಕೊಳ್ಳಬೇಕು. ಕುರುಡಾಗಿ ಪಾಲಿಸಬಾರದು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಧರ್ಮಗಳ ಕನ್ನಡಕ ಧರಿಸಿಕೊಂಡು ಪ್ರಪಂಚವನ್ನು ನೋಡುವ ಬದಲು ಬರಿಕಣ್ಣಿನಿಂದ ನೋಡಬೇಕು. ಸಮಾಜ ಉತ್ತಮವಾಗಿ ಕಾಣುತ್ತದೆ. ಬದುಕು ಉನ್ನತಿ ಸಾಧಿಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕಿ ಡಾ.ಸುಧಾರಾಣಿ, ಸಂವಾದ ನಡೆಸಿಕೊಟ್ಟರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಆಳ್ವಾಸ್ ತುಳು ಸಂಸ್ಕøತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿದರು. ಸ್ಪರ್ಶಾ ಪಂಜಿಕಲ್ಲು ಕಾರ್ಯಕ್ರಮ ನಿರೂಪಿಸಿದರು. ಋತಿಕ್ ಜೆ. ಕುಂದರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ