ಬೆಂಗಳೂರು: ಭಾರತೀಯ ವಿಜ್ಞಾನ ಮಂದಿರದ ಪಕ್ಕದಲ್ಲಿರುವ ಮಲ್ಲೇಶ್ವರಂ ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ 15 ರಿಂದ 24ರ ಶರನ್ನವರಾತ್ರಿಯ ಕಾರ್ಯಕ್ರಮಗಳು ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ ಅಮ್ಮನವರಿಗೆ ವಿವಿಧ ರೀತಿಯ ಅಲಂಕಾರಗಳು, ವಿವಿಧ ಹೋಮಗಳು ಮಹಾ ಮಂಗಳಾರತಿ ಜರುಗುತ್ತವೆ. (ಪ್ರತಿದಿನ ಸಂಜೆ 6-30ಕ್ಕೆ) ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಕ್ಟೋಬರ್ 16ರಂದು ಚಂದ್ರಪ್ರಭಾ, ನಿರ್ಮಲಾ ಮತ್ತು ಸಂಗಡಿಗರಿಂದ ಹಾಡುಗಾರಿಕೆ, ಅಕ್ಟೋಬರ್ 17ರಂದು "ಹರಿನಾಮ ಸಂಕೀರ್ತನೆ" ನಡೆಯಲಿದ್ದು, ರಮ್ಯಾ ಸುಧೀರ್ (ಗಾಯನ), ಅಮಿತ್ ಶರ್ಮಾ (ಕೀ-ಬೋರ್ಡ್), ಶ್ರೀ ಸರ್ವೋತ್ತಮ (ತಬಲಾ). ಅಕ್ಟೋಬರ್ 18ರಂದು ವಿ ಶರಣ್ ಗುಜ್ಜಾರ್ ರವರ ಶಿಷ್ಯವೃಂದದಿAದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 19ರಂದು ಭಕ್ತಿ ಗೀತೆಗಳ ಗಾಯನವು ದೇವಸ್ಥಾನದ ಲಲಿತಕಲಾ ಕೇಂದ್ರದ ಮಕ್ಕಳಿಂದ (ನಿರ್ದೇಶನ: ಶ್ರೀದೇವಿ ಗರ್ತಿಕೆರೆ). ಅಕ್ಟೋಬರ್ 20 ರಂದು ಸಂಗೀತ ಸಂಭ್ರಮವು ಕಲಾ ಸೌರಭ ವಿದ್ಯಾರ್ಥಿಗಳಿಂದ (ನಿರ್ದೇಶನ: ಗುರು ಶ್ರೀ ದತ್ತಾದ್ರಿ. ಅಕ್ಟೋಬರ್ 21 ರಂದು ವೀಣಾ- ವಯೋಲಿನ್ ವಾದನವು ರಾಧಿಕಾ ವೆಂಕಟ್ರಮಣ ಮತ್ತು ಶಿಷ್ಯವೃಂದದಿಂದ ನಡೆಯಲಿದೆ.
ಅಕ್ಟೋಬರ್ 22ರಂದು ದೇವಸ್ಥಾನದ ಲಲಿತಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. (ನಿರ್ದೇಶನ: ರೂಪಾ ಹೇಮಂತ್). ಅಕ್ಟೋಬರ್ 23ರಂದು "ದೇವಿ ಮಹಾತ್ಮೆ" ಹರಿಕಥೆಯು ಶ್ರೀ ಮುನಿಕೋಟಿ ಮತ್ತು ಸಂಗಡಿಗರಿಂದ ನಡೆಯಲಿದೆ, ಅಕ್ಟೋಬರ್ 24 ರಂದು ಶ್ರೀ ಗಣೇಶ ಮತ್ತು ಶ್ರೀ ಅಮ್ಮನವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ