ಉಜಿರೆ: ಸ್ವಚ್ಛತೆ ಆಧ್ಯಾತ್ಮಿಕ ಬೆಳವಣಿಗೆಯ ಪ್ರಮುಖ ಅಂಶ. ಶುಚಿತ್ವವಿರುವುದು ಕೇವಲ ದೇಹದ ಬಗ್ಗೆಯಲ್ಲ. ಅದು ನಿಮ್ಮ ಸುತ್ತಲಿನ ಪರಿಸರದ ಬಗ್ಗೆಯೂ ಹೌದು ಮಾತ್ರವಲ್ಲ, ಮನಸ್ಸು, ಮಾತಿನ ಮೂಲಕ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಎಂದು ಶ್ರೀ ರತ್ನಮಾನಸ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಯತೀಶ್ ಕೆ ಇವರು ಹೇಳಿದರು.
ಶ್ರೀ ಧ.ಮಂ. ಮಹಿಳಾ ಐಟಿಐಯಲ್ಲಿ ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರತ್ನಮಾನಸ ವಿದ್ಯಾರ್ಥಿಗಳ ದಿನಚರಿ ಮತ್ತು ಅದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸ್ವಚ್ಚತೆ ಮತ್ತು ಜೀವನ ಶಿಕ್ಷಣವನ್ನು ಕಲಿಸುವುದರ ಜೊತೆಗೆ ಬದ್ದತೆ ಮುಖ್ಯ ಬದ್ದತೆ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ. ಆಗ ಸಮಾಜದಲ್ಲಿ ಉತ್ತಮ ಸ್ಥಾನ ಗೌರವ ಪ್ರಾಪ್ತವಾಗುತ್ತದೆ. ಈ ರೀತಿ ಸಮಾಜದಲ್ಲಿ ಉತ್ತಮ ಹೆಸರು ಪಡೆದುಕೊಂಡಿರುವ ರತ್ನಮಾನಸದ ಅನೇಕ ರತ್ನಗಳ ಹೆಸರನ್ನು ಉದಾಹರಣೆಯಾಗಿ ನೀಡಿದರು. ಇವೆಲ್ಲ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಸಹಕಾರ ನೀಡುತ್ತಿರುವ ಪೂಜ್ಯ ಖಾವಂದರು ಮತ್ತು ಡಾ.ಹೇಮಾವತಿ ಹೆಗ್ಗಡೆಯವರ ಬೆಂಬಲ ಅವರ್ಣನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಶ್ರೀಮತಿ ಸಂಧ್ಯಾ ಇವರು ಸ್ವಚ್ಚತೆ ಪಾಲನೆ ಮಾಡುವ ಬಗ್ಗೆ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಕು. ಶಾಲಿನಿ ಡಿ ಇವರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ